H D Thammaiah
H D Thammaiah ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸಿಸಿದ ಹಲವಾರು ವಿದ್ಯಾರ್ಥಿಗಳು ಇಂದು ದೇಶದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಪೋಷಕರು ಕೀಳರಿಮೆ ತೊರೆದು ಮುಕ್ತವಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು ನಗರದ ಉಪ್ಪಳ್ಳಿ ಸಮೀಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನೂತನವಾಗಿ ನಿರ್ಮಾಣವಾಗಿ ರುವ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿ ಶನಿವಾರ ಸಂಜೆ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಲ ವಾರು ಯೋಜನೆಗಳನ್ನು ಒದಗಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದು ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರುಗಳು ಒಗ್ಗಟ್ಟಾಗಿ ಮಕ್ಕಳನ್ನು ಕರೆತರುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಬದುಕಿನ ಹುಟ್ಟು-ಸಾವಿನ ನಡುವೆ ಇರುವಷ್ಟು ದಿವಸಗಳು ಸಮಾಜಕ್ಕೆ ಮಾದರಿಯಾಗಿ ಜೀವಿಸಬೇಕು. ಸರ್ಕಾರಿ ಶಾಲೆಗಳ ಸಣ್ಣಪುಟ್ಟ ಕೊರತೆಗಳನ್ನು ಸ್ಥಳೀಯ ದಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಕೈಜೋಡಿ ಸಬೇಕು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಿದ್ದು ಹೀಗಾಗಿ ಸರ್ಕಾರದಿಂದ ೫೩ ಲಕ್ಷ ರೂ. ವೆಚ್ಚದಲ್ಲಿ ಗುಣಮಟ್ಟದ ಕೊಠಡಿ ನಿರ್ಮಿಸಲಾಗಿದೆ ಎಂದರು.
ಸರ್ವಜನಾ0ಗದ ಶಾಂತಿಯ ತೋಟ ಎಂಬ ಸಂದೇಶ ಉಪ್ಪಳ್ಳಿ ಭಾಗಕ್ಕೆ ಬಹಳಷ್ಟು ಹೊಂದಿಕೊಳ್ಳಲಿದೆ. ಬಹುತೇಕರು ಮಾಧ್ಯಮ ವರ್ಗದವರೇ ಹೆಚ್ಚಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಖಾಸಗೀ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು. ಜೊತೆಗೆ ಎಸ್‌ಡಿಎಂಸಿ ಸದಸ್ಯರುಗಳೊಂದಿಗೆ ಚರ್ಚಿಸಿ ಆಂಗ್ಲ ಮಾಧ್ಯಮ ಶಿಕ್ಷಕರನ್ನು ನೇಮಿಸುವ ಗುರಿ ಹೊಂದಿದೆ ಎಂದರು.
H D Thammaiah ತಮ್ಮ ಅವಧಿಯೊಳಗೆ ಕ್ಷೇತ್ರದಲ್ಲಿ ಕನಿಷ್ಟ ಹತ್ತು ವ್ಯವಸ್ಥಿತ ಶಾಲೆ ಹಾಗೂ ಎರಡು ನಮ್ಮ ಕ್ಲೀನಿಕ್ ತೆರೆಯುವ ಉದ್ದೇಶವಿದೆ. ಜೊತೆಗೆ ಈ ಭಾಗದ ಜನಪ್ರತಿನಿಧಿಗಳ ಬೇಡಿಕೆಗನುಸಾರ ಉಪ್ಪಳ್ಳಿಗೊಂದು ನಮ್ಮ ಕ್ಲೀನಿಕ್ ತೆರೆಯಲು ಬೇಡಿಕೆಯಿರುವ ಹಿನ್ನೆಲೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ನಗರಸಭಾ ಸದಸ್ಯ ಮುನೀರ್ ಮಾತನಾಡಿ ಬಾಲ್ಯದಿಂದಲೇ ತಾವು ಸೇರಿದಂತೆ ಹಲವಾರು ಮಂದಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಾಗಿದ್ದು. ಅಂದಿನಿ0ದ ಇಂದಿನವರೆಗೂ ನೂತನ ಕಟ್ಟಡ ನಿರ್ಮಾ ಣವಾಗಿರಲಿಲ್ಲ. ಹಿಂದಿನ ಶಾಲೆ ಶಿಥಿಲೀಕರಣವಾದ ಹಿನ್ನೆಲೆಯಲ್ಲಿ ನೂತನ ಕೊಠಡಿ ನಿರ್ಮಿಸಿ ಸರ್ಕಾರ ಮಕ್ಕಳಿಗೆ ಅನುಕೂಲ ಕಲ್ಪಿಸಿ ರುವುದು ಖುಷಿಯ ಸಂಗತಿ ಎಂದರು.
ಉಪ್ಪಳ್ಳಿ ಶಾಲೆಯ ಹಳೆಯ ಕಟ್ಟಡ ಕೊರತೆಯಿಂದ ಮಕ್ಕಳನ್ನು ಪೋಷಕರು ಶಾಲೆಗೆ ಸೇರ್ಪಡಿಸಲು ಹಿಂ ದೇಟು ಹಾಕಲಾಗುತಿತ್ತು. ಇದೀಗ ನೂತನ ಕೊಠಡಿ ನಿರ್ಮಾಣವಾಗಿದೆ. ಜೊತೆಗೆ ಹೊಸದಾಗಿ ಇನ್ನೂ ಆರು ಕೊಠಡಿಗಳ ನಿರ್ಮಾಣ ಹಾಗೂ ಬೋರೆವೆಲ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಹಕರಿಸಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ.ರವೀಶ್ ಮಾತನಾಡಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಚಟುವಟಿಕೆಗಳು ಮುಕ್ತಾಯಗೊಂಡು ಪಠ್ಯೇತರ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದು ವಿದ್ಯಾಥಿ ðಗಳು ಮುಂಬರುವ ಪರೀಕ್ಷೆಗಳಲ್ಲಿ ಹೆಚ್ಚು ಅಭ್ಯಾಸಿಸಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಶಾಲೆಗೆ ಶೌಚಾಲಯ ಅವಶ್ಯವಿರುವ ಹಿನ್ನೆಲೆ ಯಲ್ಲಿ 12.35 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಶಾಲೆಯ ಹಳೆಯ ವಿದ್ಯಾರ್ಥಿ ಅನ್ಸರ್‌ಆಲಿ ಮಾತನಾಡಿ ಉಪ್ಪಳ್ಳಿ ಶಾಲೆಗೆ ಕಾಫಿ ಬೆಳೆಗಾರರು, ಸ್ಥಳೀಯ ಮುಖಂಡರುಗಳು ಸೇರಿದಂತೆ ಹಲವಾರು ದಾನಿಗಳು ಕಂಪ್ಯೂಟರ್, ಫಿಟ್ಲರ್ ವಾಟರ್ ಸೇರಿದಂತೆ ಆರ್ಥಿಕವಾಗಿ ಸಹಾಯಹಸ್ತವನ್ನು ಚಾಚಿ ಮಕ್ಕಳಿಗೆ ಅನುಕೂಲ ಮಾಡಿರುವುದು ಮರೆಯಲಾಗದ ವಿಷಯ ಎಂದರು.
ಇದೇ ವೇಳೆ ಕೊರೋನಾ ವಾರಿರ‍್ಸ್, ಶಾಲೆಗೆ ಸಹಕಾರ ನೀಡಿದ ದಾನಿಗಳಿಗೆ ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಏರ್ಪಡಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹು ಮಾನವನ್ನು ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಖಲಂದರ್, ಶಾಲಾ ಎಸ್.ಡಿ.ಎಂ.ಸಿ. ಸದಸ್ಯ ಅಸೀಫ್, ಕಾಫಿಬೆಳೆ ಗಾರ ರಮೇಶ್‌ಗೌಡ, ದಾನಿಗಳಾದ ಶಿವೇಗೌಡ, ಯುಸೂಫ್ ಹಾಜಿ, ಮುನೀರ್ ಭಾವ, ಖಲೀಂ ರಜ್ವಿ, ಹಳೇ ವಿದ್ಯಾರ್ಥಿಗಳಾದ ನಂದೀಶ್, ಸಹೀರ್ ಆಲಿ, ಜಮಾಲ್, ತನ್ವೀರ್, ಹರಿದಾಸ್, ಸುದೀಪ್, ಅನಿಲ್, ಕುಮಾರ್, ಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.