Saturday, December 6, 2025
Saturday, December 6, 2025

Speech Contest ನನ್ನ ಭಾರತ-ವಿಕಸಿತ ಭಾರತ ಕುರಿತು ಯುವ ವಾಗ್ಮಿಗಳಿಗೆ ಭಾಷಣ ಸ್ಪರ್ಧೆ

Date:

Speech Contest ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಶಿವಮೊಗ್ಗವು ಯುವ ಜನತೆಗಾಗಿ ಒಂದು ಸುವರ್ಣ ಅವಕಾಶವನ್ನು ತಂದಿದೆ. ಯುವಜನರಲ್ಲಿ ಮಹತ್ವಾಕಾಂಕ್ಷೆ ಬೆಳವಣಿಗೆ ಮತ್ತು ದೇಶಭಕ್ತಿಯ ಮನೋಭಾವವನ್ನು ಬಲಪಡಿಸಲು, ರಾಷ್ಟ್ರನಿರ್ಮಾಣದಲ್ಲಿ ವರ್ಧಿತ ಭಾಗವಹಿಸುವಿಕೆ, ನಾಯಕತ್ವದ ಗುಣಗಳು ಮತ್ತು ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುವ, ಭಾರತದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾತ್ರವಹಿಸುವ ಯುವಕರನ್ನು ಗುರುತಿಸುವುದು ಮುಖ್ಯ ಗುರಿಯಾಗಿದೆ ಹಾಗೂ ಯುವ ವಾಗ್ಮೀಗಳಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಅವರ ಜೊತೆ ಸ್ಪರ್ಧಿಸಲು ವೇದಿಕೆಯನ್ನು ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.

ಇದರನ್ವಯ ನನ್ನ ಭಾರತ-ವಿಕಸಿತ್‌ ಭಾರತ@2047(MY BHARAT-VIKSIT BHARAT@2047)ಎಂಬ ವಿಷಯದ ಕುರಿತು “ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ” ಯನ್ನು ದಿನಾಂಕ 10.01.2024 ರಂದು ಬೆಳಿಗ್ಗೆ 10.00 ಗಂಟೆಗೆ, ಸಿ.ಬಿ.ಆರ್.‌ ರಾಷ್ಟ್ರೀಯ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಭಾಗವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯವರಾಗಿರಬೇಕು. 15 ರಿಂದ 29 ವಯೋಮಿತಿವುಳ್ಳವರಾಗಿರಬೇಕು.ಭಾಷಣವನ್ನು ಕನ್ನಡ, ಹಿಂದಿ, ಇಂಗ್ಲೀಷ್ ನಲ್ಲಿ ಮಾಡಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ಪ್ರಥಮ,ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಪಾರಿತೋಷಕ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಪ್ರಥಮ ಸ್ಥಾನ ಪಡೆದು ವಿಜೇತರಾದ ಅಭ್ಯರ್ಥಿಯು ರಾಜ್ಯಮಟ್ಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ರಾಜ್ಯ ಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ- ರೂ.1,00,000/-, ದ್ವಿತೀಯ-ರೂ.50,000/-, ತೃತೀಯ-ರೂ.25,000/-(ಇಬ್ಬರಿಗೆ) ನಗದು ಬಹುಮಾನವನ್ನು ನೀಡಲಾಗುವುದು .

Speech Contest ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ದಿನಾಂಕ 09.01.2024 ರೊಳಗೆ ಈ ಕೆಳಕಂಡ QR ಕೋಡ್‌ನ್ನು ಸ್ಕ್ಯಾನ್‌ ಮಾಡುವುದರ ಮೂಲಕ ನೋಂದಣಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9961332968, 7975443499 ದೂರವಾಣಿಗೆ ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...