JCI Shimoga Stars ಸತ್ಯಪ್ರಿಯ ಗೋಶಾಲೆ ಯೆರಗನಾಳು ಗ್ರಾಮ ದಲ್ಲಿ ಗ್ರಾಮಸ್ಥರ ಜೊತೆ ಜೆಸಿ ಶಿವಮೊಗ್ಗ ಸ್ಟಾರ್ಸ್ ಸಂಸ್ಥೆ ಗೋ ಪೂಜೆ, ಗೋವುಗಳಿಗೆ ಮೇವು ತಿನಿಸುವ ಮೂಲಕ, ಗ್ರಾಮಸ್ಥರು ಮತ್ತು ಮಕ್ಕಳ ಜೊತೆ ಸೇರಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿತ್ತು.
ಸರ್ಕಾರಿ ಕಚೇರಿ ಸೇರಿದಂತೆ ಮೆಗ್ಗನ್ ಆಸ್ಪತ್ರೆಯ ರೋಗಿಯ ಸಂಬಂಧಿಗಳಿಗೆ ಎಳ್ಳು ಬೆಲ್ಲ ಮತ್ತು ಪೊಂಗಲ್ ಗಳನ್ನು ಹಂಚುವ ಮೂಲಕ ಸಿಹಿ ಹಂಚಿ ಜೆಐಸಿ ಶಿವಮೊಗ್ಗ ಸ್ಟಾರ್ಸ್ ನ ಸದಸ್ಯರು ವಿಜೃಂಭಣೆಯಿಂದ ಮಕರ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದರು.
ಪ್ರತಿ ಸೋಮವಾರ ನಮ್ಮ ಸಂಸ್ಥೆ ಮತ್ತು ಭೂಮಿ ಸಂಸ್ಥೆಯಿಂದ ಜೆಸಿಐ ಭಾರತದ ದಾನ್ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದು, ಸಂಕ್ರಾಂತಿ ಹಬ್ಬ ವಿಶೇಷವಾಗಿ ಸೋಮವಾರ ಬಂದಿರುವುದು ನಮ್ಮ ಭಾಗ್ಯ. ಸಂಕ್ರಾಂತಿ ಹಬ್ಬದ ಕಾರಣ ಆಸ್ಪತ್ರೆ ಆವರಣದಲ್ಲಿ ಸಿಹಿ ಪೊಂಗಲ್ ಮತ್ತು ಎಳ್ಳು ಬೆಲ್ಲವನ್ನು ವಿತರಣೆ ಮಾಡುವ ಮೂಲಕ ಮಕರ ಸಂಕ್ರಾಂತಿಯನ್ನು ಆಚರಿಸುತ್ತಿದ್ದೇವೆ ಮತ್ತು ಮಕ್ಕಳಿಗೆ ಗೋಶಾಲೆಯ ಬಗ್ಗೆ ಪರಿಚಯ ಮಾಡುವ ಮೂಲಕ ಗೋವುಗಳನ್ನು ಪೂಜಿಸಿ ಮೇವು ತಿನಿಸಿ ಸಂಕ್ರಾಂತಿ ಹಬ್ಬವನ್ನು ಎಲ್ಲಾ ಸದಸ್ಯರು ವಿಶೇಷವಾಗಿ ಆಚರಣೆ ಮಾಡಿದ್ದೇವೆ.
JCI Shimoga Stars ಊರಿನ ಗ್ರಾಮಸ್ಥರು ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಜೊತೆ ಭಾಗವಹಿಸಿದ್ದು ವಿಶೇಷವಾಗಿತ್ತು ಎಂದು ಸಂಸ್ಥೆಯಾ ಅಧ್ಯಕ್ಷರಾದ ಜೆಸಿ ನವೀನ್ ತಲಾರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ ಕಾರ್ಯದರ್ಶಿಗಳಾದ ಜೆಸಿ ವಿದ್ಯಾಶ್ರೀ ಉಪಾಧ್ಯಕ್ಷರಾದ ಗಣೇಶ್ ಪೈ, ಎಲ್ಲಾ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.