Shakahaari Movie ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಮಾಡಿರುವ ಹಾಗೂ ಲಾಸ್ಟ್ ಪೇಜ್ ಕ್ರಿಯೇಶನ್ ಸಹಯೋಗದಲ್ಲಿ ಮಲೆನಾಡಿನ ಹೊಚ್ಚ ಹೊಸ ಕನ್ನಡ ಚಲನಚಿತ್ರ ಶಾಖಾಹಾರಿ ಸಿನಿಮಾದ ಸೌಗಂಧಿಕ ಹಾಡು ಬಿಡುಗಡೆಯಾಗಿದೆ.
ಮುಖ್ಯ ಭೂಮಿಕೆಯಲ್ಲಿ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ಸುಜಯ್ ಶಾಸ್ತ್ರಿ, ಹರಿಣಿ, ಪ್ರತಿಮಾ ನಾಯಕ್, ವಿನಯ್ ಯು.ಜೆ., ನಿಧಿ ಹೆಗ್ಡೆ, ಶ್ರೀಹರ್ಷ ಗೋಭಟ್ಟ ಮತ್ತಿತರರು ನಟಿಸಿದ್ದಾರೆ.
ರಾಜೇಶ್ ಕೀಳಂಬಿ, ರಂಜಿನಿ ಪ್ರಸನ್ನ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನ ಚೊಚ್ಚಲ ಚಿತ್ರ ಇದಾಗಿದೆ.
ಸೌಗಂಧಿಕ ಹಾಡು ಹೊಸನಗರದಲ್ಲಿ ನಡೆಯುತ್ತಿರುವ ಸುಗ್ಗಿ ಹಬ್ಬದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.
ಶಾಖಾಹಾರಿ ಸಿನಿಮಾದ ಮೊದಲ ಹಾಡು ಸೌಗಂಧಿಕಾ ಸಿನಿಪ್ರಿಯರಿಗೆ ಒಂದೊಳ್ಳೆ ಸಾಹಿತ್ಯದ ರಸದೌತಣ ನೀಡಿದೆ.
ತೀರ್ಥಹಳ್ಳಿಯ ಮೇಳಿಗೆ ಎಂಬ ಊರಿನಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಶಾಖಾಹಾರಿ ಸಿನಿಮಾದ ಮೊದಲ ಹಾಡು ಬಿಡುಗಡೆಗೊಂಡಿದ್ದು, ಫೆಬ್ರವರಿ ತಿಂಗಳಲ್ಲಿ ಸಿನಿಮವು ಬಿಡುಗಡೆಗೊಳ್ಳಲಿದೆ ಎಂದು ಸಿನಿಮಾ ತಂಡವು ಮಾಹಿತಿ ನೀಡಿದೆ. ಸಿರಿಪ್ರಿಯರರಲ್ಲಿ ಸಿನಿಮಾದ ಮೊದಲ ಹಾಡು ನೋಡುತ್ತಿದ್ದಂತೆಯೇ, ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿದೆ.
Shakahaari Movie ಹೊಸ ಪ್ರತಿಭೆ ಸಂದೀಪ್ ಸುಂಕದ್ ಈ ಚಿತ್ರದ ಕಥೆ ಮತ್ತು ನಿರ್ದೇಶನವನ್ನ ಮಾಡಿದ್ದಾರೆ.
ವಿಶ್ವಜಿತ್ ರಾವ್ ರವರ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ & ಆಶಿಕ್ ಕುಸುಗೊಳ್ಳಿ ರವರ ಗ್ರೇಡಿಂಗ್ ಈ ಚಿತ್ರಕ್ಕಿದೆ.