Sivaganga Yoga Centre ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಪಟ್ಟಾಭಿಷೇಕದ ಪ್ರಯುಕ್ತ ಶಿವಮೊಗ್ಗ ನಗರದ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ 108 ತಾರಕ ಮಂತ್ರ ಪಠಣೆ ನಡೆಸಲಾಯಿತು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಶ್ರೀ ರಾಮನಿಗೆ ವಿಶೇಷ ಪೂಜೆ, ರಾಮ ಮಂತ್ರ ಪಠಣೆ, ಭಜನೆ, ವಿವಿಧ ಪೂಜೆಗಳ ಆಚರಣೆ ನಡೆಸುತ್ತಿದ್ದು, ಶಿವಮೊಗ್ಗದಲ್ಲಿಯೂ ರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಯೋಗ ನಮನ ಹಾಗೂ 108 ರಾಮ ತಾರಕ ತಾರಕ ಮಂತ್ರ ಪಠಿಸಲಾಯಿತು.
Sivaganga Yoga Centre ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕುರಿತು ಯೋಗ ಕಲಿಕಾರ್ಥಿಗಳು ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಿವಗಂಗಾ ಯುವ ಕೇಂದ್ರದ ಕಾರ್ಯದರ್ಶಿ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಮಾತನಾಡಿದರು.
500 ವರ್ಷಗಳ ಕನಸು ಇಂದು ನನಸಾಗುತ್ತಿದ್ದು, ಹಿಂದುಗಳ ಜೀವನದಲ್ಲಿ ಒಂದು ಪವಿತ್ರವಾದ ದಿನ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾದ ದಿನ. ಬಹಳ ದಿನಗಳಿಂದ ರಾಮರಾಜ್ಯ ಅಂತ ಮಾತಾಡುತ್ತಿದ್ದೇವು. ಅದು ಇವತ್ತು ನೆನಪಾಗಿದ್ದು, ಇವತ್ತು ನಮ್ಮ ಶಿವಗಂಗಾ ಯೋಗ ಕೇಂದ್ರದ ಎಲ್ಲಾ ಶಾಖೆಗಳಲ್ಲಿ ವಿಶೇಷವಾಗಿ ರಾಮನ ಪೂಜೆ ಭಜನೆ ಹಾಗೂ ರಾಮ ತಾರಕ ಮಂತ್ರಗಳನ್ನು ಸಾವಿರಾರು ಯೋಗ ಕಲಿಕಾರ್ಥಿಗಳು ಪಠಿಸಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯೋಗ ಗುರು ವಿಜಯ ಕೃಷ್ಣ ಮಾತನಾಡಿ, ರಾಮನ ಭಜನೆ, ತಾರಕ ಮಂತ್ರಗಳಿoದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಪ್ರತಿ ದಿನ ನಾವು ನೀವೆಲ್ಲರೂ ಭಜನೆಯಲ್ಲಿ ಪಾಲ್ಗೊಳ್ಳಬೇಕು. ಇಂದು ಎಲ್ಲಾ ಜಾತಿ ಮತ್ತು ಧರ್ಮದವರು ರಾಮನ ಪೂಜೆ ಭಜನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಒಂದು ತಿಂಗಳಿಂದ ನಾವು ರಾಮ ತಾರಕ ಮಂತ್ರಗಳನ್ನ ಘಟನೆ ಮಾಡುತ್ತಿದ್ದು, ರಾಮನಿಗೆ ವಿಶೇಷ ಗೌರವವನ್ನು ಸಲ್ಲಿಸುತ್ತಿದ್ದೇವೆ. ವಿಶೇಷ ಸಂದರ್ಭದಲ್ಲಿ ಎಲ್ಲರಿಂದ ರಾಮ ಭಜನೆ ನೆರವೇರಿಸುವುದರ ಮುಖಾಂತರ ಭಕ್ತಿ ಗೌರವಗಳಿಂದ ರಾಮನ ಪೂಜೆಯನ್ನು ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ ಜಿ.ವಿಜಯಕುಮಾರ್, ಆನಂದ್, ದೀಪಕ್, ನರಸೋಜಿರಾವ್, ಕಾಟನ್ ಜಗದೀಶ್, ಶ್ರೀನಿವಾಸ್, ಮಣಿವಣ್ಣನ್, ಸುಜಾತಾ ಮಧುಕೇಶ್ವರ್, ಗಾಯತ್ರಿ, ರಮೇಶ್, ವಸುಂದರಾ ಜಗದೀಶ್, ಸುಜಾತ ಮಧುಕೇಶ್, ಗಾಯತ್ರಿ, ವನಿತಾ, ಉಷಾ, ವಸುಂದರ, ರೇಣುಕಾ, ವೀಣಾ, ಸುಮಾ, ಗಾಯಿತ್ರಿ ರಮೇಶ ಮತ್ತಿತರರು ಉಪಸ್ಥಿತರಿದ್ದರು.