Monday, February 2, 2026
Monday, February 2, 2026

Department of Veterinary Services ಪಶು ಆಹಾರೋತ್ಪನ್ನ ಘಟಕಗಳು & ಮಾರಾಟ ಮಳಿಗೆಗಳು,ಸಂಘ ಸಂಸ್ಥೆಗಳಿಗೆ ಲೈಸನ್ಸ್ ಕಡ್ಡಾಯ

Date:

Department of Veterinary Services ಕುಕ್ಕುಟ (ಕೋಳಿ) ಮತ್ತು ಜಾನುವಾರು (ಪಶು) ಆಹಾರ ತಯಾರಿಕಾ ಘಟಕಗಳು ಮತ್ತು ಮಾರಾಟ ಮಾಡುವ ಅಂಗಡಿ ಮತ್ತು ಸಂಘ ಸಂಸ್ಥೆಗಳು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಸರಿಯಾದ ಗುಣಮಟ್ಟದ ಕೋಳಿ, ಜಾನುವಾರು ಆಹಾರ ಉತ್ಪಾದಿಸಲು ಮತ್ತು ಮಾರಾಟ ಮಾಡಲು ಪರವಾನಗಿ (ಲೈಸೆನ್ಸ್) ಪಡೆಯುವುದು ಕಡ್ಡಾಯವಾಗಿದೆ.
ಈಗಾಗಲೇ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮತ್ತು ಸ್ಥಳೀಯವಾಗಿ ಕೈಗಾರಿಕಾ ಇಲಾಖೆಯಿಂದ ಪರವಾನಗಿ ಪಡೆದಿದ್ದರೂ ಕೂಡ ಕರ್ನಾಟಕ ಕುಕ್ಕುಟ, ಜಾನುವಾರು ಆಹಾರ ಆಜ್ಞೆ 1987 ರ ಪ್ರಕಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಮತ್ತು ಈ ರೀತಿ ಪಡೆದ ಪರವಾನಗಿಯು ಪ್ರತಿ ವರ್ಷ ಡಿಸೆಂಬರ್-31 ಕ್ಕೆ ಮುಕ್ತಾಯವಾಗುವುದರಿಂದ ನವೀಕರಣವನ್ನು ಜನವರಿ-01 ರಿಂದ ಪಡೆಯಬೇಕಾಗಿರುತ್ತದೆ.

ಪ್ರಸ್ತುತ ವರ್ಷ 2024ನೇ ಸಾಲಿಗೆ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು ನೂತನ ಪರವಾನಗಿ ಪಡೆಯಲು ಮತ್ತು ನವೀಕರಿಸಲು ಸೇವಾ ಸಿಂಧು ಎಂಬ ಜಾಲತಾಣವನ್ನು ಪ್ರಾರಂಭಿಸಲಾಗಿದ್ದು, ಕುಕ್ಕುಟ, ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು sevasinndhusevices.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಸೂಕ್ತ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಪರವಾನಗಿ ಪಡೆಯಲು ಕೋರಲಾಗಿದೆ.

Department of Veterinary Services

ಪರವಾನಗಿ ಪಡೆಯದೆ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು (ಉತ್ಪಾದನೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987 ರ ಕಂಡಿಕೆ 8, 9(1) ಹಾಗೂ 11(1)(ಅ) ಪ್ರಕಾರ ನಿಯಮಾನುಸಾರ ಕ್ರಮವಹಿಸಲಾಗುವುದು. ಮತ್ತು ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುಪಾಲನಾ ಇಲಾಖೆಯ ಸಂಸ್ಥೆಗಳನ್ನು ಸಂಪರ್ಕಿಸಬಹುದೆಂದು ಪರವಾನಗಿ ಪ್ರಾಧಿಕಾರ ಮತ್ತು ಉಪನಿರ್ದೇಶಕರು, ಜಿಲ್ಲಾ ಪಶು ಆಸ್ಪತ್ರೆ, ಪಾಲಿಕ್ಲಿನಿಕ್, ಕುವೆಂಪು ನಗರ, ಶಿವಮೊಗ್ಗದ ಡಾ. ಬಸವೇಶ ಹೂಗಾರ ಮೊ.ಸಂ– 9980253737 ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...