Saturday, December 6, 2025
Saturday, December 6, 2025

Shivamogga City Corporation ಶಿವಮೊಗ್ಗ ನಗರವ್ಯಾಪ್ತಿಯಲ್ಲಿ ಅಂಗಡಿ/ ಉದ್ದಿಮೆ/ ಮಳಿಗೆಗಳು ನಾಮಫಲಕದಲ್ಲಿ ಶೇ 60 ಕನ್ನಡ ಬಳಕೆ ಕಡ್ಡಾಯ

Date:

Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಂಗಡಿ/ ಉದ್ದಿಮೆ/ಮಳಿಗೆಗಳು ಮತ್ತು ಸಂಘ-ಸಂಸ್ಥೆಗಳು ಅಥವಾ ಇತರೆ ಯಾವುದೇ ರೀತಿಯ ಪ್ರದರ್ಶನ ಫಲಕಗಳು, ಜಾಹೀರಾತು ಫಲಕಗಳು ಕನಿಷ್ಠ ಶೇ.60 ರಷ್ಟು ಕಡ್ಡಾಯವಾಗಿ ಕರ್ನಾಟಕದ ಆಡಳಿತ ಭಾಷೆಯಾದ ಕನ್ನಡದಲ್ಲಿ ಇರುವಂತೆ ನಾಮಫಲಕಗಳನ್ನು ಅಳವಡಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರು ಸೂಚಿಸಿರುತ್ತಾರೆ.

Shivamogga City Corporation ಯಾವುದೇ ದ್ವಿಭಾಷಾ ಅಥವಾ ಬಹುಭಾಷಾ ಫಲಕಗಳು ಇದ್ದಲ್ಲಿ ಗರಿಷ್ಠ ಪ್ರಮಾಣ ಶೇ. 60 ರಷ್ಟು ಕನ್ನಡದಲ್ಲಿಯೇ ಅಳವಡಿಸಿಕೊಳ್ಳಲು ಎಲ್ಲಾ ಅಂಗಡಿ ಮಾಲೀಕರುಗಳು ಕೂಡಲೇ ಕ್ರಮ ಕೈಗೊಳ್ಳುವುದು. ಕನ್ನಡ ಫಲಕಗಳನ್ನು ಪ್ರದರ್ಶಿಸಲು 15 ದಿನಗಳಲ್ಲಿ ಕ್ರಮವಹಿಸದೇ ಇದ್ದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದಿಂದ ಜಂಟಿ ಸರ್ವೆಗಳನ್ನು ನಡೆಸಿ ಪ್ರತ್ಯೇಕವಾಗಿ ನಿಯಮಾನುಸಾರ ಅಂಗಡಿ/ ಉದ್ದಿಮೆ/ಮಳಿಗೆಗಳು ಮತ್ತು ಸಂಘ-ಸಂಸ್ಥೆಗಳು ಅಥವಾ ಇತರೆ ಯಾವುದೇ ರೀತಿಯ ಪ್ರದರ್ಶನ ಫಲಕಗಳು, ಜಾಹೀರಾತು ಫಲಕಗಳನ್ನು ಅಳವಡಿಸದೇ ಇರುವಂತಹ ಅಂಗಡಿಯ ಮಾಲೀಕರುಗಳಿಗೆ ಅಥವಾ ಸಂಬಂಧಪಟ್ಟಂತ ನಿಯಮ ಉಲ್ಲಂಘನೆ ಮಾಡುವವರಿಗೆ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸುವ ಮತ್ತು ಕರ್ನಾಟಕ ಕಾರ್ಪೋರೇಷನ್ ಕಾಯ್ದೆ 1976ರ ಸಂಬಂಧಪಟ್ಟ ವಿಧಿಗಳ ಅನ್ವಯದಂತೆ ಹಾಗೂ ಪ್ರಚಲಿತ ಕಾನೂನು ನಿಯಮಗಳಂತೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...