Monday, March 23, 2026
Monday, March 23, 2026

Ayyappa Swami ಚಿಕ್ಕಮಗಳೂರಿನ ಶ್ರೀವಲ್ಲಭ ಗಣಪತಿ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ಪ್ರತಿಷ್ಟಾಪನೆ

Date:

Ayyappa Swami ಚಿಕ್ಕಮಗಳೂರು, ನಗರದ ಶ್ರೀ ವಲ್ಲಭ ಗಣಪತಿ ದೇವಾಲಯದಲ್ಲಿ ಶ್ರೀ ಮಣಿಕಂಠ ಗ್ರೂಪ್‌ನ ಎರಡನೇ ವರ್ಷದ ಅಂಗವಾಗಿ ಶ್ರೀ ಅಯ್ಯಪ್ಪಸ್ವಾಮಿಯನ್ನು ಪ್ರತಿಷ್ಟಾಪಿಸಿ ಸೋಮವಾರ ಸಂಜೆ ವಿಶೇಷ ಪೂಜೆ ಹಾಗೂ ಭಜನೆಯನ್ನು ಅಯ್ಯಪ್ಪಮಾಲಾಧಾರಿಗಳು ನಡೆಸಿದರು.

ಬಳಿಕ ಮಾತನಾಡಿದ ಗುರುಸ್ವಾಮಿ ರಂಗನಾಥ್ ಪ್ರತಿ ವರ್ಷವು ಕನಿಷ್ಟ 24 ದಿನಗಳ ಕಾಲ ಶ್ರೀ ಅಯ್ಯಪ್ಪ ಸ್ವಾಮಿ ಮಾಲೆಧರಿಸಿ ಯುವಕರ ತಂಡವು ಶಬರಿಯಾತ್ರೆಯನ್ನು ಕೈಗೊಳ್ಳಲಾಗುತ್ತಿದ್ದು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ಪೂಜೆ-ಭಜನೆ ನಡೆಸುವ ಮೂಲಕ ತಲ್ಲೀರಾಗಿದ್ದೇವೆ ಎಂದರು.

ಇದೇ ಜ.13 ರಂದು ಸುಮಾರು 15 ಯುವಕರು ಇರುಮುಡಿ ಹೊತ್ತು ಶಬರಿಯಾತ್ರೆಗೆ ತೆರಳಲಿದ್ದು ಜೀವನ ದಲ್ಲಿ ಕಷ್ಟ-ಕಾಪಣ್ಯ ಹಾಗೂ ಇನ್ನಿತರೆ ಮಾನಸಿಕ ಒತ್ತಡಗಳಿಗೆ ಶಬರಿಯಾತ್ರೆಯಲ್ಲಿ ಮುಕ್ತಿ ಸಿಗಲಿದೆ. ಹೀಗಾಗಿ ದೇವರ ನಾಮಜಪಿಸುವ ಮೂಲಕ ನಾಲ್ಕೈದು ದಿನಗಳ ಕಾಲ ಯಾತ್ರೆ ಕೈಗೊಳ್ಳಲಾಗುವುದು ಎಂದರು.

Ayyappa Swami ಸಂದರ್ಭದಲ್ಲಿ ಮಾಲಾಧಾರಿಗಳಾದ ಸೋಮಶೇಖರ್, ಶಶಿ, ತ್ಯಾಗರಾಜ್, ಮಧು, ಲೋಹಿತ್, ಕಾರ್ತೀಕ್, ಪವನ್, ಜಗದೀಶ್, ಮಹೇಶ್, ಶಶಿ, ಮನು, ಚಂದನ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ...

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ...

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801...

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ...

Cheetah Attack ಮುತ್ತಗಿ ಗ್ರಾಮದ ರೈತನ ಮೇಲೆ ಚಿರತೆ ಹಠಾತ್ ದಾಳಿ. ಮೆಗ್ಗಾನ್ ಆಸ್ಪತ್ರೆಗೆ ರೈತ ದಾಖಲು.

Cheetah Attack ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದ ರೈತರ...