Saturday, December 6, 2025
Saturday, December 6, 2025

Bapuji Educational Association ಮನಸ್ಥಿತಿ ಸರಿ ಇದ್ದರೆ ಪರಿಸ್ಥಿತಿ ಚೆನ್ನಾಗಿರುತ್ತದೆ- ಜಗನ್ನಾಥ ನಾಡಿಗೇರ್

Date:

Bapuji Educational Association ಪದವಿಪೂರ್ವ ಶಿಕ್ಷಣ ಅವಧಿಯು ಗೊಂದಲದ ಗೂಡೆಂದು ಭಾವಿಸಬಾರದು, ಇದು ಭವಿಷ್ಯದ ನಿರ್ಧಾರ ಕೈಗೊಳ್ಳುವ ಪರ್ವಕಾಲ, ಇದಕ್ಕಾಗಿ ಕಠಿಣ ಪರಿಶ್ರಮವು ಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಸಂಪನ್ನ ಮುತಾಲಿಕ್ ದೇಸಾಯಿ ಅಭಿಪ್ರಾಯ ಪಟ್ಟರು.

ಅವರಿಂದು ದಾವಣಗೆರೆ, ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ ಹಾಗೂ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಸಾಮಾನ್ಯವಾಗಿ ಎಲ್ಲರೂ ಇಂಜಿನಿಯರಿಂಗ್ ಮೆಡಿಕಲ್ ಕೋರ್ಸ್ ಗಳ ಬಗ್ಗೆಯೇ ಆಕರ್ಷಿತರಾಗುತ್ತಾರೆ, ಆದರೆ ಹೆಚ್ಚು ಉದ್ಯೋಗಾವಕಾಶಗಳಿರುವ ಅನೇಕ ಬೇರೆ ಪದವಿಗಳೂ ಇದ್ದು ಅವುಗಳ ಪೈಕಿ ಸಕ್ಕರೆ ಉದ್ಯಮಕ್ಕೆ ಸಂಬಂಧಪಟ್ಟ ಪದವಿಯೂ ಒಂದಾಗಿದೆ, ಎಥೆನಾಲ್ ಸಂಯುಕ್ತ ಇಂಧನದ ಬಳಕೆ ರೂಢಿಗೆ ಬರುತ್ತಿದ್ದು ಸಕ್ಕರೆ ಕೈಗಾರಿಕೋದ್ಯಮವು ಎಥೆನಾಲ್ ಉತ್ಪಾದನೆಗೂ ಸಂಬಂಧಿಸಿದ್ದು ನಮ್ಮ ರಾಜ್ಯದಲ್ಲೇ ಸುಮಾರು 75 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು ಈ ಕೋರ್ಸ್ ಮಾಡಿದವರಿಗೆ ಉದ್ಯೋಗ ಅವಕಾಶಗಳು ಹೇರಳವಾಗಿವೆ ಎಂದರು.

ಯಾವುದೇ ಸೋಲಿನ ಬಗ್ಗೆ ಮನೋ ಕ್ಷೋಭೆಗೆ ಒಳಗಾಗದೆ ಗೆಲುವಿನ ಚಿಂತನೆಗೆ ಇದು ಕಾರಣ ಎಂದು ಭಾವಿಸಿದಲ್ಲಿ ಯಶಸ್ಸು ಸಾಧ್ಯ ಎಂದರಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ತರಬೇತಿಯನ್ನು ಈ ಕಾಲೇಜಿನಲ್ಲಿ ಒದಗಿಸುವ ಬಗ್ಗೆ ಆಡಳಿತ ಮಂಡಳಿಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು.

Bapuji Educational Association ಮುಖ್ಯ ಅತಿಥಿಗಳಾಗಿ ಮಾತನಾಡಿದ ಪತ್ರಿಕಾ ಅಂಕಣಕಾರರು ಶೈಕ್ಷಣಿಕ ಸಲಹೆಗಾರರೂ ಆದ ಜಗನ್ನಾಥ ನಾಡಿಗೇರ್ ಮನಸ್ಥಿತಿ ಚೆನ್ನಾಗಿದ್ದರೆ ಪರಿಸ್ಥಿತಿ ಚೆನ್ನಾಗಿರುತ್ತದೆ, ಭಯಪಟ್ಟರೆ ಮನಸ್ಥಿತಿ ಕುಗ್ಗುತ್ತದೆ. ಸ್ವತಂತ್ರವಾದ ಆಲೋಚನೆ ಯೊಂದಿಗೆ ಅಭ್ಯಾಸ ಮತ್ತು ಹವ್ಯಾಸಗಳು ಉತ್ತಮವಾಗಿರಬೇಕು. ಪರೀಕ್ಷೆಯ ಬಗ್ಗೆ ಹೆದರದೆ ಸಮಯ, ಶಕ್ತಿ ಹಾಗೂ ಆಸಕ್ತಿಗಳನ್ನು ಅದಕ್ಕೆ ಕೊಟ್ಟಾಗ ಅದು ಉತ್ತಮ ಫಲಿತಾಂಶವನ್ನು ಕೊಡುತ್ತದೆ. ಸಾಧನೆ ಎಂಬುದಕ್ಕೆ ಅಂತ್ಯವಿಲ್ಲ, ಅಭಿವೃದ್ಧಿಯ ದಾಪುಗಾಲು ಇಡುತ್ತಿರುವ ಭಾರತಕ್ಕೆ ಈಗ ಸಾಧಕರು ಬೇಕಾಗಿದ್ದಾರೆ, ಇಂತಹ ಸಾಧಕರು ನೀವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸ್ವಾರಸ್ಯಕರ ಉದಾಹರಣೆಗಳ ಸಹಿತ ತಿಳಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ತಂತ್ರಾಂಶ ಇಂಜಿನಿಯರ್ ಅಭಿಲಾಶ್ ಹೆಚ್ ಬಿ ಹಾಗೂ ಹರಿಹರ ವಿಭಾಗದ ಅರಣ್ಯಾಧಿಕಾರಿ ಮೊಹಮ್ಮದ್ ಖಾಲಿದ್ ಮುಸ್ತಾಬ್ ರನ್ನು ಸನ್ಮಾನಿಸಲಾಯ್ತು, ಇವರೀರ್ವರೂ ವಿದ್ಯಾರ್ಥಿ ದೆಸೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡು ಸಾಧನೆಯ ಮಾರ್ಗಗಳನ್ನು ಹೇಳಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜನ ಪ್ರಾಚಾರ್ಯ ಪ್ರೊ. ಎಂ ಪಿ ರುದ್ರಪ್ಪನವರು ಸಾಧಕರ ಅನುಭವಗಳ ಆಲಿಸುವಿಕೆ ಹಾಗೂ ಪಾಲಿಸುವಿಕೆ ಯಶಸ್ಸಿಗೆ ಸೋಪಾನ ಎಂದರು.

ವಿದ್ಯಾರ್ಥಿಗಳಾದ ಸಹನಾ ಮತ್ತು ರುಕ್ಮಿಣಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸುಪ್ರೀತಾ ಹಾಡಿದರೆ ಸ್ವಾಗತವನ್ನು ಅಭಿಲಾಷ ಕೋರಿದರು.

ಅತಿಥಿಗಳ ಪರಿಚಯವನ್ನು ಸುವಿಧ, ಮೆಹರ್ ಮುಂತಾದವರು ಮಾಡಿದರೆ ವಾರ್ಷಿಕ ವರದಿ ವಾಚನವನ್ನು ಭೌತಶಾಸ್ತ್ರ ಉಪನ್ಯಾಸಕ ಉಮೇಶ್ ನೆರವೇರಿಸಿದರು. ಬಹುಮಾನ ವಿತರಣಾ ಪ್ರಸ್ತುತಿಯನ್ನು ಇಂಗ್ಲೀಷ್ ಭಾಷಾ ಉಪನ್ಯಾಸಕ ಕೆ ಸಿ ವಿಜಯಕುಮಾರ್, ಜೀವಶಾಸ್ತ್ರ ಉಪನ್ಯಾಸಕಿ ಎಲ್ ಎಸ್ ಶರ್ಮಿಳಾ ನೆರವೇರಿಸಿದರೆ ವಂದನೆಗಳನ್ನು ಮೇಘನಾ ಸಮರ್ಪಿಸಿದರು.

ಬೋಧಕ ವರ್ಗದ ಕೆ ಸಿ ಶಿವಶಂಕರ್,ಹೆಚ್ ಜಿ ಚೇತನ್, ಕೆ ಸಿ ಶ್ರುತಿ, ಟಿ ಎಂ ಗಗನ್,ಎನ್ ಕೆ ರವಿ, ಬಿ ಎಂ ಶಿವಕುಮಾರ್ ಮುಂತಾದವರು ಭಾಗವಹಿಸಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಸಹನಾ ರಾಯ್ಕರ್, ಲಕ್ಷ್ಮೀ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...