G K Mithun Kumar ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಷ್ಕರ್ ಮೊಹಲ್ಲಾ ವಾಸಿ ಶ್ರೀ ಅನಿಸೂರ್ ಇಸ್ಲಾಂ,ಅವರ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಪಶ್ಚಿಮ ಬಂಗಾಳದ ವಾಸಿಯಾದ ಅದಿತೋ ಮಾಜಿ ಎಂಬುವವನು ಜ.4ರಂದು ಸದರಿ ಅಂಗಡಿಯಲ್ಲಿ * ಬಂಗಾರವನ್ನು ಕಳ್ಳತನ ಮಾಡಿ, ಪರಾರಿಯಾಗಿದ್ದನು.
ಬಂಗಾರ ಅಂಗಡಿ ಮಾಲೀಕರ ದೂರಿನ ಮೇರೆಗೆ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುನ್ನೆ ಸಂಖ್ಯೆ 0001/2024 ಕಲಂ 381 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಮಿಥುನ್ ಕುಮಾರ್ ಜಿ ಕೆ ಅವರ ತಂಡ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ತನಿಖಾ ತಂಡ ಜ. 9ರಂದು ಪ್ರಕರಣದ ಆರೋಪಿತನಾದ ಆದಿತ್ಯಾ 37 ವರ್ಷ, ಖಜಿರ್ದೋ ಗ್ರಾಮ, ಜೈಪೂರ್ ಥಾಣಾ, ಹೌರಾ ಜಿಲ್ಲೆ ಪಶ್ಚಿಮ ಬಂಗಾಳ ರಾಜ್ಯ ಈತನನ್ನು ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತದಲ್ಲಿ ದಸ್ತಗಿರಿ ಮಾಡಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ,ನಂತರ ಜ.17ರಂದು ಪುನಾಃ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿ ಯಿಂದ ಕೊಲ್ಕತ್ತಾದಲ್ಲಿ ಅಂದಾಜು ಮೌಲ್ಯ 2,70,000/- ರೂಗಳ 45 ಗ್ರಾಂತೂಕದ ಬಂಗಾರದ ಆಭರಣ, ಹೈದರಾಬಾದ್ ಮತ್ತು ಸಿಕಂದರಬಾದ್ ನಲ್ಲಿ ಅಂದಾಜು ಮೌಲ್ಯ 5,75,000/- ರೂಗಳ ಒಟ್ಟು 85 ಗ್ರಾಂ ಬಂಗಾರ ಸೇರಿ ಒಟ್ಟು ಅಂದಾಜು ಮೌಲ್ಯ 8,45,000/- ರೂಗಳ 130 ಗ್ರಾಂ ತೂಕದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.
G K Mithun Kumar ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.