Bhadra Jaljeevan Yojana ಚಿಕ್ಕಮಗಳೂರು, ತಾಲ್ಲೂಕಿನ ಮಾಗಡಿ-ಕೈಮರ ಹಾಗೂ ರಾಮೇದೇವರಹಳ್ಳಿಯ ಗ್ರಾಮ ಸ್ಥರಿಗೆ ಭದ್ರಾ ಜಲಜೀವನ್ ಯೋಜನೆಯಡಿ 29 ಲಕ್ಷ ರೂ. ಅನುದಾನದಲ್ಲಿ ಮಂಜೂರಾಗಿರುವ ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಶಾಸಕಿ ನಯನ ಮೋಟಮ್ಮ ಮಾಗಡಿಯಲ್ಲಿ ಗುರುವಾರ ಗುದ್ದಲಿಪೂಜೆ ನೆರವೇ ರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು ಮುಂದಿನ ಮರ‍್ನಾಲ್ಕು ತಿಂಗಳಲ್ಲಿ ಭದ್ರಾ ಜಲಾಶಯದಿಂದ ಗ್ರಾಮಗಳಿಗೆ ಪೈಪ್‌ಲೈನ್ ಮುಖಾಂತರ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರುವ ಜೊತೆಗೆ ತ್ವರಿತವಾಗಿ ಪೂರೈಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಬಯಲುಸೀಮೆ ಪ್ರದೇಶವಾಗಿರುವ ಈ ಭಾಗದಲ್ಲಿ ಕುಡಿಯುವ ನೀರು ಅತ್ಯಂತ ಮಹತ್ವವನ್ನು ಪಡೆದುಕೊಳ್ಳ ಲಿದೆ. ಆ ನಿಟ್ಟಿನಲ್ಲಿ ಗ್ರಾಮಸ್ಥರು ಕುಡಿಯುವ ನೀರು ಕಾಮಗಾರಿ ಪೂರ್ಣಗೊಂಡ ಬಳಿಕ ಹೆಚ್ಚು ವ್ಯರ್ಥಗೊಳಿಸ ದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಪ್ರಸ್ತುತ ಮಾಗಡಿ ಗ್ರಾಮದಲ್ಲಿ 12 ಎಕರೆ ಸರ್ಕಾರಿ ಜಾಗವಿರುವ ಹಿನ್ನೆಲೆಯಲ್ಲಿ ನಿವೇಶನವನ್ನಾಗಿ ಮಾರ್ಪಾ ಡಿಸಿ ಅರ್ಹ ನಿವೇಶನರಹಿತರಿಗೆ ಹಂಚುವ ಗುರಿ ಹೊಂದಿದ್ದು ಆ ನಿಟ್ಟಿನಲ್ಲಿ ಜಾಗವನ್ನು ಮಟ್ಟಗೊಳಿಸುವ ಕಾರ್ಯ ಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದು ನಿವೇಶನ ಹಂಚುವ ಸಂಬoಧ ಜಾಗಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
Bhadra Jaljeevan Yojana ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಮುಗುಳುವಳ್ಳಿ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ, ಸದಸ್ಯರುಗಳಾದ ಕಲಾವತಿ, ರಘುನಾಥನ್, ಮಲ್ಲೇಶ್, ವನಿತಾ, ಮಾಜಿ ಅಧ್ಯಕ್ಷ ಕೆ.ಎಸ್.ಪ್ರಕಾಶ್, ಕಾಂಗ್ರೆಸ್ ಮು ಖಂಡರುಗಳಾದ ಮುದಪೀರ್, ಎಂ.ವಿಜಯ್‌ಕುಮಾರ್, ಗ್ರಾ.ಪಂ. ಮಾಜಿ ಸದಸ್ಯ ಕೆ.ವಿ.ವಿರೂಪಾಕ್ಷಪ್ಪ, ಗುತ್ತಿಗೆ ದಾರ ರೋಹಿತ್ ಮತ್ತಿತರರು ಹಾಜರಿದ್ದರು.