ಸಂವಿಧಾನದ ಜಾಗೃತಿಯ ಅಗತ್ಯತೆ ಇಂದಿನ ಪೀಳಿಗೆಗೆ ಅತ್ಯಗತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಜಿ.ಬಿ.ಪವನ್ ತಿಳಿಸಿದರು.
ಚಿಕ್ಕಮಗಳೂರು ನಗರದ ಜಿಲ್ಲಾ ಕನ್ನಡ ಭವನದಲ್ಲಿ 75ನೇ ಗಣರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭಾರತದ ಸಂವಿಧಾನ ಸರ್ವ ಶ್ರೇಷ್ಠ ಸಂವಿಧಾನವಾಗಿದ್ದು ಇದನ್ನು ದೇಶದ ಎಲ್ಲಾ ಧರ್ಮೀಯರು ತಮ್ಮ ಮೊದಲ ಪವಿತ್ರ ಗ್ರಂಥವೆಂದು ಭಾವಿಸಿ ನೆಡೆದರೆ ಉತ್ತಮ ಮತ್ತು ಸಾಮರಸ್ಯದ ಭಾರತ ನಮ್ಮದಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಬುದ್ದ ಬಸವ ಅಂಬೇಡ್ಕರ್ ಮತ್ತು ಕುವೆಂಪುರವರ ಆಶಯಗಳು ಮತ್ತು ವಿಚಾರಧಾರೆಗಳೇ ಸಂವಿಧಾನವಾಗಿದ್ದು ಇವುಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡವ ಗುರುತರವಾದ ಜವಾಬ್ದಾರಿ ಪೋಷಕರು ಮತ್ತು ಎಲ್ಲಾ ರಾಜಕೀಯ ಮತ್ತು ರಾಜಕೀಯೇತರ ಸಂಘಟನೆಗಳ ಮೇಲಿದೆ ಎಂದರು.
Republic Day 1947 ರಲ್ಲಿ ಸ್ವಾತಂತ್ರ‍್ಯ ಬಂದು 1950ರಲ್ಲಿ ನಮ್ಮದೇ ಆದ ವಿಶ್ವದಲ್ಲೇ ಅತೀ ಅದ್ಬುತವಾದ ಸಂವಿಧಾನವನ್ನು ಸ್ವೀಕರಿಸಿಕೊಂಡಿದ್ದರೂ ಕೂಡ ನಮ್ಮಗಳ ಸ್ವಾರ್ಥದಿಂದ ರಾಷ್ಟçದಲ್ಲಿ ಅದರ ಅನುಸರಿಸದಿರುವುದು ಶೋಚನೀಯ ಮುಂದಿನ ಪೀಳಿಗೆಗಳನ್ನು ಈ ಬಗ್ಗೆ ಎಚ್ಚರಿಸುವ ಕರ್ತವ್ಯ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಹೆಚ್. ಸೋಮಶೇಖರ್ ಮಾತನಾಡಿ ಸಂವಿಧಾನದ ಅನುಸರಣೆಯೇ ನಮ್ಮ ಜೀವನದ ಆದ್ಯತೆ ಆಗಬೇಕೆಂದರು. ಈ ಸಂದರ್ಭದಲ್ಲಿ ನಗರ ಕ.ಸಾ.ಪ.ನಗರ ಅಧ್ಯಕ್ಷ ಸಚಿನ್ ಸಿಂಗ್, ಮೇಕನಗದ್ದೆ ಲಕ್ಷ್ಮಣ್‌ಗೌಡ, ಈಶ್ವರಪ್ಪ ಹೊಸಳ್ಳಿ, ನಂದಕುಮಾರ್, ಪ್ರತಿಬಾ ವೀರೇಶ್ ಕೌಲಗಿ, ರವಿ, ವೀಣಾ ಅರವಿಂದ್, ಜಯಂತಿ ಉಪಸ್ಥಿತರಿದ್ದರು.