Friday, December 5, 2025
Friday, December 5, 2025

Kateel Ashok Pai College ಗಾಂಧೀಜಿ& ಅಂಬೇಡ್ಕರ್ ಸಂವಾದ ಸರಿತಪ್ಪುಗಳನ್ನ ಮೀರಿದ ಸಂವಾದ- ಪ್ರೊ.ರಾಜಾರಾಮ್ ತೋಳ್ಪಾಡಿ

Date:

Kateel Ashok Pai College ಮಾನಸ ಟ್ರಸ್ಟ್ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಚಿಂತನ ಸ್ಪಂದನ ವೇದಿಕೆ, ಸಮಾಜಶಾಸ್ತ್ರ ವಿಭಾಗ,ಐ.ಕ್ಯೂ.ಎ.ಸಿ.ಘಟಕ ವತಿಯಿಂದ
“ಮಹಾತ್ಮ ಮತ್ತು ಬಾಬಾಸಾಹೇಬ್ ಮಾತಿಗೆ ಮಾತು ಕೂಡಿಸಿದಾಗ”
ಚಾರಿತ್ರಿಕ ಸಂವಾದವೊಂದರ ಮರು ಮಂಡನೆ ಎಂಬ ಕಾರ್ಯಕ್ರಮವನ್ನು ಬಹುಮುಖಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಡಿದ ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊಫೆಸರ್ ರಾಜಾರಾಮ್ ತೋಳ್ಪಾಡಿ ಅವರು ಮಹಾತ್ಮ ಹಾಗೂ ಬಾಬಾ ಸಾಹೇಬ್ ರವರ ನಡುವೆ ನಡೆದ ಸಂವಾದವು ಗಾಂಧೀಜಿಯವರು ಅಂಬೇಡ್ಕರ್ ರವರನ್ನು ಒಳಗೊಳ್ಳುವ ಸಂವಾದವಾಗಿತ್ತು ಎಂದರು.

ಈ ಸಂವಾದವು ಸರಿ ತಪ್ಪು ಎಂಬ ಸೀಮೆಯನ್ನು ಮೀರಿದ ಸಂವಾದ .ಎರಡು ವಿಭಿನ್ನ ಪ್ರಾತಿನಿಧ್ಯಗಳು ಮುಖಾಮುಖಿಯಾದ ಈ ಸಂವಾದವು ಇಂದಿಗೂ ಹಾಗೂ ಎಂದಿಗೂ ಹಲವು ಆಯಾಮಗಳ ಚಿಂತನೆಗೆ ಸತ್ಯದ ಉಗಮಕ್ಕೆ ಕಾರಣವಾಗಬಹುದಾದ ಸಂವಾದ ಎಂದರು .

ಗಾಂಧೀಜಿ ಹಾಗೂ ಅಂಬೇಡ್ಕರ್ ಒಬ್ಬ ಗೆಲುವಿನ ಚಿಂತಕರಲ್ಲ ಅವರಿಬ್ಬರೂ ಮರುಸಂಘಟನೆಯ ಸಂಶೋಧಕರು ಎಂದರು .ಈ ಕಾರ್ಯಕ್ರಮದಲ್ಲಿ ಸಂವಾದವನ್ನು ಮರು ಮಂಡಿಸಿ ಪ್ರಸ್ತುತಪಡಿಸಿದ ತುಮಕೂರು ವಿಶ್ವವಿದ್ಯಾಲಯದ ಪ್ರೊಫೆಸರ್ ನಿತ್ಯಾನಂದ ಶೆಟ್ಟಿಯವರು ಹಾಗೂ ಸಂಶೋಧನ ಆರ್ತಿ ಶ್ರೀ ಅಮರ್ ರವರು ಸಂವಾದವು ಮುನ್ನಡೆದ ಸ್ವರೂಪವನ್ನು ಪ್ರಸ್ತಾಪಿಸುತ್ತಾ ವಿದ್ಯಾರ್ಥಿಗಳ ಹಲವಾರು ಅನಿಸಿಕೆ ಹಾಗೂ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು.

Kateel Ashok Pai College ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ,ಕಮಲ ನೆಹರು ಸ್ಮಾರಕ ಮಹಿಳಾ ಕಾಲೇಜು ,ಡಿವಿಎಸ್ ಪದವಿ ಕಾಲೇಜು ,ಸಹ್ಯಾದ್ರಿ ಕಲಾ ಕಾಲೇಜು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿ ಮುಕ್ತವಾಗಿ ತಮ್ಮ ಪ್ರಶ್ನೆಗಳು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡು ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದರು.

ಕೊನೆಯಲ್ಲಿ ಡಾಕ್ಟರ್ ರಾಜೇಂದ್ರ ಚೆನ್ನಿ ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಇಡಿಯ ಕಾರ್ಯಕ್ರಮದ ಸಾರಾಂಶ ಹಾಗೂ ಫಲಶ್ರುತಿಗಳನ್ನು ಸಭೆಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಮಾನಸ ಟ್ರಸ್ಟ್ ನ ನಿರ್ದೇಶಕಿ ಡಾ.ರಜನಿ.ಎ.ಪೈ,  ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸುರ್ಕಿತಿ ಹಾಗೂ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...