Free train For ayyodhya ಬಿಜೆಪಿ ನೇತೃತ್ವದ ಛತ್ತೀಸ್‌ಗಢ ಸರ್ಕಾರವು ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮನ ಮಂದಿರಕ್ಕೆ ಭೇಟಿ ನೀಡಲು ಬಯಸುವ ಭಕ್ತರಿಗೆ ವಾರ್ಷಿಕ ಉಚಿತ ರೈಲು ಪ್ರಯಾಣ ಯೋಜನೆಯನ್ನು ಬುಧವಾರ ಮಂಜೂರು ಮಾಡಿದೆ. ಈ ನಿರ್ಧಾರವನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರ ಅಧ್ಯಕ್ಷತೆಯಲ್ಲಿ ಜನವರಿ 10 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಔಪಚಾರಿಕವಾಗಿ ಅನುಮೋದಿಸಲಾಗಿದೆ.
2023ರ ವಿಧಾನಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭರವಸೆಯಂತೆ ಛತ್ತೀಸ್‌ಗಢ ಪ್ರವಾಸೋದ್ಯಮ ಮಂಡಳಿಯಿಂದ ವಾರ್ಷಿಕ ಉಚಿತ ರೈಲು ಪ್ರಯಾಣ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಛತ್ತೀಸ್‌ಗಢ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಇದಕ್ಕೆ ಅಗತ್ಯವಾದ ಬಜೆಟ್ ಅನ್ನು ನಿಗದಿಪಡಿಸಲಿದೆಯಂತೆ. ರೈಲಿನ ಮೂಲಕ ಅಯೋಧ್ಯೆಗೆ ವಾರ್ಷಿಕ 20,000 ಜನರಿಗೆ ತೀರ್ಥಯಾತ್ರೆಗೆ ಅನುಕೂಲ ಮಾಡಿಕೊಡಲಿದ್ದಾರೆ. ರಾಯ್‌ಪುರ, ದುರ್ಗ್, ರಾಯ್‌ಗಢ್ ಮತ್ತು ಅಂಬಿಕಾಪುರ, ಜೊತೆಗೆ 900 ಕಿ.ಮೀ ಪ್ರಯಾಣವು ಅಯೋಧ್ಯೆಯಲ್ಲಿ ಕೊನೆಗೊಳ್ಳುತ್ತದೆ.
Free train For ayyodhya ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಮತ್ತು ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ವಾರಣಾಸಿಯಲ್ಲಿ ನಿಲುಗಡೆ ಇರಲಿದೆ.