Sri Banashankari Temple ಶ್ರೀ ಬನದ ಹುಣ್ಣಿಮೆ ಪ್ರಯುಕ್ತ ನಗರ ದೇವಾಂಗ ಸಮಾಜದ ವತಿಯಿಂದ ಬಾಪೂಜಿನಗರ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಮಾತಾ ಬನಶಂಕರಿ ಅಮ್ಮನವರ ರಾಜಬೀದಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಜರುಗಿತು.
ಬನದ ಹುಣ್ಣಿಮೆ ಪ್ರಯುಕ್ತ ಶ್ರೀ ಮಾತಾ ಬನಶಂಕರಿ ಅಮ್ಮನವರಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಿ ರಥೋತ್ಸವ ಜರುಗಿತು ಅಸಂಖ್ಯಾತ ಭಕ್ತರು ದೇವರ ದರ್ಶನ ಪಡೆದರು. ರಥೋತ್ಸವ ನಂತರ ಭಕ್ತರಿಗೆ ತೀರ್ಥ ಪ್ರಸಾದ ಅನ್ನಸಂತರ್ಪಣೆ ವಿತರಿಸಲಾಯಿತು.
ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಬೆಳಗ್ಗೆ 8ರಿಂದ 108 ಲೀ ಕ್ಷಿರಾಭಿಷೇಕ, 108 ಎಳನೀರು ಅಭಿಷೇಕ, ದುರ್ಗಾ ಹೋಮ, ಸುಹಾಸಿನಿ ಪೂಜೆ ನಡೆಸಲಾಯಿತು. ನಂತರ ಅಮ್ಮನವರ ರಥೋತ್ಸವವು ಮಂಗಳವಾದ್ಯ ಹಾಗೂ ವಿವಿಧ ಕಲಾತಂಡಗಳೊಂದಿಗೆ ಜರುಗಿತು. ಇದೇ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯೆ ಸುರೇಖಾ ಮುರಳೀಧರ್ ಅವರು ಮಹಾದ್ವಾರದ ಉದ್ಘಾಟನೆ ನೆರವೇರಿಸಿದರು.
Sri Banashankari Temple ನಗರ ದೇವಾಂಗ ಸಮಾಜದ ಅಧ್ಯಕ್ಷರು ಬಿ.ಸತೀಶ್ ಕುಮಾರ್, ಉಪಾಧ್ಯಕ್ಷರಾದ ಯು.ರಾಮಪ್ಪ, ಕೆ.ಜಿ.ಲೋಕೇಶ್, ಕಾರ್ಯದರ್ಶಿ ಡಿ.ಪರಶುರಾಮಪ್ಪ, ಸಹ ಕಾರ್ಯದರ್ಶಿ ಬಿ.ಸಿ.ವೆಂಕಟೇಶ್, ಖಜಾಂಚಿ ಟಿ.ಆರ್.ಮಂಜುನಾಥ್, ಮಲೆನಾಡು ದೇವಾಂಗ ಸಂಘದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ, ದೇವರ ದಾಸಿಮಯ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಭೋಜರಾಜ್, ಬನಶಂಕರಿ ಮಹಿಳಾ ಸಂಘಧ ಅಧ್ಯಕ್ಷೆ ಜಯಮ್ಮ ಚಂದ್ರಶೆಟ್ಟಿ ಹಾಗೂ ನಗರ ದೇವಾಂಗ ಸಮಾಜದ ಎಲ್ಲ ಪದಾಧಿಕಾರಿಗಳು ನಿರ್ದೇಶಕ ಮಿತ್ರರು ಹಾಗೂ ಸಮಾಜ ವಿವಿಧ ಸಂಘಗಳ ಪದಾಧಿಕಾರಿಗಳು ನಿರ್ದೇಶಕರು ಉಪಸ್ಥಿತರಿದ್ದರು.