Monday, February 2, 2026
Monday, February 2, 2026

Bhima Koregaon Victory ಗ್ರಾಮೀಣ ಪರಂಪರೆಯ ಜೋಡೆತ್ತಿನ ಗಾಡಿ ಸ್ಪರ್ಧೆ ರಂಜನೀಯ-ವಿಜಯ್ ಕುಮಾರ್

Date:

Bhima Koregaon Victory ಗ್ರಾಮೀಣ ಸೊಬಗಿನ ಜೋಡೆತ್ತಿನ ಗಾಡಿ ಕ್ರೀಡೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅತಿಹೆಚ್ಚು ಯುವಕರು ಉತ್ತೇಜನ ನೀಡುತ್ತಾ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ವಿಜಯ್‌ಕುಮಾರ್ ಹೇಳಿದರು.

ಮಾಗಡಿ ಗ್ರಾಮದ ಸಮೀಪದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಪ್ರಯುಕ್ತ ಏರ್ಪಡಿ ಸಿದ್ದ ಪ್ರಥಮ ವರ್ಷದ ರಾಜ್ಯಮಟ್ಟದ ಜೋಡೆತ್ತಿನಗಾಡಿನ ಸ್ಪರ್ಧೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಪರಂಪರೆ ಹೆಚ್ಚಿಸಲು ಇಂತಹ ಜೋಡಿ ಎತ್ತಿನ ಗಾಡಿಯ ಓಟದ ಸ್ಪರ್ಧೆಯನ್ನು ಆಯೋಜಿ ಸಿರುವುದು ಖುಷಿಯ ಸಂಗತಿ. ರಾಜ್ಯದ ಅನೇಕ ಜಿಲ್ಲೆಗಳಿಂದ ಆಗಮಿಸಿದ ಜಾನುವಾರುಗಳನ್ನು ವಿಶಿಷ್ಟ ರೀತಿಯಲ್ಲಿ ಶೃಂಗರಿಸಿ ಕ್ರೀಡೆಯಲ್ಲಿ ಕರೆತಂದಿರುವುದು ಸಂತಸ ಎಂದರು.

ಮುಗುಳುವಳ್ಳಿ ಗ್ರಾ.ಪಂ. ಮಾಜಿ ಅದ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ ಗ್ರಾಮೀಣ ಭಾಗದ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮಸ್ಥರು ಹಾಗೂ ಯುವಕರು ಜೋಡೆತ್ತಿನಗಾಡಿ ಸ್ಪರ್ಧೆಯನ್ನು ಆಯೋಜಿ ಸಿರುವುದು ಒಳ್ಳೆಯ ವಿಷಯ. ಜೊತೆಗೆ ರೈತಾಪಿ ವರ್ಗದ ಜೋಡಿ ಎತ್ತಿನಗಾಡಿ ಸ್ಪರ್ಧೆ ನೋಡುಗರರಿಗೆ ಇನ್ನಷ್ಟು ಮನರಂಜನೆ ನೀಡಲಿದೆ ಎಂದು ತಿಳಿಸಿದರು.

Bhima Koregaon Victory ಸ್ಪರ್ಧೆಯ ಆಯೋಜಕ ಕಾಂತರಾಜು ಮಾತನಾಡಿ ಕೋರೆಗಾಂವ್ ವಿಜಯೋತ್ಸವ ಜೋಡೆತ್ತಿನ ಸ್ಪರ್ಧೆಯ ನ್ನು ಆಯೋಜಿಸಿದ್ದು ಸುಮಾರು ೫೦ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ. ಪ್ರಥಮ ಬಹುಮಾನ 60 ನಗದು, ಪಾರಿತೋಷಕ, ದ್ವಿತೀಯ 40 ಸಾವಿರ ನಗದು ಪಾರಿತೋಷಕ, ತೃತೀಯ 30 ಸಾವಿರ ನಗದು ಪಾರಿತೋಷಕ ಹಾಗೂ ನಾಲ್ಕನೇ ಸ್ಥಾನಕ್ಕೆ 20 ಸಾವಿರ ನಗದು ಪಾರಿತೋಷಕ ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್, ಉಮೇಶ್, ಗ್ರಾಮದ ಹಿರಿಯ ಮುಖಂಡ ಎಂ.ಎಸ್.ಮಂಜುನಾಥ್, ಆಯೋಜಕರಾದ ನವೀನ್, ಪುನೀತ್, ಮುಖಂಡರುಗಳಾದ ಕುರುವಂಗಿ ವೆಂಕಟೇಶ್, ಕೇಶವ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...