Kamla Nehru College ಶಿವಮೊಗ್ಗಃ
ನಗರದ ಬಹುಮುಖಿ ವತಿಯಿಂದ 31ನೇ ಕಾರ್ಯಕ್ರಮವಾಗಿ, ಜ. 19ರಂದು ಸಂಜೆ5:30ಕ್ಕೆ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ.
ಮಂಗಳೂರು ವಿವಿ ನೆಹರೂ ಚಿಂತನ ಕೇಂದ್ರದ ವಿಶ್ರಾಂತ ನಿರ್ದೇಶಕ ಡಾ.ರಾಜಾರಾಮ ತೋಳ್ಳಾಡಿ, ತುಮಕೂರು ವಿವಿ ಪ್ರಾಧ್ಯಾಪಕ ಡಾ. ನಿತ್ಯಾನಂದ ಬಿ. ಶೆಟ್ಟಿಯವರು, ಆಧುನಿಕ ಭಾರತದ ರಾಜಕಾರಣ – ತಾತ್ವಿಕ ವಿದ್ಯಮಾನಗಳು ಕುರಿತು ಮಾತನಾಡಲಿದ್ದಾರೆ.
ಡಾ.ರಾಜಾರಾಮ ತೋಳ್ಳಾಡಿ ಬನಾರಸ್ ಹಿಂದೂ ವಿವಿಯಲ್ಲಿ ರಾಜ್ಯಶಾಸ್ತçದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಂಗಳೂರು ವಿವಿಯಲ್ಲಿ 30 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಲೋಹಿಯಾ ರಾಜಕೀಯ ಚಿಂತನೆ, ಹಿಂದುತ್ವ ರಾಜಕಾರಣ ಕುರಿತು ವಿಶೇಷ ಅಧ್ಯಯನ ನಡೆಸಿದ್ದಾರೆ.
ಲೋಹಿಯವಾದ ಹಾಗೂ ಸೆಕ್ಯುಲರ್ ವಾದದ ಬಗ್ಗೆ ಹಲವು ಹೊತ್ತಿಗೆಗಳನ್ನು ಹೊರ ತಂದಿದ್ದಾರೆ. ವಸಾಹತೀಕರಣ, ನಿರ್ವಸಾಹತೀಕರಣ, ಪ್ರಜಾತಂತ್ರದ ತಾತ್ವಿಕತೆ ಇವರ ಆಸಕ್ತಿಯ ಕ್ಷೇತ್ರಗಳು.
ಡಾ. ನಿತ್ಯಾನಂದ ಬಿ. ಶೆಟ್ಟಿ ತುಮಕೂರು ವಿವಿಯ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಕನ್ನಡ ಸಂಸ್ಕೃತಿ ವಾಹ್ಮಯ ಎಂಬ ವಿಷಯದ ಬಗ್ಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
Kamla Nehru College ಸಾಹಿತ್ಯ, ಸಂಸ್ಕೃತಿ, ಚಲನಚಿತ್ರ ಇವರ ಆಸಕ್ತಿಯ ಕ್ಷೇತ್ರಗಳು. ಲೋಕಜ್ಞಾನ ಎಂಬ ತ್ರೆÊಮಾಸಿಕ ಪತ್ರಿಕೆಯ ಸಂಪಾದಕರು. ಮಾರ್ಗಾನ್ವೇಷಣೆ ಪುಸ್ತಕ ಸಂಶೋಧನಾ ಮೀಮಾಂಸೆಯ ಕುರಿತ ಪುಸ್ತಕ ಹಾಗೂ ಸಾಹಿತ್ಯ ಸಂಶೋಧನೆ ಇವರ ಪ್ರಕಟಿತ ಕೆಲ ಪುಸ್ತಕಗಳು. ಭಾರತೀಯ ಕಲೆ ಬಗ್ಗೆ ಕಪಿಲ ವಾತ್ಸಾಯನ ಸಂಪಾದಕತ್ವದ ನಾಲ್ಕು ಸಂಪುಟಗಳ ಕನ್ನಡ ಅವತರಣಿಕೆ ಕಲಾತತ್ವ ಕೋಶ ಅನುವಾದಿತ ಕೃತಿ ಸಂಪಾದಕರು.
ದಲಿತ ಹಾಗೂ ಆದಿವಾಸಿ ವಿದ್ಯಾರ್ಥಿಗಳ ಏಳಿಗೆ ಬಗ್ಗೆ ವಿಶೇಷ ಕಾಳಜಿ ಉಳ್ಳವರು.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಹುಮುಖಿಯ ಡಾ. ಹೆಚ್. ಎಸ್. ನಾಗಭೂಷಣ ಕೋರಿದ್ದಾರೆ.