Ram Mandir Ayodhya ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಉಳಿದಿದೆ. ಅಯೋಧ್ಯೆಯ ಶ್ರೀ ರಾಮನ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ವಿಶೇಷ ರೈಲುಗಳನ್ನು ಬಿಡಲಾಗಿದೆ.
ಅದೇ ರೀತಿ ಬೆಂಗಳೂರಿನಿಂದಲೂ ಸಹ ವಿಶೇಷ ರೈಲುಗಳನ್ನು ಬಿಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಹಾಗಾದ್ರೆ, ರೈಲುಗಳ ಟೈಂ, ಆರಂಭವಾಗುವ ದಿನಾಂಕಗಳ ಮಾಹಿತಿ ಇಲ್ಲಿವೆ…
ರೈಲು ಸಂಖ್ಯೆ 15024 ಯಶವಂತಪುರ-ಗೋರಖ್‌ಪುರ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್. ಈ ರೈಲು ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40ಕ್ಕೆ ಹೊರಟು ಮರುದಿನ ಸಂಜೆ 04:26ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ರೈಲು ಸಂಖ್ಯೆ 22534 ಯಶವಂತಪುರ ಗೋರಖ್‌ಪುರ ನಡುವೆ ಎಕ್ಸ್‌ಪ್ರೆಸ್ ಈ ರೈಲು ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40 ಕ್ಕೆ ಹೊರಟು ಮರುದಿನ ಸಂಜೆ 03:50ಕ್ಕೆ ನಿಗೋರಖ್‌ಪುರವನ್ನು ತಲುಪುತ್ತದೆ.
ರೈಲು ಸಂಖ್ಯೆ 12592 ಯಶವಂತಪುರ ಗೋರಖ್‌ಪುರ ನಡುವೆ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಯಶವಂತಪುರದಿಂದ ಸಂಜೆ 05:20ಕ್ಕೆ ಹೊರಟು ಮರುದಿನ ಸಂಜೆ 01:17ಕ್ಕೆ ನಿಗದಿತ ಸ್ಥಳವನ್ನು ತಲುಪುತ್ತದೆ.
ಅಯೋಧ್ಯೆಗೆ ಸಾಮಾನ್ಯ ಟಿಕೆಟ್ ದರ ಬೆಲೆ 840.99 ರೂಪಾಯಿ ಆಗಿದೆ. ಪ್ರಥಮ ದರ್ಜೆ ಟಿಕೆಟ್ ದರ 2,183.79 ರೂಪಾಯಿ ಆಗಿದ್ದು, ಅಯೋಧ್ಯೆಗೆ ಮೊದಲ ರೈಲು ಬೆಳಗ್ಗೆ 3:10 ಆಗಿದ್ದು, ಕೊನೆಯ ರೈಲು ರಾತ್ರಿ 11:40ಕ್ಕೆ ಹೊರಡಲಿದೆ.
ಬೆಂಗಳೂರಿನಿಂದ ಅಯೋಧ್ಯೆಗೆ ತಡೆರಹಿತ ಪ್ರಯಾಣ ನಡೆಸಲು ಮುಂಚಿತವಾಗಿ ರೈಲ್ವೇ ಟಿಕೆಟ್ ಬುಕ್ ಮಾಡಬಹುದಾಗಿದೆ. ಪ್ರಯಾಣಿಕರು ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಬೆಂಗಳೂರಿನಿಂದ ಅಯೋಧ್ಯೆಗೆ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.
Ram Mandir Ayodhya ಭಾರತೀಯ ರೈಲ್ವೇಯ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಆನ್‌ಲೈನ್ ಬುಕಿಂಗ್ ಮಾಡಬಹುದು. ಅಲ್ಲಿ ಪ್ರಯಾಣಿಕರು ಆಸನ ಲಭ್ಯತೆಯನ್ನು ಪರಿಶೀಲಿಸಿ ಅನುಕೂಲಕರವಾದ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಐಆರ್‌ಸಿಟಿಸಿ ಅಧಿಕೃತ ರೈಲ್‌ಮಿತ್ರದ ಸಹಯೋಗದೊಂದಿಗೆ 450ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಇ-ಕೇಟರಿಂಗ್ ಸೇವೆಗಳನ್ನು ಒದಗಿಸಲಾಗಿದೆ.