Mrugavadhe ಇಡೀ ಭಾರತವೇ ಜನವರಿ 22ರಂದು ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯನ್ನು ನೋಡಲು ಕಾದು ಕುಳಿತಿದೆ.
ಪ್ರತಿಯೊಂದು ಕಡೆ ಅದೇ ದಿನದಂದು ವಿಶೇಷ ಪೂಜೆ, ದೇವಾಲಯಗಳಲ್ಲಿ ರಾಮನ ಭಜನೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದೇ ರೀತಿ ತೀರ್ಥಹಳ್ಳಿ ತಾಲೂಕಿನ ಶೇಡ್ಗರ್ ಅಂಚೆ ಮೃಗಾವಧೆ ಗ್ರಾಮದಲ್ಲಿ ಪ್ರಸಿದ್ಧವಾಗಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀ ಆಂಜನೇಯ ದೇವರ ಪ್ರತಿಷ್ಠಾಪನ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಮಾಯಣದ ಕಥೆಯಲ್ಲಿ ಮಾರೀಚನನ್ನ ಕೊಂದ ಸ್ಥಳದಲ್ಲಿಯೇ ಮೃಗಾವಧೆ ಮಲ್ಲಿಕಾರ್ಜುನ ದೇವಸ್ಥಾನ ಸ್ಥಾಪನೆಗೊಂಡಿದೆ. ಹಾಗೆಯೇ, ಶ್ರೀರಾಮನನ್ನ ಮನದಲ್ಲಿಯೇ ನೆಲೆಸಿ, ಪೂಜಿಸುವ ಆಂಜನೇಯನ ದೇವಾಲಯವು ಈ ತಿಂಗಳ 22 ರಂದು ಪ್ರತಿಷ್ಠಾಪನೆ ಗೊಳ್ಳಲಿದೆ ಎಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸಮಿತಿ ತಿಳಿಸಿದೆ.
ಜನವರಿ 21ರಿಂದ 24 ಶ್ರೀ ಆಂಜನೇಯ ದೇವರ ಪ್ರತಿಷ್ಠಾಪನ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ನಡೆಯುತ್ತಿದೆ. ಈ ನೂತನವಾಗಿ ನಿರ್ಮಿಸಿರುವ ದೇವಾಲಯವು ವಿಶೇಷವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠೆಯ ದಿನದಂದೇ ಪ್ರತಿಷ್ಠಾಪನೆಗೊಳ್ಳಲಿದೆ.

ಜನವರಿ 21ರಂದು ಭಾನುವಾರ ಶ್ರೀ ಕ್ಷೇತ್ರ ಮೃಗಾವಧೆಯ ದೇವರುಗಳಿಗೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಕಲಶ ಸ್ಥಾಪನೆ, ಬಿಂಬಶುದ್ಧಿ ಹೋಮ ನಡೆಯಲಿದೆ.
ಜ. 22ರಂದು ಶ್ರೀಮದ್ ಆಂಜನೇಯ ಸ್ವಾಮಿಯ ಬಿಂಬ ಪ್ರತಿಷ್ಠೆ, ಪ್ರತಿಷ್ಠಾನ್ಯಾದಿಗಳು, ಜೀವ ಕುಂಭಾಭಿಷೇಕ ಪೂಜೆ, ತತ್ವ ಕಲಾಭಿಷೇಕ ಪೂಜೆ ನಡೆಯಲಿದೆ.
ಜನವರಿ 23 ರಂದು ಶ್ರೀಮದ್ ಆಂಜನೇಯ ನಿಗೆ ಮೂಲ ಮಂತ್ರ ಹೋಮ, ಶಾಂತಿ ಹೋಮ, ಸಂಜೆ 108 ಬ್ರಹ್ಮಕುಂಭ ಪ್ರತಿಷ್ಠಾಪನೆ, ಅಧಿವಾಸ ಹೋಮ ನಡೆಯಲಿದೆ.
ಜ.24ರಂದು ಪ್ರಾಯಶ್ಚಿತ್ತ ಹೋಮ, 108 ಬ್ರಹ್ಮಕುಂಬಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕಮ್ಮರಡಿ ವೇ.ಬ್ರ.ಶ್ರೀ. ಲಕ್ಷ್ಮೀನಾರಾಯಣ ಸೋಮಯಾಜಿಯವರ ತೃತ್ವದಲ್ಲಿ ನಡೆಯುತ್ತಿದೆ.
Mrugavadhe ಮೃಗಾವಧೆಯಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ದೇವಾಲಯದ ಲೋಕಾರ್ಪಣೆ ಮತ್ತು ಶ್ರೀಮದ್ ಆಂಜನೇಯ ಸ್ವಾಮಿಯ ಜೀರ್ಣೋದ್ಧಾರ, ಪುನರಷ್ಟಬಂಧ ಪ್ರತಿಷ್ಟಾಪನೆ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ನಡಿಯುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.
ಆಂಜನೇಯ ದೇವಾಲಯದ ಪ್ರತಿಷ್ಠಾಪನೆಗೆ ತನು ಮನ ಧನವನ್ನ ಸಹಕರಿಸಲು ಇಚ್ಛೆ ಇದ್ದವರು ದೇವಾಲಯದ ಮುಖ್ಯ ಕಚೇರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ದೂ. ಸಂಖ್ಯೆ. 08181-234577
- ರಚನಾ. ಕೆ.ಆರ್
ತೀರ್ಥಹಳ್ಳಿ