Hanuman Chalisa Parayana 19 ಜನವರಿ 2024 ಹೊಸಪೇಟೆ ನಗರದಲ್ಲಿ ಅಖಂಡ “ಹನುಮಾನ್ ಚಾಲೀಸ ಪಾರಾಯಣ” ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ತನ್ನಿಮಿತ್ತ ವಿಜಯನಗರ ಮೈದಾನದಿಂದ ವೆಂಕಟೇಶ್ವರ ಕಲ್ಯಾಣ ಮಂಟಪಕ್ಕೆ ಶೋಭ ಯಾತ್ರೆಯಲ್ಲಿ ಜಗದ್ಗುರು ಶಂಕರಾಚಾರ್ಯ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು, ಪರಮಪೂಜ್ಯ ದತ್ತಾವಧೂತ ಮಹಾರಾಜರು, ಪರಮಪೂಜ್ಯ ಬ್ರಹ್ಮಾನಂದ ತೀರ್ಥ ಭಿಕ್ಷು, ಪರಮ ಪೂಜನೀಯ ಶಿವಮಯಿ ಹಾಗೂ ಪ್ರಬೋಧಮಯಿ ಮಾತಾಜೀಯರು ಉಪಸ್ಥಿತಿಯಿದ್ದರು.
ಅಯೋಧ್ಯೆ ರಾಮಮಂದಿರದಂತೆಯೇ ಅಲಂಕಾರಗೊಂಡ ವೆಂಕಟೇಶ್ವರ ಛತ್ರಕ್ಕೆ ಬ್ರಹ್ಮಚೈತನ್ಯ ಮಹಾರಾಜರ ಹಾಗೂ ಬ್ರಹ್ಮಾನಂದ ಮಹಾರಾಜರ ಪಾದುಕೆಗಳನ್ನು ಮುಂದಿರಿಸಿಕೊಂಡು ಪ್ರವೇಶ ಮಾಡಲಾಯಿತು. ದೀಪ ಪ್ರಜ್ವಲನೆಯ ನಂತರ ಎಲ್ಲಾ ಸಂತರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಇಂದು ನಾವೆಲ್ಲ ಸನಾತನಿಗಳಾಗಿರುವುದಕ್ಕೆ ಕಾರಣ ಜಗದ್ಗುರು ಶಂಕರಾಚಾರ್ಯರು ಎಂದು ಹೇಳುತ್ತಾ, ಭಗವಾನ್ ಶ್ರೀಧರ ಸ್ವಾಮಿಗಳ ಸಾಧನೆಯನ್ನು ಸ್ಮರಿಸುತ್ತಾ., ಬ್ರಹ್ಮಚೈತನ್ಯ ಮಹಾರಾಜರಿಗೂ ಚಿಂತಾಮಣಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಮತ್ತು ಮಹಾರಾಜರೆಂದರೆ ಎಲ್ಲರಿಗಿಂತ ಹೆಮ್ಮೆ ಚಿಂತಾಮಣಿ ಮಠಕ್ಕೆ ಕಾರಣ, ಬ್ರಹ್ಮಚೈತನ್ಯ ಮಹಾರಾಜರು ತಮ್ಮ ಪೂರ್ವಾವತಾರದಲ್ಲಿ ಸಾಕ್ಷಾತ್ ಮಾರುತಿಯೇ ಆಗಿದ್ದರು.
Hanuman Chalisa Parayana ಅವರು ಮಾರುತಿಯಾದಾಗ ಮೊಟ್ಟಮೊದಲು ಶ್ರೀರಾಮಚಂದ್ರನನ್ನು ಭೇಟಿಯಾಗಿ ಮಾತನಾಡಿಸಿದ್ದು (ಆನೆಗುಂದಿ) “ಚಿಂತಾಮಣಿ ಮಠದ ರಾಮಗುಹೆ”ಯಲ್ಲಿ. ಹಾಗಾಗಿ ಶ್ರೀರಾಮ, ರಾಮನಾಮ, ಮಾರುತಿ, ಮಹಾರಾಜರು ಎಲ್ಲರೂ ಚಿಂತಾಮಣಿ ಮಠಕ್ಕೆ ಬಹಳ ಹತ್ತಿರದ ಸಂಬಂಧವುಳ್ಳವರು” ಎಂಬುವುದನ್ನು ಪ್ರೀತಿಯಿಂದ ಚಿಂತಾಮಣಿ ಸ್ವಾಮಿಗಳು ನುಡಿದರು.
ವರದಿ ಕೃಪೆ; ಮುರಳಿಧರ್ ನಾಡಿಗೇರ್