Sunday, December 7, 2025
Sunday, December 7, 2025

Dhananjaya ಡಾಲಿ ಕಿರುಚಿತ್ರೋತ್ಸವ & ನಿರ್ದೇಶಕರೊಂದಿಗೆ ಸಂವಾದ

Date:

Dhananjaya ಶಿವಮೊಗ್ಗ ಡಾಲಿ ಧನಂಜಯ ಫ್ಯಾನ್ಸ್ ಕ್ಲಬ್, ಶಿವಮೊಗ್ಗ ಸಿನಿಮಾಸ್ ಅಡ್ಡ, ಸ್ಟೈಲ್ ಡ್ಯಾನ್ಸ್ ಕ್ರೀವ್, ಕುಟ್ಟಿ ಸಿನಿಮಾ, ಶ್ರೀ ಭಜರಂಗಿ ಪ್ರೊಡಕ್ಷನ್, ಕೆಂಪಣ್ಣ ಪ್ರೊಡಕ್ಷನ್‌ಗಳ ಸಂಯುಕ್ತ ಆಶ್ರಯದಲ್ಲಿ ಜ. 24ರಂದು ಬೆಳಿಗ್ಗೆ 9.30ಕ್ಕೆ ಡಾಲಿ ಕಿರುಚಿತ್ರೋತ್ಸವದ ಭಾಗವಾಗಿ, ಮಲೆನಾಡಿನ ಕಿರು ಚಿತ್ರಗಳ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ದೂರದರ್ಶನ ಚಿತ್ರದ ನಿರ್ದೇಶಕ ಸುರೇಶ್ ಶೆಟ್ಟಿ, ಶ್ರೀ ಬಾಲಾಜಿ ಆಟೋ ಸ್ಟುಡಿಯೋ ಚಿತ್ರದ ನಿರ್ದೇಶಕ ರಾಜೇಶ್ ದೃವ, ಅರಾರಿರಾರೋ ಚಿತ್ರದ ನಿರ್ದೇಶಕ ಸಂದೀಪ್ ಶೆಟ್ಟಿ, ಚಲನಚಿತ್ರ ನಟ-ನಿರ್ಮಾಪಕ ಚಂದ್ರು ಕೆ. ಗೌಡ, ನಿರ್ಮಾಪಕ ಪ್ರವೀಣ್ ಕುಮಾರ್ ಪಾಲ್ಗೊಳ್ಳಲಿದೆ.

ಚಿತ್ರೋತ್ಸವವನ್ನು ಡಿವಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್. ರಾಜಶೇಖರ್ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಪ್ರಾಚಾರ್ಯ ಡಾ. ಹೆಚ್. ಎಸ್. ನಾಗಭೂಷಣ, ಶಿವಮೊಗ್ಗ ಬೆಳ್ಳಿಮಂಡಲ ಹಾಗೂ ಸಿನಿಮೊಗೆ ಚಿತ್ರ ಸಮಾಜಗಳ ಸಂಚಾಲಕ, ಪತ್ರಕರ್ತ ವೈದ್ಯನಾಥ್, ಕನ್ನಡ ಅಧ್ಯಾಪಕ ಡಾ. ಜಿ. ಆರ್. ಲವ, ರಾಮು, ಅಭಿಷೇಕ್ ಅಂಚನ್, ಗೀತಾ ಎಸ್. ರಾಣಿ ಪಾಲ್ಗೊಳ್ಳಲಿದ್ದಾರೆ.
ಲಕ್ಷ್ಮೀ ಗೆಲಾಕ್ಸಿಯಲ್ಲಿ ಸ್ಟೆÊಲ್ ಡ್ಯಾನ್ಸ್ ಕ್ರೀವ್ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಮಲೆನಾಡನ್ನು ಕೇಂದ್ರೀಕೃತವಾಗಿ ನಿರ್ಮಿಸಿರುವ ಬಿ. ಜೆ. ರಾಕೇಶ್ ನಿರ್ದೇಶನದ ಮಾಧಪುರಾಣ, ಸಾಗರದ ಅನೀಶ್ ಎಸ್. ಶರ್ಮಾ ನಿರ್ದೇಶನದ ವಡ್ಡಾರಾಧಕ, ತೀರ್ಥಹಳ್ಳಿಯ ಕಾರ್ತಿಕ್ ಶ್ರೇಯಾನ್ ನಿರ್ದೇಶನದ ಕಂಪೋಸರ್, ಕುಂದಾಪುರದ ವಿಜಯ್ ಮಂಜುನಾಥ್ ನಿರ್ದೇಶನದ ದೈವಂ ಶರಣಂ ಗಚ್ಚಾಮಿ, ವೇಣೂರಿನ ನಿಶ್ವಿತ್ ಶೆಟ್ಟಿ ನಿರ್ದೇಶನದ ವೃಷ್ಟಿ, ಮೈಸೂರಿನ ಸುತನ್ ದಿಲೀಪ್ ನಿರ್ದೇಶನದ ಮನೆ. ನಂ.23 ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಇದರ ಜೊತೆಗೆ, ಬೆಂಗಳೂರಿನ ರಾಷ್ಟç ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ. ಸತ್ಯಪ್ರಕಾಶ್ ನಿರ್ದೇಶನದ ಚೊಚ್ಚಲ ಹಾಗೂ ಯಶಸ್ವೀ ಕಿರುಚಿತ್ರ ಜಯನಗರ ಭಾರತ್ ಬ್ಲಾಕ್ ಚಿತ್ರವನ್ನು ಸಹ ಪ್ರದರ್ಶಿಸಲಾಗುತ್ತಿದೆ.

ಈ ಮೂಲಕ ಯುವ ಸಿನಿಮಾ ಆಸಕ್ತರಿಗೆ ಉತ್ತೇಜನ ನೀಡುವುದು, ಸಿನಿಮಾ ಬಗೆಗಿನ ಪೂರ್ವಭಾವಿ ಸಿದ್ಧತೆ, ಸಿನಿಮಾ ಪ್ರಚಾರ, ಓಟಿಟಿ ವೇದಿಕೆ, ಇತ್ಯಾದಿಗಳ ವಿಷಯಗಳ ಬಗ್ಗೆ ಮಾಹಿತಿ ನೀಡುವುದು ಉದ್ದೇಶವಾಗಿದೆ.

ಉಚಿತವಾಗಿ ನಡೆಯುವ ಈ ಕಿರು ಚಿತ್ರಗಳ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸಿನಿಮಾ ಆಸಕ್ತರು ಮತ್ತು ಯುವ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು, ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.

Dhananjaya ಆಸಕ್ತರು ರಘು ಗುಂಡ್ಲು,ಶಿವಮೊಗ್ಗ ಸಿನಿಮಾಸ್ ಅಡ್ಡ, ಶಿವಮೊಗ್ಗ ಮೊ:- 9060977694, ಎನ್. ಶಶಿಕುಮಾರ್, ಸ್ಟೈಲ್ ಡ್ಯಾನ್ಸ್ ಕ್ರೀವ್ ಶಿವಮೊಗ್ಗ, ಮೊ:- 8123005603 , ಎಂ. ಮುರುಳಿ, ಕುಟ್ಟಿ ಸಿನಿಮಾ, ಶಿವಮೊಗ್ಗ ಮೊ:- 9845287801, ಡಾ. ಲವ ಜಿ ಆರ್, ಕನ್ನಡ ಅಧ್ಯಾಪಕರು ಮತ್ತು ರಂಗ ನಿರ್ದೇಶಕರು, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ಮೊ:- 9449201919ರವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...