Monday, November 25, 2024
Monday, November 25, 2024

Ayodhya Ram Mandir: ರಾಮಾಯಣ,ಅಂಧಕಾರವನ್ನು ತೊಡೆದು ಹಾಕುವ ಜ್ಯೋತಿಯ ಸಂಕೇತ- ಪುನಕ್ಕಲ್ ನಾರಾಯಣನ್

Date:


Ayodhya Ram Mandir: ವಾಲ್ಮೀಕಿ ರಾಮಾಯಣವೂ ಸೇರಿದಂತೆ ಜಗತ್ತಿನ ಸಾವಿರಾರು ರಾಮಾಯಣಗಳು ಕೇವಲ ಕಥೆ ಅಲ್ಲ. ಅದೊಂದು ಅನುಭವ. ರಾಮನ ವ್ಯಕ್ತಿತ್ವವನ್ನು ಸರಿಯಾದ ನಿಟ್ಟಿನಲ್ಲಿ ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಕೇವಲ ಒಂದು ರಾಮಾಯಣವನ್ನು ಓದಿದರೆ ಸಾಲದು. ಹತ್ತು ಹಲವು ಆಯಾಮಗಳಲ್ಲಿ ಚಿತ್ರಿತವಾಗಿರುವ ರಾಮಾಯಣಗಳನ್ನು ಅಧ್ಯಯನ ಮಾಡಬೇಕು ಎಂದು ಮಲೆಯಾಳಂನ ಖ್ಯಾತ ಸಾಹಿತಿ ಪುನಕ್ಕಲ್ ನಾರಾಯಣನ್ ವಿಶ್ಲೇಷಿಸಿದರು.
ನಗರದ ಬಹುಮುಖಿಯ ೩೧ನೇ ಉಪನ್ಯಾಸ-ಸಂವಾದ ಮಾಲಿಕೆಯಲ್ಲಿ ಮಾತನಾಡಿದ ಅವರು, ರಾಮಯಣ ಅಂಧಕಾರವನ್ನು ತೊಡೆದು ಹಾಕುವ ಜ್ಯೋತಿಯ ಸಂಕೇತ ಎಂದು ಬಣ್ಣಿಸಿದರು.
ಹಾಗೆ ನೋಡಿದರೆ, ರಾಮಾಯಣ, ಮಹಾಭಾರತಗಳು ವೇದಗಳ ಮೂಲದಿಂದಲೇ ಸೃಷ್ಟಿಯಾದವುಗಳು. ಮಹಾವಿಷ್ಣು, ಶ್ರೀರಾಮ ಹಾಗೂ ಕೃಷ್ಣರ ವ್ಯಕ್ತಿತ್ವವನ್ನು ಈ ಮಹಾನ್ ಗ್ರಂಥಗಳು ಕಟ್ಟಿಕೊಡುತ್ತವೆ ಎಂದ ಅವರು, ಶ್ರೀರಾಮ ಹಾಗೂ ಶ್ರೀ ಕೃಷ್ಣರನ್ನು ಮಹಾವಿಷ್ಣುವಿನ ಅವತಾರ ಎಂದೇ ಹೇಳಲ್ಪಟ್ಟಿದ್ದರೂ ಸಹ, ಇವರು ಸಾಮಾನ್ಯರಾಗಿ, ಸಾಮಾನ್ಯರಿಗಾಗಿ ತಮ್ಮ ವ್ಯಕ್ತಿತ್ವದ ಮೂಲಕ ಬಹುದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ ಎಂದರು.
ರಾಮಾಯಣ, ಮಹಾಭಾರತಗಳು ನಮ್ಮ ದೈನಂದಿನ ಪ್ರಾರ್ಥನೆಯ ಒಟ್ಟು ಮೊತ್ತ ಎಂದು ಅರ್ಥೈಸಿದ ಅವರು, ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮ, ಮೃತ್ಯೋರ್ಮ ಅಮೃಂಗಮಯ ಎಂಬ ಪ್ರಾರ್ಥನೆಯ ವಿಸ್ತುÈತ ರೂಪ ಎಂದು ವಿವರಿಸಿದ ಅವರು, ಹೀಗಾಗಿ ರಾಮಾಯಣ-ಮಹಾಭಾರತವನ್ನು ಕೇವಲ ಕಥೆಗೆ ಸೀಮಿತಗೊಳಿಸಬಾರದು ಎಂದು ಎಚ್ಚರಿಸಿದರು.
ಭಾರತವೂ ಸೇರಿದಂತೆ ಜಗತ್ತಿನಲ್ಲಿ ಸಾವಿರಾರು ರಾಮಾಯಣಗಳು ಸೃಷ್ಟಿಯಾಗಿರುವುದೇ, ಅದರ ಸಾರ್ವಕಾಲಿಕ ಮಹತ್ವವನ್ನು ಸಾರುತ್ತದೆ ಎಂದ ಅವರು, ನಾರದ ರಾಮಾಯಣ, ಅಗಸ್ತ್ಯ ರಾಮಾಯಣ, ದೇವ ರಾಮಾಯಣ, ತುಳಸಿ ರಾಮಾಯಣ, ನಿರ್ಣಯ ರಾಮಾಯಣ, ರಾಮಾಯಣ ದರ್ಶನಂ ಸೇರಿದಂತೆ ಹಲವಾರು ರಾಮಾಯಣಗಳು ಕಾಲ ಕಾಲಕ್ಕೆ ಸೃಷ್ಟಿಯಾಗಿದ್ದರೂ ಸಹ, ಈ ಎಲ್ಲಾ ರಾಮಾಯಣಗಳ ಆಶಯ ಶ್ರೀರಾಮನ ವ್ಯಕ್ತಿತ್ವನ್ನು ಕಟ್ಟಿಕೊಡುವುದೇ ಆಗಿದೆ ಎಂದು ವಿವರಿಸಿದರು.
ರಾಮಾಯಣಗಳಲ್ಲಿ ಕೆಲವು ದೃಷ್ಟಾಂತಗಳು ಬೇರೆ ಬೇರೆಯಾಗಿರಬಹುದು. ಕೆಲವು ದೃಷ್ಟಾಂತಗಳು ಇಲ್ಲದೆಯೂ ಇರಬಹುದು. ಆದರೆ, ಎಲ್ಲಿಯೂ ಕೂಡಾ ಮೂಲ ವಾಲ್ಮೀಕಿ ರಾಮಾಯಣದ ಆಶಯಕ್ಕೆ ಪೂರಕವಾಗಿದೆಯೇ ವಿನಃ ಬೇರೆ ಬೇರೆಯಾಗಿ ಉಳಿದಿಲ್ಲ ಎಂದ ಅವರು, ರಾಮಾಯಣವನ್ನು ಓದುವಾಗ ಅಥವಾ ಕೇಳುವಾಗ ನಾವು ತಾದಾತ್ಮ್ಯದಿಂದ ಗ್ರಹಿಸಿದಾಗ ಮಾತ್ರ ವಿಶಿಷ್ಟ ಅನುಭೂತಿ ದೊರೆಯುತ್ತದೆ ಎಂದರು.

ತಾವೇ ರಚಿಸಿದ ಸಮ್ಮಿಶ್ರ ರಾಮಾಯಣದ ಪ್ರಸಂಗಗಳನ್ನು ವಿವರಿಸಿದ ಅವರು, ಇದು ವಿವಿಧ ರಾಮಾಯಣಗಳನ್ನು ಆಧರಿಸಿ, ರೂಪಿಸಿದ ರಾಮಾಯಣ. ಹೀಗಾಗಿಯೇ ಇದಕ್ಕೆ ಸಮ್ಮಿಶ್ರ ರಾಮಾಯಣ ಎಂದು ಹೆಸರಿಸಲಾಗಿದೆ. ರಾಮಾಯಣ ಸಾರ್ವಕಾಲಿಕ ಮಹತ್ವವನ್ನು ಪಡೆದುಕೊಳ್ಳುತ್ತಲೇ, ರೂಪಾಂತರ ಹೊಂದುತ್ತಿರುತ್ತದೆ. ಇದೇ ಅದರ ಶಕ್ತಿ ಎಂದು ಸಮ್ಮಿಶ್ರ ರಾಮಾಯಣದ ಶ್ಲೋಕಗಳನ್ನು ವಾಚಿಸಿದರು.


Ayodhya Ram Mandir: ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿಗಳು, ಅನುವಾದಕರೂ ಆದ ಕೆ. ಪ್ರಭಾಕರನ್ ವಹಿಸಿ, ಮಾತನಾಡಿದರು.

ಪ್ರಾಚಾರ್ಯ ಡಾ. ಹೆಚ್. ಎಸ್. ನಾಗಭೂಷಣರವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು.

ನಂತರ ರಾಮಾಯಣ ಪಾತ್ರಗಳ ಕುರಿತು ಸಂವಾದ ನಡೆಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...