Viksit Bharat ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಶಿವಮೊಗ್ಗ ಹಾಗೂ ಸಿ.ಬಿ.ಆರ್ ರಾಷ್ಟ್ರೀಯ ಕಾನೂನು ಕಾಲೇಜು ಮತ್ತು ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ,ಶಿವಮೊಗ್ಗ ಇವರ ಸಹಯೋಗದಲ್ಲಿ ಇಂದು ದಿನಾಂಕ 10.01.2024 ರಂದು ಸಿ.ಬಿ.ಆರ್ ರಾಷ್ಟ್ರೀಯ ಕಾನೂನು ಕಾಲೇಜು ಸಭಾಂಗಣದಲ್ಲಿ ನನ್ನ ಭಾರತ್ ವಿಕಸಿತ್ ಭಾರತ್@2047 ಎಂಬ ವಿಷಯ ಕುರಿತಾದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲಾ ಗಣ್ಯರಿಂದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಬಿ.ಆರ್ ರಾ.ಕಾ.ಕಾಲೇಜಿನ ಪ್ರಾಂಶುಪಾಲರಾದ ಡಾ.ಎ. ಅನಲರವರು ವಹಿಸಿದ್ದರು.
ಇವರು ಯುವಜನರು ನಮ್ಮ ದೇಶ ಯುವಜನರಿಗೆ ಕೊಡುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಮತ್ತು ಪ್ರಯೋಜನವನ್ನು ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಜಿಲ್ಲಾ ಮತ್ತು ವಾಣಿಜ್ಯ ಮತ್ತು ಕೈಗಾರಿಕೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ. ವಿಜಯ್ ಕುಮಾರ್ ರವರು ವಿಕಸಿತ ಭಾರತವಾಗಲು ಯುವಕರ ಪಾತ್ರ ಪ್ರಮುಖವಾದದ್ದು ಆದ್ದರಿಂದ ಯುವಕರು ದೇಶದ ಬಗ್ಗೆ ಪ್ರೋತ್ಸಾಹ ಮತ್ತು ಆಸಕ್ತಿಯನ್ನು ತೋರಿಸಬೇಕು ಎಂದು ತಿಳಿಸಿದರು.
ಸಿ.ಬಿ.ಆರ್ ಕಾನೂನು ಕಾಲೇಜಿನ, IQAC ಸಂಯೋಜಕರಾದ ಡಾ. ಎಸ್. ಕಾಂತರಾಜ್ ರವರು ಅತಿಥಿಗಳಾಗಿದ್ದು ಆಗಮಿಸಿದ್ದು ಕಾರ್ಯಕ್ರಮ ಕುರಿತಾಗಿ ಯುವಕರಿಗೆ ಉದ್ಯೋಗವಕಾಶಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ದೊರೆಯಲಿದೆ ಅದರ ಸದುಪಯೋಗ ಪಡೆದು ಕೊಳ್ಳಿ ಎಂದು ತಿಳಿಸಿದರು.
ನೆಹರು ಯುವ ಕೇಂದ್ರದ, ಜಿಲ್ಲಾ ಯುವ ಅಧಿಕಾರಿಯಾದ ಶ್ರೀ. ಉಲ್ಲಾಸ್ ಕೆ.ಟಿ.ಕೆ ಯವರು ಕಾರ್ಯಕ್ರಮ ಕುರಿತಾದ ಪ್ರಾಸ್ತಾವಿಕ ನುಡಿಗಳನು ತಿಳಿಸಿದರು.
ಭಾಷಣ ಸ್ಪರ್ಧೆಯ ತೀರ್ಪುಗಾರರಾಗಿ, ಸಹ್ಯಾದ್ರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಹಾ.ಮ.ನಾಗರ್ಜುನ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಿಂದಿ ಉಪನ್ಯಾಸಕರಾದ ಶ್ರೀಮತಿ. ಸತಿಭಾರತಿ ಮತ್ತು ಸಿ.ಬಿ.ಆರ್ ಕಾಲೇಜಿನ ಉಪನ್ಯಾಸಕರಾದ ಶ್ರೀ. ಬಸವರಾಜು ಕೆ.ಸಿ ರವರು ಉಪಸ್ಥಿತರಿದ್ದರು.
Viksit Bharat ಸ್ಪರ್ಧೆಯಲ್ಲಿ ವಿಜೇತರಾದವರು ಪ್ರಥಮ ಸ್ಥಾನ ಅಲ್ತಾಫ್ ರೆಹಮಾನ್, ದ್ವಿತೀಯ ಮನೋಜ ಸುರೇಶ ಶೆಟ್ಟಿ, ತೃತೀಯ ಸ್ಥಾನ ಸಲೋನಿ ಸಿಂಗ್ ರವರು ಪಡೆದು ಕೊಂಡಿರುತ್ತಾರೆ.ವಿಜೇತಾರಾದವರಿಗೆ ಪಾರಿತೋಷಕ ಹಾಗೂ ಪ್ರಮಾಣ ಪತ್ರವನ್ನು ನೀಡಲಾಯಿತು. ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಯು ರಾಜ್ಯಮಟ್ಟದಲ್ಲಿ ಭಾಗವಹಿಸಲು ಆರ್ಹರಾಗಿರುತ್ತಾರೆ. ಇವರು ನಮ್ಮ ಜಿಲ್ಲೆಯ ಪರವಾಗಿ ರಾಜ್ಯ ಮಟ್ಟದಲ್ಲಿ ಗೆದ್ದು ಬರಲಿ ಎಂದು ಆಶಿಸುತ್ತೇವೆ. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಲೆಖ್ಖಾಧಿಕಾರಿಯಾದ ರಮೇಶ್, ಯುವ ಕಾರ್ಯಕರ್ತರಾದ ದುತೀಂದ್ರ, ಸಂಜು, ಹೇಮಂತ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.