Basavanna ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿರುವುದು ಸ್ವಾಗತಾರ್ಹ ಎಂದು ಶ್ರೀ ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು ಜಗತ್ತಿನ ಮೊಟ್ಟ ಮೊದಲ ಸಮಾನೆಯ ಹರಿಕಾರ, ಕಾಯಕವೇ ಕೈಲಾಸ ಎಂಬ ಸಂಸ್ಕೃತಿಯನ್ನು ಎತ್ತಿಹಿಡಿದವರು. ದುಡಿಮೆಯ ಫಲವನ್ನು ಸಮಾನಾಗಿ ಹಂಚಿಕೊಳ್ಳ ಬೇಕು. ದಾಸೋಹ ಸಂಸ್ಕೃತಿಯನ್ನು ಅನುಸರಿಸಿ ಪ್ರತಿಪಾದಿಸಿದ ಬಸವಣ್ಣರನ್ನು ರಾಯಬಾರೀ ಘೋಷಿಸಿರುವುದು ಖುಷಿಯ ಸಂಗತಿ ಎಂದು ಹೇಳಿದ್ದಾರೆ.
ಮಹಾಜ್ಞಾನಿ ಬಸವಣ್ಣನವರ ಆದರ್ಶಗಳನ್ನು ಪರಿಪಾಲಿಸುವ ಪಾಠವನ್ನು ಯುವಪೀಳಿಗೆ ಮಾಡಬೇಕು. ಜೊತೆಗೆ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಹೊರಬೇಕಿದೆ. ಹಾಗಾಗಿ ರಾಜ್ಯದಲ್ಲಿ ಬಸ ವಣ್ಣರ ತತ್ವಾದರ್ಶಗಳನ್ನು ಮೆಚ್ಚಿ ಕರ್ನಾಟಕ ಸಾಂಸ್ಕೃತಿಕ ರಾಯಬಾರಿಯನ್ನಾಗಿ ಮಾಡಿರುವುದು ಹೆಮ್ಮೆಯ ವಿಷ ಯ ಎಂದಿದ್ದಾರೆ.
Basavanna ಇಂತಹ ಮಹತ್ವದ ಘೋಷಣೆಗೆ ಕಾರಣಕರ್ತರಾದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರ ಜನಪ್ರತಿನಿಧಿಗಳು ಶ್ರಮವಹಿಸಿರುವುದಕ್ಕೆ ತಾಲ್ಲೂ ಕು ಸಂಘ ಅತ್ಯಂತ ಕೃತಜ್ಞತೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.