Sports News ಜನವರಿ 3ನೇ ತಾರೀಖಿನಿಂದ 6
ರವರೆಗೆ ರಾಜಸ್ಥಾನದ ಸುರೇಶ ಜ್ಞಾನ ವಿಹಾರ ವಿಶ್ವವಿದ್ಯಾಲಯದಲ್ಲಿ ಸ್ಕ್ವಾಯ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಸ್ಕ್ವಾಯ್ ಅಸೋಸಿಯೇಷನ್ ಆಫ್ ರಾಜಸ್ಥಾನ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 24ನೇ ರಾಷ್ಟ್ರೀಯ ಸ್ಕ್ವಾಯ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಶಿವಮೊಗ್ಗ ಜಿಲ್ಲೆಯ ಕಲ್ಲು ಗಂಗೂರು ಕರಾಟೆ ಮತ್ತು ಕ್ರೀಡಾ ತರಬೇತಿ ಕೇಂದ್ರದ ಸ್ಕ್ವಾಯ್ ತರಬೇತಿದಾರ ರಮೇಶ್ ರವರ ವಿದ್ಯಾರ್ಥಿ ಹಾಗೂ ಶ್ರೀಮತಿ ಸುಮಾ ರಾಮಚಂದ್ರ ದಂಪತಿಗಳ ಪುತ್ರ ಡಿವಿಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ
ಶಶಾಂಕ್ ಆರ್ 18 ವರ್ಷ ವಯೋಮಿತಿ ಒಳಗಿನ ಖವಂಕೀ ವಿಭಾಗದಲ್ಲಿ ಭಾಗವಹಿಸಿದ್ದರು.
Sports News ಕಂಚಿನ ಬಹುಮಾನ ಪಡೆದಿದ್ದು
ವಿಜೇತ ಕ್ರೀಡಾಪಟು ಶಿವಮೊಗ್ಗ ಜಿಲ್ಲೆಯಿಂದ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಸ್ಕ್ವಾಯ್ ಕ್ರೀಡೆಗೆ ಸ್ಪರ್ಧಿಯಾಗಿ ಭಾಗವಹಿಸಿದ್ದು
ಜಿಲ್ಲೆಗೆ ಮೊದಲ ಪ್ರಯತ್ನದಲ್ಲಿ ತೃತೀಯ ಸ್ಥಾನ ಬಂದಿದ್ದು
ಸ್ಕ್ವಾಯ್ ಕ್ರೀಡೆಯಲ್ಲಿ ಜಿಲ್ಲೆಯ ಕ್ರೀಡಾಪಟು ಇತಿಹಾಸ ಸೃಷ್ಟಿಸಿದ್ದು
ಸ್ಕ್ವಾಯ್ ಫೆಡರೇಶನ್ ಆಫ್ ಇಂಡಿಯಾ ಭಾರತ ಸರ್ಕಾರದಿಂದ ಹಾಗೂ ಭಾರತ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು ಇಂತಹ ಸಂಸ್ಥೆಯ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿ
ಬಹುಮಾನ ಪಡೆದಿರುವ ಕ್ರೀಡಾಪಟು ಶಿವಮೊಗ್ಗ ಗ್ರಾಮೀಣ ಭಾಗದ ಪ್ರತಿಭೆಯಾಗಿದ್ದು ಇವರಿಗೆ ಕಲ್ಲು ಗಂಗೂರು ಗ್ರಾಮಸ್ಥರು ಶುಭ ಕೋರಿದ್ದು ಹಾಗೂ ಕ್ರೀಡಾಪಟು ಶಿವಮೊಗ್ಗ ನಗರ ಸ್ಕ್ವಾಯ್ ಸಂಸ್ಥೆಯ ಅಧ್ಯಕ್ಷರಾದ ಆರ್ ರಮೇಶ್ ರವರ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದ್ದು ವಿಜೇತ ಕ್ರೀಡಾಪಟುವಿಗೆ ಹಾಗೂ ಕೋಚ್ ರಮೇಶ್ ರವರಿಗೆ
ಸ್ಕ್ವಾಯ್ ಅಸೋಸಿಯೇಷನ್ ಆಫ್ ಕರ್ನಾಟಕ ದ ಉಪಾಧ್ಯಕ್ಷರಾದ ಶಿವಮೊಗ್ಗ ವಿನೋದ್ ಅಭಿನಂದನೆ ತಿಳಿಸಿದ್ದಾರೆ.