Ram mandir ಅಯೋಧ್ಯೆಯಲ್ಲಿ ಶ್ರೀ ರಾಮಲಾಲ್ಲ ಪ್ರಾಣ ಪ್ರತಿಷ್ಟಾಪನಾ ಅಂಗವಾಗಿ ಹಿರೇ ಮಗಳೂರು ಶ್ರೀ ಕೋದಂಡರಾಮಚoದ್ರ ದೇವಾಲಯದಲ್ಲಿ ದಲಿತ ಹಿತರಕ್ಷಣಾ ವೇದಿಕೆಯ ಮುಖಂಡರುಗಳು ಸೋಮವಾರ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ಶ್ರೀರಾಮನ ಆರ್ಶೀವಾದ ಪಡೆದುಕೊಂಡರು.
ಬಳಿಕ ಮಾತನಾಡಿದ ವೇದಿಕೆ ಮುಖಂಡ ಕುರುವಂಗಿ ವೆಂಕಟೇಶ್ ಇಡೀ ದೇಶವೇ ಶ್ರೀರಾಮ ಮಂದಿರ ಲೋಕಾರ್ಪಣೆ ದೃಶ್ಯಕಂಡು ಪುನೀತರಾಗಿದ್ದಾರೆ. ಅದಲ್ಲದೇ ಖುದ್ದು ಪ್ರಧಾನ ಮಂತ್ರಿ ಮೋದಿಯವರು ಕೂಡಾ ಅತ್ಯಂತ ಶ್ರದ್ದಾಭಕ್ತಿಯಿಂದ ದೇವಾಲಯದ ಪ್ರಾಣ ಪ್ರತಿಷ್ಟೆಯಲ್ಲಿ ನಿರತರಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಶ್ರೀರಾಮನು ದೇವಾಲಯ ಸೇರುವ ಸುದಿನವಾಗಿದೆ. ಪ್ರತಿಯೊಬ್ಬರು ಸ್ವಾರ್ಥ, ಅಸೂಯೆ ತೊಲಗಿಸಲು ಶ್ರೀರಾಮಜಪದಲ್ಲಿ ನಿರತರಾದರೆ ಮನಸ್ಸು ಶುದ್ಧವಾಗುವ ಜೊತೆಗೆ ಬದುಕಿನಲ್ಲಿ ಶಾಂತಿ, ಸಂಮೃದ್ದಿ ನೆಲೆಯುರಲಿದೆ. ಹೀಗಾಗಿ ಪ್ರತಿ ಮನ, ಮನಸ್ಸುಗಳಲ್ಲಿ ಶ್ರೀರಾಮನ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರುಗಳಾದ ಕೇಶವ, ರೇವನಾಥ್, ಹಂಪಯ್ಯ, ಹೆಚ್.ಎಸ್.ಪುಟ್ಟ ಸ್ವಾಮಿ, ನರಸಿಂಹಮೂರ್ತಿ, ಧನಂಜಯ್, ರವಿಕುಮಾರ್, ಮಂಜುನಾಥ್, ನಂದನ್, ನಂಜುoಡಪ್ಪ ಮತ್ತಿತರರು ಹಾಜರಿದ್ದರು.
ಚಿಕ್ಕಮಗಳೂರು, ನಗರದ ಕೆ.ಎಂ.ರಸ್ತೆ ಸಮೀಪದ ರೇಣುಕಾ ಕಾಂಪ್ಲೆಕ್ಸ್ ಅಂಗಡಿ ಮುಂಗಟ್ಟುದಾರರು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸಾರ್ವಜನಿಕರಿಗೆ ಪಾನಕ ಮತ್ತು ಕೋಸಂಬರಿಯನ್ನು ಸೋಮವಾರ ಹಂಚಿದರು.
ಬಳಿಕ ಮಾತನಾಡಿದ ಮಲ್ಲಿಕಾರ್ಜುನ್ ಶ್ರೀರಾಮನು ನೂರಾರು ವರ್ಷಗಳ ಬಳಿಕ ದೇಗುಲಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಕಾಂಪ್ಲೆಕ್ಸ್ ಅಂಗಡಿ ಮುಂಗಟ್ಟುದಾರರ ಸಹಕಾರದ ಮೂಲಕ ಸುಮಾರು ಎರಡು ಸಾವಿರ ಮಂದಿಗೆ ಪಾನಕ ಮತ್ತು ಕೋಸಂಬರಿ ಹಂಚುವ ವ್ಯವಸ್ಥೆ ಮಾಡಲಾಯಿತು ಎಂದು ತಿಳಿಸಿದರು.
Ram mandir ಈ ಸಂದರ್ಭದಲ್ಲಿ ಅಂಗಡಿ ಮಾಲೀಕರಾದ ಪ್ರಸನ್ನಕುಮಾರ್, ಮಲ್ಲಿಕಾರ್ಜುನ್, ಶರಣಪ್ಪ, ಚನ್ನಬಸಯ್ಯ, ಸುರೇಶ್, ಪ್ರವೀಣ್, ಸಂತೋಷ್, ನಾಗರತ್ನ, ಸಿ.ಹೆಚ್.ಯತೀಶ್, ಓಂಕಾರೇಗೌಡ ಮತ್ತಿತರರಿದ್ದರು.