Sunday, December 7, 2025
Sunday, December 7, 2025

Marathon Running ಜನವರಿ 13 ಶಿವಮೊಗ್ಗದಲ್ಲಿ ಮ್ಯಾರಥಾನ್ ಓಟ

Date:

Marathon Running ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಇಲ್ಲಿನ ನ್ಯಾಶನಲ್ ಪಬ್ಲಿಕ್ ಶಾಲೆಯಿಂದ ಇದೇ ಜನವರಿ 13ರಂದು ‘ರನ್ ಫಾರ್ ಯೂತ್-ಯೂತ್ ಫಾರ್ ನೇಷನ್-ನೇಷನ್ ಫಾರ್ ಯೂತ್’ ಎಂಬ ಘೋಷಣೆಯೊಂದಿಗೆ ಮ್ಯಾರಥಾನ್ ಓಟ ಏರ್ಪಡಿಸಲಾಗಿದೆ ಎಂದು ನ್ಯಾಷನಲ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಬಿ.ಜಿ. ಧನಲಕ್ಷ್ಮೀ ತಿಳಿಸಿದರು.

ಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ಘಟಕವಾದ ನ್ಯಾಷನಲ್ ಪಬ್ಲಿಕ್ ಶಾಲೆ ಮತ್ತು ಡೆಕಾಥ್ಲಾನ್, ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ ಈ ಮ್ಯಾರಥಾನ್ ಓಟ ಏರ್ಪಡಿಸಲಾಗಿದ್ದು, ಸುಮಾರು 1000 ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಲಿದ್ದು ನಗರದ ಜನಮನ ಸೆಳೆಯುವುದರೊಂದಿಗೆ ಸ್ವಾಮಿ ವಿವೇಕಾನಂದರ ಸಂದೇಶವನ್ನು ಸಾರುವುದರಲ್ಲಿ ಸಾರ್ಥಕತೆಯನ್ನು ಮೆರೆಯಲಿದೆ ಎಂದರು.

ಅoದು ಬೆಳಗ್ಗೆ 6ಗಂಟೆಗೆ ಶಾಲಾ ಆವರಣ ದಿಂದ ಪ್ರಾರಂಭವಾಗುವ ಮ್ಯಾರಥಾನ್ ನಗರದ ಸಂಗೊಳ್ಳಿರಾಯಣ್ಣ ವೃತ್ತ, ಶಂಕರಮಠ ರಸ್ತೆ, ಎ.ಎ.ಸರ್ಕಲ್, ಸಿಟಿ ಸೆಂಟರ್ ಮಾಲ್, ಗೋಪಿ ಸರ್ಕಲ್, ಮಹಾವೀರ ವೃತ್ತ (ಕೋರ್ಟ್ ಸರ್ಕಲ್), ಕೆ.ಇ.ಬಿ ಸರ್ಕಲ್‌ನಿಂದ ಪುನಃ ಶಾಲಾ ಆವರಣ ಹೀಗೆ ಸುಮಾರು 5 ಕಿ.ಮೀ ದೂರವನ್ನು ಕ್ರಮಿಸಲಿದೆ ಎಂದ ಅವರು, ವಿದ್ಯಾರ್ಥಿಗಳು ಓಡಿ ದಣಿಯದೆ ನಡೆದು ಬಳಲದೆ ಉತ್ಸುಕರಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Marathon Running ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್.ನಾಗರಾಜ, ನ್ಯಾಷನಲ್ ಪಬ್ಲಿಕ್, ಶಾಲೆಯ ಪ್ರಾಂಶುಪಾಲೆ ಶ್ರೀಮತಿ ನವೀನ ಎಂ. ಪಾಯ್ಸ್ ಹಾಗೂ ಉಪಪ್ರಾಂಶುಪಾಲ ರಂಗನಾಥ ಮತ್ತು ಡೆಕಾಥ್ಲಾನ್ ವ್ಯವಸ್ಥಾಪಕ ಅಮೃತ್ ಇವರ ನಾಯಕತ್ವದಲ್ಲಿ ಮ್ಯಾರಥಾನ್ ಓಟ ನಡೆಯಲಿದ್ದು, ಈ ಮ್ಯಾರಥಾನ್‌ನಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಸಂಯೋಜಕರಾದ ಪದ್ಮಿನಿ, ಜಯಮಾಲಾ, ಸೌಮ್ಯ ಎಂ.ಡಿ., ಜಯಂತಿ, ಶಿಕ್ಷಕಿ ಗೀತಾ ಸಿ., ವಿದ್ಯಾರ್ಥಿಗಳಾದ ಕೃತಿಕಾ, ನಿಶ್ಚಯ್ ಎಂ.ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...