Missing Case ಭದ್ರಾವತಿಯ ಬಸವರಾಜ್ ಎಂಬುವವರ ತಂದೆ 60 ವರ್ಷದ ಗಂಗಪ್ಪ ಹತ್ತಿ ಎಂಬುವವರು ದಿ: 21-12-2023 ರಂದು ಹಾವೇರಿಯ ಶಾಂತಪ್ಪ ಎಂಬುವವರ ಮನೆಯಿಂದ ಶಿವಮೊಗ್ಗದ ಸರ್ಕಾರಿ ಬಸ್‍ನಿಲ್ದಾಣಕ್ಕೆ ಬಂದವರು ಅಲ್ಲಿಂದ ಕಾಣೆಯಾಗಿದ್ದಾರೆ.
ಈ ವ್ಯಕ್ತಿಯು ಸುಮಾರು 4 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಮಾತನಾಡಲು ಬರುವುದಿಲ್ಲ. ತಲೆ ಮೇಲೆ ಕೆಂಪು ಟೋಪಿ, ಬ್ರೌನ್ ಕಲರ್ ಶರ್ಟ್ ಮತ್ತು ಗ್ರೇ ಕಲರ್ ಪ್ಯಾಂಟ್ ಧರಿಸಿರುತ್ತಾನೆ.
Missing Case ಈ ವ್ಯಕ್ತಿಯ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣಾ ದೂ.ಸಂ : 08182-261414, 9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ದೊಡ್ಡಪೇಟೆ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ