Royal Diamond School ಶಿವಮೊಗ್ಗದ ರಾಯಲ್ ಡೈಮಂಡ್ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ರೈತರು ವ್ಯವಸಾಯದಲ್ಲಿ ಬೆಳೆದ ಪೈರುಗಳನ್ನು ಒಕ್ಕಲು ಮಾಡಲು ಈ ಸಮಯವನ್ನು ಬಳಸಿಕೊಳ್ಳುತ್ತಾರೆ.ಆದ್ದರಿಂದ ಇಂತಹ ಸಮಯವನ್ನು ಸುಗ್ಗಿ ಹಬ್ಬವೆಂದು ಕರೆಯುವರು ಎಂದು ಡಾ. ನಾಗರಾಜ್ ಪರಿಸರ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ರಾಯಲ್ ಡೈಮಂಡ್ ಶಾಲೆಯಲ್ಲಿ ಸಂಕ್ರಾಂತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಾ,ಈ ಅವಧಿಯಲ್ಲಿ ಸಿಹಿ ದವಸ ಧಾನ್ಯಗಳ ಸೇವನೆಯ ಸಂಕ್ರಾಂತಿ ಆಚರಣೆಯನ್ನು ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸುವ ಪದ್ಧತಿ ಅನಾದಿ ಕಾಲದಿಂದಲೂ ಆಚರಿಸುವ ವಾಡಿಕೆ ಇದೆ. ಇಂದಿನ ಪೀಳಿಗೆಯಾದ ಮಕ್ಕಳು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಶಾಲಾ ಶಿಕ್ಷಕಿ ಭಾಗ್ಯ ಅವರು ಮಾತನಾಡಿ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ, ಸಂಕ್ರಾಂತಿ ಎಂದರೆ ರೈತ ಪರಿವಾರದವರು ತಮ್ಮ ಬೆಳೆ, ಹೊಲ,ಎತ್ತು, ದನ ಕರುಗಳ ಜೊತೆ ಸಂಭ್ರಮಿಸುವ ಹಬ್ಬ. ಆದರೆ ಇಂದಿನ ದಿನ ಮಾನಗಳಲ್ಲಿ ಎತ್ತುಗಳು, ರೈತಾಪಿ ಕೃಷಿ ಪರಿಕರಗಳು ಮಾಯವಾಗಿ,ಯಂತ್ರಗಳು ಬಂದಿವೆ ಎಂದು ವಿಷಾದ ವ್ಯಕ್ತಪಡಿಸಿದರು.
Royal Diamond School ಇದೇ ಸಂದರ್ಭದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಪಾಲಕರು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂಕ್ರಾಂತಿಯ ವಿಶೇಷ ಖಾದ್ಯ ಎಳ್ಳು ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಕಾರ್ಯದರ್ಶಿಯಾದ ಪೂಜಾ ನಾಗರಾಜ್ ಪರಿಸರ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಖಜಾಂಚಿ ಸತೀಶ್, ನಿರ್ದೇಶಕಿಯಾದ ಶೈಲಜಾ ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕರು, ಶಿಕ್ಷಕರು,ವಿದ್ಯಾರ್ಥಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.