Juvenile Justice Act ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳು ಬಾಲನ್ಯಾಯ ಕಾಯ್ದೆ 2015 ರಡಿ ನೋಂದಣಿ ಮತ್ತು ನವೀಕರಣಗೊಂಡ ಪ್ರಮಾಣ ಪತ್ರ ಪಡೆದು ಕಾರ್ಯ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ.
ಆದ್ದರಿಂದ ಸಂಸ್ಥೆಗಳು ಬಾಲನ್ಯಾಯ ಕಾಯ್ದೆ 2015 ರಡಿ ನೋಂದಣಿಯಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. ನೋಂದಣಿಯಾಗದೇ ಇದ್ದಲ್ಲಿ ನೋಂದಣಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸುವುದು. ಒಂದು ವೇಳೆ ನೋಂದಣಿಯಾಗದೇ ಮಕ್ಳಳ ಪಾಲನಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದರೆ, ಇಲಾಖಾ ಅಧಿಕಾರಿಗಳ ಪರಿಶೀಲನೆ ಸಂದರ್ಭದಲ್ಲಿ ಇದು ಕಂಡು ಬಂದರೆ ಅವರ ವಿರುದ್ದ ಬಾಲನ್ಯಾಯ ಕಾಯ್ದೆ-2015 ರ ಸೆಕ್ಷನ್ 33, 34, 41, 42 ಮತ್ತು 75 ರಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಜಿಲ್ಲೆಯಲ್ಲಿ ಇಲಾಖೆಯ ಅನುಮತಿ ಪಡೆಯದೆ ನೋಂದಾಯಿತವಲ್ಲದ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ 18 ವರ್ಷದ ಒಳಗಿನ ಮಕ್ಕಳನ್ನು ಇಟ್ಟುಕೊಳ್ಳುವುದು ಪಾಲನೆ ಮತ್ತು ಪೋಷಣೆ ನಡೆಸುತ್ತಿರುವ ಮಾಹಿತಿ ಇದ್ದಲ್ಲಿ, ಸದರಿ ಸಂಸ್ಥೆಗಳ ಮಾಹಿತಿಯನ್ನು ಜಿಲ್ಲಾ Juvenile Justice Act ಮಕ್ಕಳ ರಕ್ಷಣಾ ಘಟಕ, ಆಲ್ಕೊಳ, ಸಿವಮೊಗ್ಗ, ದೂ.ಸಂ: 08182-295709 ನ್ನು ಸಂಪರ್ಕಿಸಿ ಜ.20 ರೊಳಗಾಗಿ ಮಾಹಿತಿ ನೀಡಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾದಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಮೊಗ್ಗ ಇವರು ತಿಳಿಸಿದ್ದಾರೆ.