Karnataka State Open University ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು, ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ 2023-24ನೇ ಶೈಕ್ಷಣಿಕ ಜನವರಿ ಸಾಲಿನಲ್ಲಿ ಯುಜಿಸಿಯ ಮಾನ್ಯತೆಯೊಂದಿಗೆ ಜ. 10 ರಿಂದ ಫೆ.29ರವರೆಗೆ ಪ್ರಥಮ ವರ್ಷದ ಬಿ.ಎ/ ಬಿ.ಕಾಂ/ ಬಿ.ಬಿ.ಎ/ ಬಿ.ಸಿ.ಎ/ ಬಿ.ಎಸ್ಸಿ/ ಬಿ.ಎಸ್.ಡಬ್ಲ್ಯೂ/ ಬಿ.ಲಿಬ್, ಪದವಿ ಹಾಗೂ ಎಂ.ಎ/ ಎಂ.ಕಾಂ./ ಎಂ.ಸಿ.ಎ/ ಎಂ.ಎಸ್.ಡಬ್ಲ್ಯೂ/ ಎಂ.ಲಿಬ್ ಮತ್ತು ಎಂ.ಎಸ್ಸಿ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಹಾಗೂ ಪಿ.ಜಿ. ಡಿಪ್ಲೊಮ ಮತ್ತು ಡಿಪ್ಲೊಮ ಹಾಗೂ ಸರ್ಟಿಫಿಕೇಟ್ ಕೋರ್ಸ್‍ಗಳ ಪ್ರವೇಶಾತಿ ಆರಂಭವಾಗಿದ್ದು, ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ವೆಬ್‍ಸೈಟ್ WWW.KSOUMYSURU.AC.IN ರಲ್ಲಿ ಭರ್ತಿಮಾಡಿ, ಶಿವಮೊಗ್ಗದ ಆಲ್ಕೋಳ ಸರ್ಕಲ್ ಹತ್ತಿರವಿರುವ ಕರಾಮುವಿ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸುವಂತೆ ಪ್ರಾದೇಶಿಕ ನಿರ್ದೇಶಕರು ತಿಳಿಸಿರುತ್ತಾರೆ.
Karnataka State Open University ಮಹಿಳಾ ಬಿ.ಪಿ.ಎಲ್ ವಿದ್ಯಾರ್ಥಿನಿಯರಿಗೆ 15% ಶುಲ್ಕ ವಿನಾಯಿತಿ ಹಾಗೂ ಆಟೋ ಹಾಗೂ ಕ್ಯಾಬ್ ಚಾಲಕರು ಹಾಗೂ ಅವರ ಮಕ್ಕಳಿಗೆ 30% ಶುಲ್ಕ ವಿನಾಯಿತಿ ಇರುತ್ತದೆ. ಡಿಫೆನ್ಸ್ / ಎಕ್ಸ್-ಸರ್ವಿಸ್‍ಮನ್‍ಗಳಿಗೆ ಪ್ರವೇಶಾತಿಯಲ್ಲಿ 15% ಶುಲ್ಕ ವಿನಾಯಿತಿ ಇರುತ್ತದೆ. ಕೋವಿಡ್‍ನಿಂದ ಮೃತರಾದ ಪೋಷಕರ ಮಕ್ಕಳಿಗೆ ಹಾಗು ದೃಷ್ಠಿಹೀನ ಅಂದ ಮಕ್ಕಳಿಗೆ ಮತ್ತು ತೃತೀಯ ಲಿಂಗಿಗಳಿಗೆ ಪ್ರವೇಶಾತಿಯ ಪೂರ್ಣ ಶುಲ್ಕ ವಿನಾಯಿತಿ ಇದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಶೇಕಡ 25% ಶುಲ್ಕ ವಿನಾಯಿತಿ ಇರುತ್ತದೆ. ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿವಿಯ ಕಲಿಕಾರ್ಥಿ ಸಹಾಯ ಕೇಂದ್ರಗಳಾದ ಡಿವಿಎಸ್ ಕಾಲೇಜು ಶಿವಮೊಗ್ಗ ಮತ್ತು ತುಂಗ ಕಾಲೇಜು ತೀರ್ಥಹಳ್ಳಿ, ಸಾಗರದ ಎಲ್.ಬಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್ WWW.KSOUMYSURU.AC.IN ಹಾಗೂ ದೂರವಾಣಿ ಸಂಖ್ಯೆ 08182-250367 ಮೊ: 9164467131, 9739803295, 9480765905 ಗಳನ್ನು ಸಂರ್ಪಕಿಸುವುದು.