My School ಒತ್ತಡದ ಜೀವನ ಮತ್ತು ಆಹಾರ ಪದ್ಧತಿ ಸರಿಯಾಗಿಲ್ಲದ ಕಾರಣ ಇಂದು ಹದಿ ಹರೆಯದವರು ಹೃದಯಕ್ಕೆ ಸಂಬoಧಿಸಿದ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಿಮ್ಸ್ನ ಕಾರ್ಡಿಯಾಲಜಿ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ಮೂರ್ತಿ ವಿಷಾಧಿಸಿದರು.
ಶಿವಮೊಗ್ಗನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಅಚ್ಚುತ್ಥರಾವ್ ಲೇಔಟ್‌ನ ಮೈಸ್ಕೂಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಯುವಕರಲ್ಲಿ ಹೃದಯ ಸ್ತಂಭನದoತಹ ಖಾಯಿಲೆಗಳು ಸಂಭವಿಸುತ್ತಿರುವುದು ಆತಂಕದ ವಿಷಯ ಎಂದರು.
ಹೆಚ್ಚುತ್ತಿರುವ ಯುವಕರ ಹೃದಯ ಖಾಯಿಲೆಗಳಿಗೆ ವಂಶ ಪಾರಂಪರೆ ಕೂಡ ಇರಬಹುದು. ಆದರೆ ಇಂದಿನ ಒತ್ತಡದ ಜೀವನದಲ್ಲಿ ವಿದ್ಯಾರ್ಥಿಗಳು ಓದಿನ ಜೊತೆ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕಾಗಿದೆ. ಮುಂಜಾನೆ ಬೇಗ ಏಳುವುದು, ಕ್ರೀಡಾ ಕೂಟಗಳಲ್ಲಿ ಭಾಗವಹಿಸುವುದು, ದುಶ್ಚಟಗಳಿಂದ ದೂರ ಇರುವುದು. ಜೊತೆಗೆ ಮುಖ್ಯವಾಗಿ ಒಳ್ಳೆಯ ಮನಸ್ಥಿತಿಯನ್ನು ಹೊಂದುವುದರಿoದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿ ಸಿದ್ದ ಆಕಾಶವಾಣಿ ಕಲಾವಿದೆ ಶಾಂತಾ ಆನಂದ್ ಅವರು ಮಾತನಾಡಿ, ಒಳ್ಳೆಯ ಹೃದಯ, ಪುಠಾಣಿ ಹೃದಯ, ಪುಠಾಣಿ ಕಂದಮ್ಮಗಳ ಮುಗ್ದ ಮನಸ್ಸನ್ನು ಭಗವಂತ ಮಾತ್ರ ಅರಿತಿರುತ್ತಾನೆ. ಮೈ ಸ್ಕೂಲ್ ಶಾಲೆಯ ಈ ಒಂದು ಹೃದಯದ ಕಾನ್ಸೆಪ್ಟ್ ನೊಂದಿಗೆ ವಾರ್ಷಿಕೋತ್ಸವ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಷಯ ಎಂದರು.
ಪೋಷಕರು ಮುದ್ದು ಮಕ್ಕಳನ್ನು ಅಜ್ಜ ಅಜ್ಜಿಯರೊಂದಿಗೆ ಬೆರೆಯಲು ಬಿಡಬೇಕು. ಇಂದು ಪೋಷಕರು ಒಂದು ಕಡೆ, ಅಜ್ಜ ಅಜ್ಜಿಯರು ಒಂದುಕಡೆ, ಮಕ್ಕಳು ಒಂದುಕಡೆ ಯಾಗಿದೆ. ಒಂದುಗೂಡಿ ಬಾಳಲು ಸಮಯವೇ ಇಲ್ಲದಂತಾಗಿದೆ. ಮಕ್ಕಳ ಮನಸ್ಸು ಸೂಕ್ಷ್ಮ ವಾಗಿದ್ದು, ತಾಯಿ ಮನೆಯಲ್ಲಿ ಶಿಕ್ಷಕಿಯಾಗಿ ಒಂದು ಹಂತದವರೆಗೆ ಉತ್ತಮ ಸಂಸ್ಕೃತಿ ಕಲಿಸಲು ಸಾಧ್ಯವಿದೆ ಎಂದರು.
My School ಪುಟ್ಟ ಹೃದಯ ಪುಠಾಣಿ ಮಿಡಿತ, ಸೂಕ್ಷ್ಮ ಕಣ್ಣುಗಳು ಆರೋಗ್ಯದಿಂದ ಇರಬೇಕು ಎಂದರೆ ಮೊಬೈಲ್‌ನಿಂದ ದೂರ ಇರಿಸಿ. ಮೊದಲು ಪೋಷಕರಾದ ನೀವುಗಳು ಮಕ್ಕಳ ಎದುರು ಮೊಬೈಲ್ ಬಳಸುವುದನ್ನ ನಿಲ್ಲಿಸಿ, ಮಕ್ಕಳಿಗೆ ಗುರಿ, ಗುರು ಮತ್ತು ಜೀವನ ರೂಪಿಸಿಕೊಳ್ಳುವ ವಿಷಯ ಗಳನ್ನು ಪರಸ್ಕರ ಹಂಚಿಕೊಳ್ಳುತ್ತಿರ ಬೇಕು. ಮಹಾನ್ ವ್ಯಕ್ತಿಗಳ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ತಿಳಿಸಬೇಕು. ಆಗ ಮಾತ್ರ ಮುದ್ದು ಮಕ್ಕಳು ನಾಳೆ ಧಿವ್ಯ ವ್ಯಕ್ತಿಗಳಾಗಿ ಸಾಧಕರಾಗಿ ಬೆಳೆಯಲು ಸಾಧ್ಯ ಎಂದರು.
ಮೈಸ್ಕೂಲ್ ಅಧ್ಯಕ್ಷ ಪ್ರದೀಪ್ ಕೆ.ಬಿ. ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಮುಖರಾದ ವಿಜಯ ಕುಮಾರ್ ಆರ್. ಸುರೇಶ್ ಕೆ.ಎಸ್., ಗಿರೀಶ್, ಬಾಬಣ್ಣ, ರಾಜೀವ್ ಹಾಗೂ ಶಿಕ್ಷಕರು ಸಿಬ್ಬಂಧಿಯವರು ಉಪಸ್ಥಿತರಿದ್ದರು. ಶಾಲಾ ಮಕ್ಕಳ ಕಾರ್ಯಕ್ರಮ ಅತ್ಯಂತ ವೈಭವದಿಂದ ನೆರವೇರಿತು.