Thursday, March 19, 2026
Thursday, March 19, 2026

Bhadra Reservoir ಆನ್ ಅಂಡ್ ಆಫ್ ಪದ್ಧತಿಯಲ್ಲಿ ಭದ್ರಾ ಬಲದಂಡೆ ನಾಲೆ ಜ.15 & ಜ,10 ರಿಂದ ಎಡದಂಡೆ ನಾಲೆಗಳಲ್ಲಿ ನೀರಿನ ಹರಿವು

Date:

Bhadra Reservoir 2023-24 ನೇ ಸಾಲಿನ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭತ್ತ, ಕಬ್ಬು, ಅರೆ ನೀರಾವರಿ ಬೆಳೆ ಮುಂತಾದ ಯಾವುದೇ ರೀತಿಯ ಬೆಳೆಗಳಿಗೆ ನೀರನ್ನು ಹರಿಸದಿರಲು ಹಾಗೂ ಬೆಳೆದು ನಿಂತಿರುವ ಬೆಳೆ, ಜನ-ಜಾನುವಾರು, ಕುಡಿಯುವ ನೀರು ಮತ್ತು ಪರಿಸರ ಸಮತೋಲನ ಕಾಪಾಡಿಕೊಳ್ಳಲು ಆನ್ ಅಂಡ್ ಆಫ್ ಪದ್ದತಿಯಲ್ಲಿ ಬಲದಂಡೆ ನಾಲೆಗೆ ದಿ:15-01-2024 ರಿಂದ ಒಟ್ಟು 53 ದಿನಗಳಿಗೆ ಹಾಗೂ ಎಡದಂಡೆ ನಾಲೆಗೆ ದಿ: 10.01.2024 ರಿಂದ ಒಟ್ಟು 70 ದಿನಗಳಿಗೆ ನೀರು ಹರಿಸಲು ತೀರ್ಮಾನಿಸಲಾಯಿತು.

ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಭದ್ರಾ ಎಡದಂಡೆ ನಾಲೆಯಲ್ಲಿ ಜ.10 ರಿಮದ 25 ರವರೆಗೆ 16 ದಿನ ನೀರು ಹರಿಸುವುದು, ಜ.26 ರಿಂದ ಫೆ.9 ರವರೆಗೆ 15 ದಿನ ನೀರು ನಿಲ್ಲಿಸುವುದು. ಫೆ.10 ರಿಂದ 26 ರವರೆಗೆ 17 ದಿನ ನೀರು ಹರಿಸುವುದು, ಫೆ.27 ರಿಂದ ಮಾ.12 ರವರೆಗೆ 15 ದಿನ ನೀರು ನಿಲ್ಲಿಸುವುದು. ಮಾ.3 ರಿಂದ 30 ರವರೆಗೆ 18 ನೀರು ಹರಿಸುವುದು ಮಾ.31 ರಿಂದ ಏ.14 ರವರೆಗೆ 15 ದಿನ ನೀರು ನಿಲ್ಲಿಸುವುದು. ಏ.15 ರಿಂದ ಮೇ.3 ರವರೆಗೆ 19 ದಿನಗಳ ನೀರು ಹರಿಸಲಾಗುವುದು.

ಭದ್ರಾ ಬಲದಂಡೆ ನಾಲೆಯಲ್ಲಿ ಜ.15 ರಿಂದ 26 ರವರೆಗೆ 12 ದಿನ ನೀರು ಹರಿಸುವುದು, ಜ.27 ರಿಂದ ಫೆ.15 ರವರೆಗೆ 20 ದಿನ ನೀರು ನಿಲ್ಲಿಸುವುದು. ಫೆ.16 ರಿಂದ 28 ರವರೆಗೆ 13 ದಿನ ನೀರು ಹರಿಸುವುದು, ಫೆ.29 ರಿಂದ ಮಾ.19 ರವರೆಗೆ 20 ದಿನ ನೀರು ನಿಲ್ಲಿಸುವುದು. ಮಾ.20 ರಿಂದ ಏ.2 ರವರೆಗೆ 14 ದಿನ ನೀರು ಹರಿಸುವುದು, ಏ.3 ರಿಂದ 22 ರವರೆಗೆ 20 ದಿನಗಳಿಗೆ ನೀರು ನಿಲ್ಲಿಸುವುದು.

Bhadra Reservoir ಏ.23 ರಿಂದ ಮೇ 5 ರವರೆಗೆ 14 ದಿನಗಳ ನೀರು ಹರಿಸಲಾಗುವುದು ಎಂದು ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...