Saturday, December 6, 2025
Saturday, December 6, 2025

Drinking Water ಕಲುಷಿತ ನೀರು ಸೇವಿಸಬೇಡಿ, ಗುಣಮಟ್ಟದ ನೀರು ಕುಡಿಯಿರಿ-ಶಾರದಾ ಮಾಸ್ತೇಗೌಡ

Date:

Drinking Water ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಅಮೃತವಿದ್ದಂತೆ. ಕಲುಷಿತ ನೀರು ಸೇವಿಸಿ ಆರೋಗ್ಯ ಹೆದಗೆಡಿಸಿಕೊಳ್ಳುವ ಬದಲು ಗುಣಮಟ್ಟದ ನೀರನ್ನು ಸೇವಿಸಿ ಸುಸ್ಥಿರ ಬದುಕು ರೂಪಿಸಿಕೊಳ್ಳಬೇಕು ಎಂದು ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾರದಾ ಮಾಸ್ತೇಗೌಡ ಹೇಳಿದರು.

ಚಿಕ್ಕಮಗಳೂರು, ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮಸ್ಥರು ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸಿ ಕೊಳ್ಳಬೇಕು ಹಾಗೂ ಹೆಚ್ಚು ವ್ಯರ್ಥಗೊಳಿಸದಂತೆ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.

ಸುಮಾರು ಎರಡು ಸಾವಿರ ನೀರನ್ನು ಶೇಖರಿಸುವ ಸಾಮರ್ಥ್ಯವನ್ನು ಘಟಕವು ಹೊಂದಿದ್ದು ಪ್ರತಿನಿತ್ಯವು ಕುಡಿಯುವುದಕ್ಕಾಗಿ ಮಾತ್ರ ನೀರನ್ನು ಬಳಸಿಕೊಳ್ಳಬೇಕು. ಜೊತೆಗೆ ಘಟಕದ ಸುತ್ತಮುತ್ತಲು ಮನೆಯಂತೆ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಬರಗಾಲ ಸಮಸ್ಯೆ ಎದುರಾಗಿ ಕುಡಿಯುವ ನೀರು ಬಹಳಷ್ಟು ಸಮಸ್ಯೆ ಯಾಗಿದೆ. ಸಮಯಕ್ಕೆ ಮಳೆಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರನ್ನು ಪೂರೈಸಲಾಗುತ್ತಿಲ್ಲ. ಆ ನಿಟ್ಟಿನಲ್ಲಿ ಬರಗಾಲದಿಂದ ತತ್ತರಿಸಿರುವ ಜನತೆಗೆ ಗ್ರಾ.ಪಂ.ನಿoದ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಯಶ್ವಂತ್‌ರಾಜ್ ಅರಸ್ ಮಾತನಾಡಿ ಕಲುಷಿತ ಮಿಶ್ರಿತ ನೀರು ಕುಡಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಇದರ ನಿವಾರಣೆಗೆ ಗ್ರಾ.ಪಂ ಅಂತರದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು ನಿವಾಸಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಜನರಿಗೆ ಒದಗಿಸುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು ಎಂದು ಅವರು ಮಾನವನು ಆಹಾರವಿಲ್ಲದೇ ಕೆಲವು ದಿನಗಳ ಕಾಲ ಬದುಕಬಹುದು. ಆದರೆ ಕುಡಿಯುವ ನೀರಿಲ್ಲದೇ ಒಂದು ದಿನವೂ ಬದುಕಲು ಅಸಾಧ್ಯ ಎಂದು ಹೇಳಿದರು.

Drinking Water ಹೊಸಕೋಟೆ ಗ್ರಾಮದಲ್ಲಿ ಬಹುದಿನಗಳಿಂದ ಕುಡಿಯುವ ನೀರು ಘಟಕ ಬೇಡಿಕೆಯಿತ್ತು. ಇದೀಗ ಗ್ರಾ.ಪಂ. ವತಿಯಿಂದ ಘಟಕ ಸ್ಥಾಪಿಸುವ ಮುಖಾಂತರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ. ಹೀಗಾಗಿ ಘಟಕವನ್ನು ಅತ್ಯಂತ ಸ್ವಚ್ಚ ಹಾಗೂ ನೀರನ್ನು ವ್ಯರ್ಥಗೊಳಿಸದಂತೆ ಕ್ರಮ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜೆ.ಎನ್.ಮಂಜೇಗೌಡ, ಸದಸ್ಯ ಮುಳ್ಳೇಗೌಡ, ಗ್ರಾಮಸ್ಥರಾದ ಪದ್ಮರಾಜ್, ಕೌಶಿಕ್‌ರಾಜ್, ಲಿಂಗಮೂರ್ತಿ, ಪಟೇಲ್‌ಜಯಣ್ಣ, ಯತೀಶ್, ಜಯರಾಮ್, ಉಮೇಶ್, ಶಿವರಾಜ್, ರಮೇಶ್, ಆನಂದ್, ಚನ್ನಯ್ಯ, ಆನಂದಯ್ಯ, ಯತೀಶ್, ವಾಟರ್‌ಮ್ಯಾನ್ ಉಮೇಶ್, ಮಾಸ್ತೇಗೌಡ, ಕಾರ್ಯದರ್ಶಿ ಅಭಿನಯ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...