Scheduled Caste Community ಪರಿಶಿಷ್ಟ ಜಾತಿ ಸಮುದಾಯದ ನಿವಾಸಿಗಳಿಗೆ ನೀರಿನ ತೆರಿಗೆ ಕಂದಾಯ ದಲ್ಲಿ ವಿಧಿಸಿರುವ ನೋಟೀಸ್ ಕೂಡಲೇ ರದ್ದುಪಡಿಸಬೇಕು ಎಂದು ಚಿಕ್ಕಮಗಳೂರು ನಗರಸಭಾ ಮಾಜಿ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಹಾಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಮಾಜಿ ಅಧ್ಯಕ್ಷ ಸೈಯದ್ ಜಮೀಲ್ ಅಹ್ಮದ್ ನೀರಿನ ತೆರಿಗೆ ಸಂಬಂಧ ಪರಿಶಿಷ್ಟ ಜಾತಿ ಜನಾಂಗಕ್ಕೆ 1993 ರ ನಡವಳಿಯಲ್ಲಿ ನೀರಿನ ಸಂಪರ್ಕವನ್ನು ಸಂಪೂರ್ಣ ಉಚಿತವಾಗಿ ಘೋಷಿಸಲಾಗಿತ್ತು.
ಇದೀಗ ನಗರಸಭೆ ಆಡಳಿತ ಮಂಡಳಿ ತೆರಿಗೆ ಕಟ್ಟಬೇಕು ಎಂದು ನೋಟೀಸ್ ನೀಡಿರುವುದು ಸರಿಯಲ್ಲ ಎಂದರು.
ಪ್ರಸ್ತುತ ದಂಟರಮಕ್ಕಿ, ಹಿರೇಮಗಳೂರು ಹಾಗೂ ತಮಿಳುಕಾಲೋನಿ ಬಡಾವಣೆಯಲ್ಲಿ ಅತಿಹೆಚ್ಚು ಸಂಖ್ಯೆ ಯಲ್ಲಿ ಪ.ಜಾತಿ, ಪ.ಪಂಗಡ ಸಮುದಾಯದ ಬಡ ಹಾಗೂ ಹಿಂದುಳಿದ ವರ್ಗಗಳೇ ವಾಸಿಸುತ್ತಿರುವ ಹಿನ್ನೆಲೆ ಯಲ್ಲಿ ನೀರಿನ ಸಂಪರ್ಕವನ್ನು ಉಚಿತವಾಗಿ ಒದಗಿಸಬೇಕೆಂದು ನಡವಳಿಯನ್ನು ಮಾಡಲಾಗಿತ್ತು ಎಂದರು.
Scheduled Caste Community ಒಂದು ವೇಳೆ ನೀರಿನ ತೆರಿಗೆ ಕಂದಾಯವನ್ನು ಪಾವತಿಸಲೇಬೇಕು ಎಂಬುದಾದರೆ ಪ.ಜಾತಿಗೆ ಮೀಸಲಿಟ್ಟಿದ್ದ ಶೇ.18 ಹಣವನ್ನು ಉಪಯೋಗಿಸಿಕೊಂಡು ನೀರಿನ ತೆರಿಗೆಯನ್ನು ರದ್ದುಪಡಿಸಿ ನಿವಾಸಿಗಳಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಅಕ್ಬರ್, ನಿವಾಸಿಗಳಾದ ಕೆಂಚಯ್ಯ, ಶಾರದಮ್ಮ ಮತ್ತಿತರರು ಹಾಜರಿದ್ದರು.