DC Chikkamagaluru ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸಂಚರಿಸುವ ಆಟೋ ಚಾಲಕರಿಗೆ ಎಂ.ಜಿ.ರಸ್ತೆಯಲ್ಲಿ ನಿಲುಗಡೆ ಶುಲ್ಕವನ್ನು ವಿಧಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂಬಂಧ ನಗರಾಭಿವೃಧ್ದಿ ಕೋಶದ ಯೋಜನಾಧಿಕಾರಿ ನಾಗರತ್ನ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರುಗಳು ಪ್ರತಿ ಬಾಡಿಗೆಗೆ ಕನಿಷ್ಟ 40 ರೂ.ಗಳು ನಿಗಧಿಪಡಿಸಿದೆ. ಇದರೊಂದಿಗೆ ನಿಲುಗಡೆ 10 ರೂ.ಗಳ ವ್ಯಯಿಸಿದರೆ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ಎಂ.ಜಿ.ರಸ್ತೆಯ ಪಾರ್ಕಿಂಗ್ ಶುಲ್ಕ ಸಂಬಂಧ ಸಾರ್ವಜನಿಕವಾಗಿ ಯಾವುದೇ ಅಭಿಪ್ರಾಯ ಸಂಗ್ರಹಿಸದೇ ಬಹಿರಂಗ ಹರಾಜು ಟೆಂಡರ್ ಕರೆದು ನಾಲ್ಕು ಚಕ್ರದ ವಾಹನಗಳಿಗೆ ಪ್ರತಿ ಗಂಟೆಗೆ ೧೦ ರೂ. ನಂತೆ ನಿಗಧಿಪಡಿಸಿದ್ದು ಕಾರ್ಯರೂಪಕ್ಕೆ ಬಂದಲ್ಲಿ ಬಹಳಷ್ಟು ಸಮಸ್ಯೆ ಯಾಗಲಿದೆ ಎಂದರು.
DC Chikkamagaluru ಪ್ರಸ್ತುತ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಎಂ.ಜಿ.ರಸ್ತೆಯಲ್ಲಿ ಸಂಚರಿಸುವ ಚಾಲಕರುಗಳು ಪ್ರಯಾಣ ಕರ ನಿಲುಗಡೆಗೆ ಸಮಯ ನೀಡಬೇಕು. ಪ್ರತಿ ಬಾಡಿಗೆಗೆ ಕನಿಷ್ಟ ೪೦ ರೂ.ಗಳಿರುವ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯಲ್ಲಿ ಪಾರ್ಕಿಂಗ್‌ಗೆ ೧೦ ಅಥವಾ ೨೦ ರೂ. ನೀಡಿದರೆ ಚಾಲಕರ ಜೀವನಕ್ಕೆ ದುಸ್ತರವಾ ಗಲಿದೆ ಎಂದರು.
ಆ ನಿಟ್ಟಿನಲ್ಲಿ ಎಂ.ಜಿ.ರಸ್ತೆಯಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಬೇಕು ಎಂಬುದಾದರೆ ನಗರದಲ್ಲಿರುವ ಆಟೋ ಚಾಲಕರಿಗೆ ಯಾವುದೇ ಶುಲ್ಕ ವಿದಿಸದೇ ಸಂಪೂರ್ಣ ಉಚಿತವಾಗಿ ಅವಕಾಶ ಕಲ್ಪಿಸಿಕೊಡಬೇಕು. ಜೊತೆಗೆ ನಗರ ಸಭೆಯಲ್ಲಿ ಸಾರ್ವಜನಿಕವಾಗಿ ಸಲಹೆ ಸಹಕಾರ ಕೋರಿ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ತಿಳಿಸಿ ದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಉದಯ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ರಾಘವೇಂದ್ರ, ಸಹ ಕಾರ್ಯದರ್ಶಿ ಯಶ್ವಂತ್, ಚಾಲಕ ಜಯರಾಮ್ ಹಾಜರಿದ್ದರು.