Friday, December 5, 2025
Friday, December 5, 2025

Style Dance Crew ಜನವರಿ 24 ರಂದು ಶಿವಮೊಗ್ಗದಲ್ಲಿ ಡಾಲಿ ಕಿರುಚಿತ್ರೋತ್ಸವ

Date:

Style Dance Crew ಡಾಲಿ ಧನಂಜಯ ಫ್ಯಾನ್ಸ್ ಕ್ಲಬ್, ಶಿವಮೊಗ್ಗ ಸಿನಿಮಾಸ್ ಅಡ್ಡ, ಸ್ಟೈಲ್ ಡ್ಯಾನ್ಸ್ ಕ್ರೀವ್, ಕುಟ್ಟಿ ಸಿನಿಮಾ, ಶ್ರೀ ಭಜರಂಗಿ ಪ್ರೊಡಕ್ಷನ್, ಕೆಂಪಣ್ಣ ಪ್ರೊಡಕ್ಷನ್‌ಗಳ ಸಂಯುಕ್ತ ಆಶ್ರಯದಲ್ಲಿ ಜ. 24ರಂದು ಬೆಳಿಗ್ಗೆ 9:30ಕ್ಕೆ ಡಾಲಿ ಕಿರುಚಿತ್ರೋತ್ಸವದ ಭಾಗವಾಗಿ, ಮಲೆನಾಡಿನ ಕಿರು ಚಿತ್ರಗಳ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಲಾಗಿದೆ.

ಲಕ್ಷ್ಮೀ ಗೆಲಾಕ್ಸಿಯಲ್ಲಿ ಸ್ಟೈಲ್ ಡ್ಯಾನ್ಸ್ ಕ್ರೀವ್ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಮಲೆನಾಡನ್ನು ಕೇಂದ್ರೀಕೃತವಾಗಿ ನಿರ್ಮಿಸಿರುವ ಮೂರು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಈ ಮೂಲಕ ಮಲೆನಾಡಿನ ಸಿನಿಮಾ ಆಸಕ್ತರಿಗೆ ಉತ್ತೇಜನ ನೀಡುವುದು, ಸಿನಿಮಾ ಬಗೆಗಿನ ಪೂರ್ವಭಾವಿ ಸಿದ್ಧತೆ, ಸಿನಿಮಾ ಪ್ರಚಾರ, ಓಟಿಟಿ ವೇದಿಕೆ, ಇತ್ಯಾದಿಗಳ ವಿಷಯಗಳ ಬಗ್ಗೆ ಮಾಹಿತಿ ನೀಡುವುದು ಉದ್ದೇಶವಾಗಿದೆ.

Style Dance Crew ಉಚಿತವಾಗಿ ನಡೆಯುವ ಈ ಕಿರು ಚಿತ್ರಗಳ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸಿನಿಮಾ ಆಸಕ್ತರು ಮತ್ತು ಯುವ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು, ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.

ಆಸಕ್ತರು ರಘು ಗುಂಡ್ಲು,ಶಿವಮೊಗ್ಗ ಸಿನಿಮಾಸ್ ಅಡ್ಡ, ಶಿವಮೊಗ್ಗ ಮೊ:-9060977694,, ಎನ್. ಶಶಿಕುಮಾರ್, ಸ್ಟೆÊಲ್ ಡ್ಯಾನ್ಸ್ ಕ್ರೀವ್ ಶಿವಮೊಗ್ಗ, ಮೊ:-8123005603, ಎಂ. ಮುರುಳಿ, ಕುಟ್ಟಿ ಸಿನಿಮಾ, ಶಿವಮೊಗ್ಗ ಮೊ:-9845287801, ಡಾ. ಲವ ಜಿ ಆರ್, ಕನ್ನಡ ಅಧ್ಯಾಪಕರು ಮತ್ತು ರಂಗ ನಿರ್ದೇಶಕರು, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ಮೊ:-9449201919ರವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...