Muzrai Temple ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಕಲ್ಯಾಣ ಕೋದಂಡರಾಮ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಹಿರೇಮಗಳೂರು ಕಣ್ಣನ್ ಅವರಿಗೆ ಸರ್ಕಾರದಿಂದ ನೀಡಲಾಗುತ್ತಿದ್ದ ವೇತನವನ್ನು ಹಿಂದಿರುಗಿಸುವಂತೆ ಇತ್ತೀಚೆಗೆ ಅಲ್ಲಿನ ತಹಶೀಲ್ದಾರ್ ಸುಮಂತ್ ಅವರು ನೋಟಿಸ್ ಜಾರಿಗೊಳಿಸಿದ್ದರು. 10 ವರ್ಷಗಳ ವೇತನ ಹಿಂದಿರುಗಿಸುವಂತೆ ಸೂಚಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಕೂಡಲೇ ಎಚ್ಚೆತ್ತ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ನೋಟಿಸ್ ಹಿಂಪಡೆಯುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.
2013-14 ನೇ ಸಾಲಿನಿಂದ 2016-17ನೇ ಸಾಲಿನ ತನಕ ತಿಂಗಳಿಗೆ 2000 ದಂತೆ ವರ್ಷಕ್ಕೆ 24,000 ಪಾವತಿಸಬೇಕಿತ್ತು. 2017-18 ನೇ ಸಾಲಿನಿಂದ 2021-22ನೇ ಸಾಲಿನ ತನಕ ತಿಂಗಳಿಗೆ 4, ವರ್ಷಕ್ಕೆ 48000 ಪಾವತಿಸಬೇಕಿತ್ತು. ಆದರೆ, ವರ್ಷಕ್ಕೆ 90 ವರ್ಷಗಳಿಗೆ ಒಟ್ಟು 8.10ರೂ. ಲಕ್ಷ ಪಾವತಿಸ ಲಾಗಿದೆ. ತಮ್ಮ ಖಾತೆಗೆ ಜಮೆ ಆಗಿರುವ 4.74 ಲಕ್ಷ ಹಿಂದಿರುಗಿಸಬೇಕು ಎಂದು ನೋಟಿಸ್ ನಲ್ಲಿ ತಹಶೀಲ್ದಾರರು ವಿವರಿಸಿದ್ದಾರೆ.
ಕೋದಂಡ ರಾಮಚಂದ್ರ ದೇಗುಲ ಸಿ ವರ್ಗಕ್ಕೆ ಸೇರಿದೆ. 9 ವರ್ಷಗಳ ಅವಧಿಯಲ್ಲಿ ಹುಂಡಿ ಹಣ 5.98 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಈ ಅವಧಿಯಲ್ಲಿ ವಿದ್ಯುತ್ ಶುಲ್ಕ, ರಥೋತ್ಸವ ಖರ್ಚು, ಅರ್ಚಕರ ವೇತನ ಸೇರಿ ಒಟ್ಟಾರೆ 12.96 ಅಕ್ಷ ರೂಪಾಯಿ ವೆಚ್ಚವಾಗಿದೆ ಎಂಬುದನ್ನ ನೋಟಿಸ್ ನಲ್ಲಿ ದಾಖಲಿಸಲಾಗಿದೆ.
Muzrai Temple ಈ ಕುರಿತು ಪ್ರತಿಕ್ರಿಯಿಸಿರುವ ಹಿರೇಮಗಳೂರು ಕಣ್ಣನ್ ಅವರು ದೇವಸ್ಥಾನದ ಆದಾಯ ಕಡಿಮೆ ಇದೆ ಎಂಬ ಕಾರಣಕ್ಕೆ ಈ ಹಿಂದೆ ಪಾವತಿ ಆಗಿರುವ ತಸ್ತಿಕ್ ಮೊತ್ತವನ್ನು ಹಿಂದಿರುಗಿಸುವಂತೆ ನೋಟಿಸ್ ನೀಡಿದ್ದಾರೆ. ಆದಾಯ ಕಡಿಮೆ ಇದ್ದ ಕಾರಣಕ್ಕೆ ಹಣ ವಾಪಸ್ ಕೇಳಿದರೆ ಅರ್ಚಕರ ಮನಸ್ಥಿತಿ ಏನಾಗಲಿದೆ ಎಂದು ಪ್ರಶ್ನಿಸಿದ್ದಾರೆ.