Kannada Sahitya Parishad ಯುವಬರಹಗಾರರು ಹಾಗೂ ಸಾಹಿತ್ಯಾಸಕ್ತರನ್ನು ಹುಟ್ಟುಹಾಕುವ ಸಲು ವಾಗಿ ಕಸಾಪ ವಿವಿಧ ಆಯಾಮಗಳ ಮೂಲಕ ಸಮ್ಮೇಳನಗಳನ್ನು ನಡೆಸಿ ಸಾಹಿತ್ಯದ ಕಂಪನ್ನು ಜಿಲ್ಲೆಯಾದ್ಯಂತ ಪಸರಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಚಿಕ್ಕಮಗಳೂರು ನಗರದ ಕೆ.ಎಂ.ರಸ್ತೆ ಸಮೀಪದ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ನಗರ ಘಟಕ ವತಿಯಿಂದ ಏರ್ಪಡಿಸಿದ್ದ ಸೇವಾದೀಕ್ಷ ಸಮಾರಂಭ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಾನಪದ ಸಮ್ಮೇ ಳನ, ದಾಸ ಸಾಹಿತ್ಯ, ಕಥಾ ಮತ್ತು ಕಾವ್ಯ ಕಮ್ಮಟ ಸೇರಿದಂತೆ ಹಲವಾರು ಸಾಹಿತ್ಯ ಚಟುವಟಿಕೆಗಳಿಗೆ ಪೂರಕ ವಾಗಿರುವ ಕಾರ್ಯಕ್ರಮ ನಡೆಸಿ ಯುವಕವಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಮುನ್ನಡೆಸುತ್ತಿದೆ ಎಂದು ತಿಳಿಸಿದರು.
ನಾಡಿನ ಪ್ರತಿಯೊಬ್ಬ ನಾಗರೀಕರು ಕನ್ನಡರಥವನ್ನು ಎಳೆಯಲು ಸ್ವಯಂ ಪ್ರೇರಿತರಾಗಿ ಮುಂದಾದರೆ ಮಾತ್ರ ಭಾಷೆಯ ಸೊಗಡನ್ನು ಎಲ್ಲೆಡೆ ಉಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಸಾಹಿತ್ಯಾಭಿಮಾನಿಗಳು ಕಸಾಪದ ಕಾರ್ಯಕ್ರಮ ಗಳಲ್ಲಿ ಮುಕ್ತವಾಗಿ ಪಾಲ್ಗೊಂಡು ಕವಿ, ಸಂತರು ಮತ್ತು ದಾರ್ಶನಿಕರ ಕೃತಿಗಳನ್ನು ಅಭ್ಯಾಸಿಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
Kannada Sahitya Parishad ಇದೀಗ ನಗರ ಸೇರಿದಂತೆ ಹೋಬಳಿ, ಗ್ರಾಮ ಮಟ್ಟದಲ್ಲೂ ಕಸಾಪ ಘಟಕಗಳನ್ನು ಸ್ಥಾಪಿಸಿ ತಳಮಟ್ಟದಿಂದ ಕನ್ನಡಕ್ಕಾಗಿ ದುಡಿದವರಿಗೆ ಪ್ರಮುಖವಾದ ಜವಾಬ್ದಾರಿ ನೀಡುತ್ತಿದ್ದು ಸೇವಾದೀಕ್ಷಾ ಪಡೆದುಕೊಂಡ ಬಳಿಕ ತಮ್ಮ ತಮ್ಮ ಪ್ರದೇಶಗಳಲ್ಲಿ ಭಾಷೆಯ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿ ಸಾಹತ್ಯಾಸಕ್ತರನ್ನು ಕರೆತರುವ ಕೆಲಸ ಮಾಡ ಬೇಕಿದೆ ಎಂದು ಕಿವಿಮಾತು ಹೇಳಿದರು.
ಸಂಸ್ಕೃತಿ ಮತ್ತು ಸಂಸ್ಕಾರ ಕುರಿತು ವಿಶೇಷ ಉಪನ್ಯಾಸ ನೀಡಿದ ನಾಗಶ್ರೀ ತ್ಯಾಗರಾಜ್ ಚಿಕ್ಕಮಗಳೂರು ಕಸಾಪ ಕನ್ನಡ ಹಬ್ಬಗಳ ಆಚರಿಸುವ ಕಾರ್ಯದಲ್ಲಿ ರಾಜ್ಯದಲ್ಲೇ ಮುಂಚೂಣಿ ಸ್ಥಾನದಲ್ಲಿದ್ದು ಜಿಲ್ಲೆಯ ಜನತೆಗೆ ಕಸಾಪ ಮುಖಾಂತರ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಬೆಳೆಸಲು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಪದಾಧಿಕಾರಿಗಳು ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರತಿ ಸಂಬoಧಗಳು ಯಾವ ರೀತಿಯಲ್ಲಿ ನಡೆದುಕೊಳ್ಳಲಿದೆ ಎಂಬುದು ಸಂಸ್ಕಾರ ತೋರಲಿದೆ. ಉತ್ತಮ ಗುಣಗಳನ್ನು ಪಾಲಕರು ಮಕ್ಕಳಿಗೆ ಬೋಧಿಸಿದರೆ ಸಂಸ್ಕೃತಿ ಉಳಿಯಲಿದೆ ಎಂದ ಅವರು ಮರೆತಲ್ಲಿ ಆಂತರಿಕ ಸಂಬoಧಗಳು ಮರೆಯಾಗಲಿರುವ ಹಿನ್ನೆಲೆಯಲ್ಲಿ ಅತ್ಯಂತ ಸೋಪಾನವಾಗಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಹಸ್ತಾಂತರಿಸುವಲ್ಲಿ ಮುಂದಾಗಬೇಕು ಎಂದರು.
ಇoದಿನ ಕಾಲಘಟ್ಟದಲ್ಲಿ ಸಾಹಿತ್ಯಾಭಿರುಚಿ ಮರೆಯಾಗುತ್ತಿದೆ. ಕುವೆಂಪು-ತೇಜಸ್ವಿ ಮಾದರಿಯಂತೆ ಪಾರಂ ಪರಿಕವಾಗಿ ಸಾಹಿತ್ಯ ಕ್ಷೇತ್ರ ಬಳುವಳಿಯಾಗಿ ಬಂದಿರುವುದು ತೀರಾ ಕಡಿಮೆಯಿದ್ದು ಆ ನಿಟ್ಟಿನಲ್ಲಿ ಯುವಕವಿಗಳು ಸಾಹಿತ್ಯಾಭಿರುಚಿಯನ್ನು ಮೈಗೂಡಿಸಿಕೊಂಡು ಮುನ್ನೆಡೆಯಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಸಾಹಿತ್ಯಾತ್ಮಕ ಪ್ರಕಾರಗಳನ್ನು ಒತ್ತು ನೀಡುವ ದೃಷ್ಟಿಯಿಂದ ನಗರ ಘಟಕವನ್ನು ಸ್ಥಾಪಿಸಿ ಮುಖ್ಯವಾದ ಜವಾಬ್ದಾರಿ ನೀಡಿದ್ದು ಘಟಕದ ಪದಾಧಿಕಾರಿಗಳು ಹೆಚ್ಚು ಪ್ರಾಧ್ಯಾನತೆಯನ್ನು ನಾಡು, ನುಡಿ ನೀಡಬೇಕು ಎಂದು ಸಲಹೆ ಮಾಡಿ ದರು.
ಇದೇ ವೇಳೆ ಕಸಾಪ ನಗರ ಘಟಕದ ಪದಾಧಿಕಾರಿಗಳಾಗಿ ಸಿ.ಪ್ರಭು, ಆಯಂತಿ ಜಿ ಶಿವಾಜಿ, ಮಲ್ಲಿಕಾದೇವಿ, ಪ್ರದೀಪ್, ಜೆ.ಐ.ಕಿರಣ್, ಭರತ್, ಮೋಕ್ಷ, ಆತ್ಮೀಯ ವೇದಮೂರ್ತಿ, ಹನಮಂತ್, ರಘು, ದೀಕ್ಷಿತ್, ಆಕರ್ಷ್, ಹರ್ಷಿತ್‌ಪೂಜಾರಿ ಹಾಗೂ ಬಿಂಧು ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಬಿ.ಪವನ್, ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ವಿರೇಶ್‌ಕೌಲಗಿ, ನಗರ ಘಟಕದ ಅಧ್ಯಕ್ಷ ಸಚಿನ್ ಸಿಂಗ್, ಸಂಚಾಲಕ ಗುರುವೇಶ್, ಪತ್ರಕರ್ತ ಚೇತನ್ ಬೇಲೇನಹಳ್ಳಿ, ಸೂರಿ ಪ್ರತಿಷ್ಟಾನದ ಅಧ್ಯಕ್ಷ ಸೂರಿ ಪ್ರಭು, ಕಸಾಪ ಮುಖಂಡರುಗಳಾದ ವಿಜಯಲಕ್ಷ್ಮೀ , ವೀಣಾ ಮಲ್ಲಿಕಾರ್ಜುನ್, ಹೆಚ್.ಆರ್.ಕಾಂತರಾಜು, ಎಂ.ಕುಮಾರಸ್ವಾಮಿ ಮತ್ತಿತರರಿದ್ದರು.