Kannada Rajyotsava ಚಿರಂತನ ಯೋಗಾ ಮತ್ತು ಸಂಗೀತ ಟ್ರಸ್ಟ್, ಭಾವನ ಹಾಗೂ ವಿಕಾಸರಂಗ ಇವರ ಸಂಯುಕ್ತಾಶ್ರಯದಲ್ಲಿ ನಿನ್ನೆ ಸಂಜೆ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಚಲನಚಿತ್ರದಲ್ಲಿ ಅಳವಡಿಸಲಾದ ಕವಿಗಳ ಗೀತಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಖ್ಯಾತ ಸಂಗೀತ ನಿರ್ದೇಶಕ ಹಿನ್ನಲೆ ಗಾಯಕ ಕೆ.ಗುರುರಾಜ್ ಉದ್ಘಾಟಿಸಿ ಮಾತನಾಡಿ, ಇತಂಹ ಕಾರ್ಯಕ್ರಮಗಳು ಪ್ರತಿಭೆಗಳಿಗೆ ಅವಕಾಶ ನೀಡುತ್ತವೆ. ಸಂಗೀತ ಕಲಿಯುವ ಆಸಕ್ತಿಯನ್ನು ಬೆಳೆಸುತ್ತವೆ. ಸಂಗೀತ ಕೂಡ ಒಂದು ಅದ್ವಿತೀಯ ಪ್ರಪಂಚವಾಗಿದೆ. ಇದು ಪ್ರಪಂಚದ ಭಾಷೆ ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಹೆಚ್.ವಿಶಾಲಾಕ್ಷಿ ಮಾತನಾಡಿ, ಹಳೇಯ ಸಿನಿಮಾ ಹಾಡುಗಳು ಮಾಧುರ್ಯದಿಂದ ಕೂಡಿದೆ. ಇಲ್ಲಿ ಆಕರ್ಷಣೆ ಇದೆ. ಒಂದು ಸೆಳೆತವಿದೆ. ಕನ್ನಡದ ಅಭಿಮಾನವಿದೆ. ಶಾಂತಿ ಶೆಟ್ಟಿ ಅವರು, ಇತಂಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ. ಅವರು ದೂರದ ಸಿಡ್ನಿಯಲ್ಲೂ ಕೂಡ ಕನ್ನಡವನ್ನು ಮೊಳಗಿಸಿದವರು ಎಂದರು.
ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಾರ್ಯಕ್ರಮ ಆಯೋಜಕಿ ಶಾಂತ ಎಸ್.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಳೇಯ ಹಾಡುಗಳೆಂದರೆ ಸವಿ ನೆನಪು ಮೂಡಿ ಬರುತ್ತದೆ. ಅದರಲ್ಲೂ ಕವಿಗಳು ರಚಿಸಿದ ಹಾಡುಗಳನ್ನು ಚಲನಚಿತ್ರ ಗೀತೆಗಳಲ್ಲಿ ಬಳಸಿಕೊಂಡಿದ್ದಾರೆ. ಪ್ರೇಮ ಕವಿ ಕೆ.ಎಸ್.ನರಸಿಂಹ ಸ್ವಾಮಿ, ದರಾ ಬೇಂದ್ರೆ, ಕುವೆಂಪು ಸೇರಿದಂತೆ ನಾಡಿನ ಪ್ರಖ್ಯಾತ ಕವಿಗಳ ಕವಿತೆಗಳನ್ನು ಚಲನಚಿತ್ರಗಳಲ್ಲಿ ಬಳಸಿಕೊಂಡಿದ್ದಾರೆ. ಅತಂಹ ಗೀತೆಗಳನ್ನು ಪರಿಯಿಸುವ ದೃಷ್ಠಿಯಿಂದ ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಗೆಲುವು ಮುಖ್ಯವಲ್ಲ. ಅನುಭವ ಪಡೆಯುವುದು ಮುಖ್ಯ. ಚಲನಚಿತ್ರಗಳಲ್ಲಿ ಹಾಡು ಬರೆದಿರುವವರು ಎಲ್ಲಾರೂ ಒಂದು ರೀತಿಯಲ್ಲಿ ಕವಿಗಳೇ ಆಗಿರುತ್ತಾರೆ ಎಂದರು.
ಗಾಯನ ಸ್ಪರ್ಧೆಯಲ್ಲಿ ಆದ್ಯ ಮೊದಲ ಬಹುಮಾನ ಮಧುರಾ ನಾಗರಾಜ್, 2ನೇ ಬಹುಮಾನ ಮಂಜುನಾಥ್ ಕೆ.ಎಸ್.
3ನೇ ಬಹುಮಾನ ಭರತ್ ಸಮಾಧಾನಕರ ಬಹುಮಾನ ಪಡೆದರು.
Kannada Rajyotsava ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಚಂದ್ರಕಲಾ ಎಸ್.ಬಿ., ಪ್ರಮುಖರಾದ ಜಿ.ವಿಜಯ್‌ಕುಮಾರ್, ಭದ್ರಾವತಿ ವಾಸು, ಬ್ಯಾಂಕ್ ಸುರೇಶ್ ಶೆಟ್ಟಿ, ಪುಷ್ಪ ಎಸ್.ಶೆಟ್ಟಿ ಸೇರಿದಂತೆ ಹಲವರಿದ್ದರು.