Thursday, March 19, 2026
Thursday, March 19, 2026

Ram mandir ಅಯೋಧ್ಯೆ ಬಾಲರಾಮ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಹಿರೇಮಗಳೂರಿನಲ್ಲಿ ಸಂಭ್ರಮಾಚರಣೆ

Date:

Ram mandir ಅಯೋಧ್ಯೆಯಲ್ಲಿ ಶ್ರೀ ರಾಮಲಾಲ್ಲ ಪ್ರಾಣ ಪ್ರತಿಷ್ಟಾಪನಾ ಅಂಗವಾಗಿ ಹಿರೇ ಮಗಳೂರು ಶ್ರೀ ಕೋದಂಡರಾಮಚoದ್ರ ದೇವಾಲಯದಲ್ಲಿ ದಲಿತ ಹಿತರಕ್ಷಣಾ ವೇದಿಕೆಯ ಮುಖಂಡರುಗಳು ಸೋಮವಾರ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ಶ್ರೀರಾಮನ ಆರ್ಶೀವಾದ ಪಡೆದುಕೊಂಡರು.

Ram mandir ಬಳಿಕ ಮಾತನಾಡಿದ ವೇದಿಕೆ ಮುಖಂಡ ಕುರುವಂಗಿ ವೆಂಕಟೇಶ್ ಇಡೀ ದೇಶವೇ ಶ್ರೀರಾಮ ಮಂದಿರ ಲೋಕಾರ್ಪಣೆ ದೃಶ್ಯಕಂಡು ಪುನೀತರಾಗಿದ್ದಾರೆ. ಅದಲ್ಲದೇ ಖುದ್ದು ಪ್ರಧಾನ ಮಂತ್ರಿ ಮೋದಿಯವರು ಕೂಡಾ ಅತ್ಯಂತ ಶ್ರದ್ದಾಭಕ್ತಿಯಿಂದ ದೇವಾಲಯದ ಪ್ರಾಣ ಪ್ರತಿಷ್ಟೆಯಲ್ಲಿ ನಿರತರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಶ್ರೀರಾಮನು ದೇವಾಲಯ ಸೇರುವ ಸುದಿನವಾಗಿದೆ. ಪ್ರತಿಯೊಬ್ಬರು ಸ್ವಾರ್ಥ, ಅಸೂಯೆ ತೊಲಗಿಸಲು ಶ್ರೀರಾಮಜಪದಲ್ಲಿ ನಿರತರಾದರೆ ಮನಸ್ಸು ಶುದ್ಧವಾಗುವ ಜೊತೆಗೆ ಬದುಕಿನಲ್ಲಿ ಶಾಂತಿ, ಸಂಮೃದ್ದಿ ನೆಲೆಯುರಲಿದೆ. ಹೀಗಾಗಿ ಪ್ರತಿ ಮನ, ಮನಸ್ಸುಗಳಲ್ಲಿ ಶ್ರೀರಾಮನ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರುಗಳಾದ ಕೇಶವ, ರೇವನಾಥ್, ಹಂಪಯ್ಯ, ಹೆಚ್.ಎಸ್.ಪುಟ್ಟ ಸ್ವಾಮಿ, ನರಸಿಂಹಮೂರ್ತಿ, ಧನಂಜಯ್, ರವಿಕುಮಾರ್, ಮಂಜುನಾಥ್, ನಂದನ್, ನಂಜುoಡಪ್ಪ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...