Dalith Sangarsha Samiti ತರೀಕೆರೆ ತಾಲ್ಲೂಕಿನ ಮಳಲಿ ಚನ್ನೇನಹಳ್ಳಿ ಗ್ರಾಮದ ಮಲ್ಲಯ್ಯನಕೆರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡರುಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂಬಂಧ ಶಿರಸ್ತೇದಾರ್ ಹೇಮಂತ್‌ಕುಮಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಮುಖಂಡರು ಗಳು ಕೆರೆ ಒತ್ತುವರಿ ಸಂಬಂಧ ಗ್ರಾ.ಪಂ. ಅಧ್ಯಕ್ಷ ರಾಮೇಗೌಡ ಎಂಬುವವರು ಅಕ್ರಮವಾಗಿ ಒತ್ತುವರಿ ಮಾಡಿಕೊಡಿದ್ದು ಇವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಎಂ.ಸಿ.ಹಳ್ಳಿ ಗ್ರಾ.ಪಂ. ಅಧ್ಯಕ್ಷ ರಾಮೇಗೌಡ ಎಂಬುವವರು ಮಲ್ಲಯ್ಯನಕೆರೆಯ 20 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದು ಈ ಸಂಬಂಧ ಉಸ್ತುವರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗೆ ದೂರು ನೀಡಿದರೂ ರಾಜ ಕೀಯ ಒತ್ತಡದಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.
ಇದೇ ರಾಮೇಗೌಡ ಎಂಬುವವರು ಸ್ಥಳೀಯ ದಲಿತರ ನಿವಾಸಿ ರಾಮಚಂದ್ರ ಎಂಬುವವರ ಮೇಲೆ ಸುಳ್ಳು ಕೇಸು ದಾಖಲಿಸಿ ದುರುದ್ದೇಶದಿಂದ ಜೈಲುಶಿಕ್ಷೆ ಅನುಭವಿಸುವಂತೆ ಮಾಡಿದ್ದಾರೆ. ಈ ವಿರುದ್ಧ ದಸಂಸ ಮುಖಂ ಡರುಗಳು ಪ್ರತಿಭಟನೆಗೆ ಮುಂದಾದರೆ ಗೂಂಡಾಗಳನ್ನು ಬಿಟ್ಟು ಚಳುವಳಿಯನ್ನು ತಡೆಹಿಡಿಯುತ್ತಿದ್ದು ಇದಕ್ಕೆಲ್ಲಾ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವೃತ್ತ ನಿರೀಕ್ಷರ ಬೆಂಬಲವಿದೆ ಎಂದು ದೂರಿದರು.
ಅದಲ್ಲದೇ ರಾಮೇಗೌಡರು ಗ್ರಾಮ ಪಂಚಾಯಿತಿಯ ಹಣಕಾಸು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಮುಂತಾದವುಗಳಲ್ಲಿ ಹಣ ದುರುಪಯೋಗ ಹಾಗೂ ವ್ಯವಸ್ಥಾಯ ಸಹಕಾರ ಸಂಘದಲ್ಲಿ ಸರಿಯಾದ ಲೆಕ್ಕಪತ್ರ ನೀಡದೇ ಸಹಾಯಕ ನಿಬಂಧಕರು ದೂರು ದಾಖಲಿಸಿದ್ದಾರೆ ಎಂದು ತಿಳಿಸಿದರು.
Dalith Sangarsha Samiti ಇಂದಿಗೂ ದಲಿತರ ಸುಮಾರು ೨೫ ಎಕರೆಗೂ ಹೆಚ್ಚು ಭೂಮಿಯನ್ನು ಪಿಟಿಸಿಎಲ್ ಕಾಯ್ದೆ ಮೂಲಕ ದುರು ಪಯೋಗ ಮಾಡಿಕೊಂಡು ಜಮೀನು ಖರೀದಿಸಿದ್ದಾರೆ. ಆ ನಿಟ್ಟಿನಲ್ಲಿ ರಾಮೇಗೌಡರ ಎಲ್ಲಾ ದೂರುಗಳನ್ನು ಪರಿ ಗಣ ಸುವ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಿರಾಪಧಿ ರಾಮಚಂದ್ರಗೆ ಬಿಡುಗಡೆಗೊಳಿಸುವ ಜೊ ತೆಗೆ ಕೆರೆಯ ಒತ್ತುವರಿಯನ್ನು ಖುಲ್ಲಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎನ್.ಮಹೇಂದ್ರಸ್ವಾಮಿ, ತಾಲ್ಲೂಕು ಪ್ರಧಾನ ಸಂಚಾಲಕ ಮಂಜುನಾಥ್ ನಂಬಿಯಾರ್, ಸಂತೋಷ್ ಲಕ್ಯಾ ಮತ್ತಿತರರು ಹಾಜರಿದ್ದರು