Chikamagaluru DC Meena Nagaraj ಕಳೆದ ತಿಂಗಳು ನಡೆದ ನಗರಸಭೆಯ ಸಾಮಾನ್ಯಸಭೆ ಊರ್ಜಿತವಲ್ಲ, ಸಭೆಯ ಎಲ್ಲಾ ವಿಷಯಗಳ ಅನುಮೋದನೆಗೆ ತಡೆಯಾಜ್ಞೆ ನೀಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಬಿಜೆಪಿ ಹಾಗೂ ಜೆಡಿಎಸ್ ನಗರಸಭಾ ಸದಸ್ಯರುಗಳು ವಕೀಲರ ಮೂಲಕ ಅಪೀಲು ಸಲ್ಲಿಸಿದರು.
ಈ ಸಂಬoಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ನಗರಸಭಾ ಸದಸ್ಯರು ಗಳು ಸಾಮಾನ್ಯ ಸಭೆಯ ಯಾವುದೇ ವಿಷಯಕ್ಕೂ ಅನುಮೋದನೆ ನೀಡಬಾರದು ವಕೀಲ ದಯಾನಂದ್ ಮುಖಾoತರ ಒತ್ತಾಯಿಸಿದರು.
ವಕೀಲ ದಯಾನಂದ್ ಮಾತನಾಡಿ ತಡೆಯಾಜ್ಞೆ ಅರ್ಜಿ ಸಂಬoಧ ಜ.9ರಂದು ವಿಚಾರಣೆ ನಡೆಯಲಿದ್ದು ಸಭೆಯು ಸಂಪೂರ್ಣ ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಿದ್ಧವಾಗಿದ್ದು ಅನುಮೋದನೆ ಕಾರ್ಯರೂಪಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಬಳಿಕ ಮಾತನಾಡಿದ ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ನಗರಸಭೆ ರೆಸುಲೂಷನ್ ಪಾಸ್ ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯುವ ಮೊದಲು ಸಭೆಯನ್ನು ಅಮಾನ ತ್ತಿನಲ್ಲಿಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
Chikamagaluru DC Meena Nagaraj ನಗರಸಭೆಯಲ್ಲಿ ಬಹುಮತ ಇಲ್ಲವೆಂದು ಈ ಮೊದಲೇ ಜಿಲ್ಲಾಧಿಕಾರಿಗೆ ತಿಳಿಸಲಾಗಿತ್ತು. ಜನರ ತೆರಿಗೆ ಹಣ ಲೂಟಿ ಹೊಡೆಯುವ ಹುನ್ನಾರ ಅನುಮಾನವಿದೆ. ಹೀಗಾಗಿ ನ್ಯಾಯಬದ್ಧ ಯಾವುದೇ ಹೋರಾಟಕ್ಕೆ ಸದಸ್ಯರುಗಳು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಕ್ಷಣ ತಡೆಯಾಜ್ಞೆ ಕೊಡಲು ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಸದಸ್ಯರುಗಳಾದ ಟಿ.ರಾಜಶೇಖ ರ್, ಮಧುಕುಮಾರ್ ರಾಜ್ ಅರಸ್ ಹಾಜರಿದ್ದರು.