Sqay Federation of India ಸ್ಕ್ವಾಯ್ ಕ್ರೀಡೆ ಜಮ್ಮು ಕಾಶ್ಮೀರ ದ ಪ್ರಾಚೀನ ಯುದ್ಧ ಕಲೆಯಾಗಿದ್ದು,
ಸ್ಕ್ವಾಯ್ ಫೆಡರೇಶನ್ ಆಫ್ ಇಂಡಿಯಾ ಭಾರತದಲ್ಲಿ ಇದನ್ನು ನಡೆಸಿಕೊಂಡು ಬರುತ್ತಿದೆ.
ಈ ಫೆಡರೇಶನ್ ಗೆ ಭಾರತ ಸರ್ಕಾರ ಹಾಗೂ ಭಾರತ ಕ್ರೀಡಾ ಪ್ರಾಧಿಕಾರ ಮಾನ್ಯತೆ ನೀಡಿದ್ದು, ಇದರ ಅಂಗ ಸಂಸ್ಥೆಗಳು ರಾಷ್ಟ್ರಾದ್ಯಂತ ಕಾರ್ಯನಿರ್ವಹಿಸುತ್ತಿದೆ.
ಕರ್ನಾಟಕದಲ್ಲಿ ಕಳೆದ 17 ವರ್ಷದಿಂದ ಇದರ ಸಂಸ್ಥೆ ಇದ್ದು ಈಗಾಗಲೇ ಸ್ಕ್ವಾಯ್ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆ ಮುಗಿದು ರಾಷ್ಟ್ರಮಟ್ಟದ ಪಂದ್ಯಾವಳಿ ಸಹ ಮುಗಿದು ಹೋಗಿದೆ.
ಹೀಗಿರುವಾಗ ಜನವರಿ 11ರಂದು ಶಿವಮೊಗ್ಗದಲ್ಲಿ ಕ್ರೀಡಾಪಟುಗಳನ್ನು ವಂಚಿಸಲು ಅನಧಿಕೃತವಾಗಿ ರಾಜ್ಯಮಟ್ಟದ ಸ್ಕ್ವಾಯ್ ಆಯ್ಕೆ ಪ್ರಕ್ರಿಯೆ ಮಾಡುತ್ತಿದ್ದಾರೆ ಸ್ಕ್ವಾಯ್
ಫೆಡರೇಶನ್ ಆಫ್ ಇಂಡಿಯಾ
ಭಾರತ ಸರ್ಕಾರದ ಅಧಿಕೃತ ಸಂಸ್ಥೆಯಾಗಿದ್ದು ಇತ್ತೀಚಿಗೆ ಗೋವಾದಲ್ಲಿ ಭಾರತೀಯ ಒಲಂಪಿಕ್ ಸಂಸ್ಥೆ ಸಹ ಈ ಕ್ರೀಡೆಯನ್ನು ನ್ಯಾಷನಲ್ ಗೇಮ್ಸ್ ಗೆ ಸೇರ್ಪಡೆಸಿದ್ದು ರಾಜ್ಯದಿಂದ ಕ್ರೀಡಾಪಟುಗಳು ಹೋಗಿ ಭಾಗಿಯಾಗಿ ಬಹುಮಾನ ಗೆದ್ದು ಬಂದಿದ್ದಾರೆ. ಹೀಗೆ ಸ್ಕ್ವಾಯ್ ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವುದನ್ನು ಕಂಡು ಕೆಲವು ಅನಧಿಕೃತ ಮಾನ್ಯತೆ ಪಡೆಯದ ವ್ಯಕ್ತಿಗಳು ವಿದ್ಯಾರ್ಥಿಗಳಿಂದ ಹಣ ಕೀಳಲು ಕ್ರೀಡಾಪಟುಗಳಿಗೆ ವಂಚಿಸಲು ಇಂತಹ ಕೆಲಸಗಳನ್ನು ಮಾಡುತ್ತಿದ್ದು, ರಾಜ್ಯದ ಕ್ರೀಡಾಪಟುಗಳು ಇಂತಹ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ
ನಂತರ ಇವರು ನೀಡುವ ಪ್ರಶಸ್ತಿ ಪತ್ರಗಳು ಕಿಂಚಿತ್ತು ಬೆಲೆ ಇಲ್ಲದೆ
ಕ್ರೀಡಾಪಟುಗಳ ಭವಿಷ್ಯ ನಾಶವಾಗುವುದು
ಹಾಗಾಗಿ ಇಂತಹ ಅನಧಿಕೃತ ಆಯ್ಕೆಯಲ್ಲಿ ಪಾಲ್ಗೊಳ್ಳದಂತೆ
Sqay Federation of India ಕ್ರೀಡಾಪಟುಗಳಿಗೆ ಕೋರುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅನಧಿಕೃತ ವ್ಯಕ್ತಿಗಳ ವಿರುದ್ಧ
ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತೇವೆ.
Sqay Federation of India ಶಿವಮೊಗ್ಗ ಸ್ಕ್ವಾಯ್ ಕ್ರೀಡಾ ಪ್ರೋತ್ಸಾಹಕರ ಗರಂ ಪ್ರತಿಕ್ರಿಯೆ
Date: