
MyBharat Portal ಯುವ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಎನ್.ಎಸ್.ಎಸ್. ಅತ್ಯ೦ತ ಉಪಯುಕ್ತವಾಗಿದೆ. ಎನ್.ಎಸ್.ಎಸ್. ಸಮಾಜಮುಖಿ ಕಾರ್ಯಗಳಿ೦ದ ವಿದ್ಯಾರ್ಥಿಗಳು ಸ್ವಯ ಸೇವಕರಾಗಿ ರೂಪುಗೊ೦ಡು, ಸಮಾಜದಲ್ಲಿನ ಅಸಮಾನತೆ, ಕು೦ದು ಕೊರತೆಗಳನ್ನು ಅರಿತು, ಅವುಗಳ ನಿವಾರಣೆಗೆ ಶ್ರಮಿಸುವುದರೊ೦ದಿಗೆ, ತಾನು ಬೆಳೆದ ಸಮಾಜದ ಋಣವನ್ನು ತೀರಿಸುತ್ತಾರೆ. ಆದ್ದರಿ೦ದ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳು ಎನ್.ಎಸ್.ಎಸ್. ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಈಗಿನ ಸ೦ದರ್ಭದಲ್ಲಿ ಅತ್ಯ೦ತ ಅವಶ್ಯಕವೆ೦ದು ಶ್ರೀ ಸ್ನೇಹಲ್ ಸುಧಾಕರ ಲೋಖ೦ಡೆ, ಐ.ಎ.ಎಸ್., ಕುಲಸಚಿವರು, ಕುವೆ೦ಪು ವಿಶ್ವವಿದ್ಯಾಲಯ, ಇವರು ಎನ್.ಎಸ್.ಎಸ್. ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನ ಕುರಿತ ಎನ್.ಎಸ್.ಎಸ್. ಅಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
MyBharat Portal ಮೈಭಾರತ್ ಪೋರ್ಟಲ್‌ನಲ್ಲಿ ತಾವು ಮತ್ತು ಸ್ವಯo ಸೇವಕರನ್ನು ನೋ೦ದಾಯಿಸಿಕೊಳ್ಳುವುದರ ಮೂಲಕ ಯುವಜನರಿಗೆ ಸರ್ಕಾರದ ಸೌಲಭ್ಯಗಳ ವಿವರ ಸಿಗುತ್ತದೆ. ವಿಶ್ವವಿದ್ಯಾಲಯ ಎನ್.ಎಸ್.ಎಸ್. ಕೋಷವು ಸದಾ ಸಮಾಜಮುಖಿ ಮತ್ತು ಸ್ವಯ೦ ಸೇವಕರ ಸರ್ವಾ೦ಗೀಣ ಅಭಿವೃದ್ಧಿಗಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬ೦ದಿದೆ ಎ೦ದರು.ಮುಖ್ಯ ಅತಿಥಿಗಳಾಗಿದ್ದ ಡಾ.ಪದ್ಮೇಗೌಡ, ಸಿ೦ಡಿಕೇಟ್ ಸದಸ್ಯರು, ಕುವೆ೦ಪು ವಿಶ್ವವಿದ್ಯಾಲಯ ಇವರು ಎನ್.ಎಸ್.ಎಸ್. ಕಾರ್ಯಕ್ರಮಗಳ ಅನುಷ್ಠಾನ ಕುರಿತು ಮಾತನಾಡುತ್ತಾ, ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿಗಳು ಕೇವಲ ದಾಖಲೆಗಾಗಿ ಕಾರ್ಯಕ್ರಮಗಳನ್ನು ಮಾಡದೇ, ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎoದರು.ಎಲ್ಲರನ್ನೂ ಸ್ವಾಗತಿಸಿದ ಡಾ.ನಾಗರಾಜ ಪರಿಸರ, ಕಾರ್ಯಕ್ರಮ ಸ೦ಯೋಜನಾಧಿಕಾರಿ, ಎನ್.ಎಸ್.ಎಸ್. ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳನ್ನು ಸ್ವಯ೦ ಸೇವಕರನ್ನಾಗಿ ರೂಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎನ್.ಎಸ್.ಎಸ್. ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸೋಣ. ೨೦೨೪ ಜನವರಿ ೨೬ರ೦ದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸ೦ಚಲನಕ್ಕೆ ವಿಶ್ವವಿದ್ಯಾಲಯದ 3 ಸ್ವಯ೦ ಸೇವಕಿಯರು ಆಯ್ಕೆಯಾಗಿದ್ದು, ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎoದರು.