Saturday, December 6, 2025
Saturday, December 6, 2025

Coffee Bean ಒಂದೇ ಸಮನೆ ಮಳೆ ಸುರಿದು ಕಾಫಿ ಬೆಳೆ ನಾಶದತ್ತ ಪರಿಹಾರಕ್ಕೆ ಒತ್ತಾಯ

Date:

Coffee Bean ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಾಫಿ ಬೆಳೆ ನೆಲಕಚ್ಚು ತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಬೆಳೆಗಾರರಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.

ಈ ಕುರಿತು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು ಬೆಳೆಗಾರರು ಹಲವಾರು ವರ್ಷಗಳಿಂದ ಪ್ರಕೃತಿ ವಿಕೋಪ ಹಾಗೂ ಸಮಯಕ್ಕೆ ಪರಿಹಾರ ದೊರಕದೇ ಕಷ್ಟ-ನಷ್ಟ ಅನುಭವಿಸುವಂತಾಗಿದೆ. ಇದೀಗ ಕಾಫಿ ಹಣ್ಣು ಕಟಾವಿಗೆ ಸಿದ್ದವಾಗಿರುವ ಸಮಯದಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದೆ ಎಂದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರಾತ್ರಿ-ಹಗಲು ಎನ್ನದೇ ಮಳೆ ಸುರಿದಿದ ಪರಿಣಾಮ ಬೆಳೆಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತೋಟಗಳ ನಿರ್ವಹಣೆ ಸಂಬoಧ ಗೊಬ್ಬರ, ಕೀಟೋಪಕರಣ ಔಷಧಿ ಗಳನ್ನು ಬ್ಯಾಂಕ್‌ನಿoದ ಸಾಲಸೋಲ ಮಾಡಿಕೊಂಡು ತೋಟಕ್ಕೆ ಸಿಂಪಡಿಸಿದ್ದು ಕಟಾವಿಗೆ ಬಂದ ಕಾಫಿ ಸಂಪೂರ್ಣ ನೆಲಕ್ಕುದುರಿದೆ ಎಂದು ಆತಂಕ ವ್ಯಕ್ತಪಡಿಸಿದರು.

Coffee Bean ಇನ್ನುಳಿದ ಅಲ್ಪಸ್ವಲ್ಪ ಕಾಫಿಯು ಕಣಕ್ಕೆ ತಂದoತಹ ವೇಳೆಯಲ್ಲಿ ಧಾರಾಕಾರ ಮಳೆಯಿಂದ ಕರಗುವ ಸ್ಥಿತಿ ತಂದೊಡ್ಡಿದಲ್ಲದೇ ಕಾಫಿ ಗುಣಮಟ್ಟವು ಕುಸಿದಿದೆ. ಈ ಬಗ್ಗೆ ಹಲವಾರು ಭಾರಿ ಕೇಂದ್ರ ಹಾಗೂ ರಾಜ್ಯಸರ್ಕಾರಕ್ಕೆ ಬೆಳೆಗಾರರು ವೇದಿಕೆ ಮೂಲಕ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ಕಾಫಿ ಮಂಡಳಿಯು ಹೋರಾಟದ ಮೂಲಕ ಬೆಳೆಗಾರರಿಗೆ ಪರಿಹಾರ ಹಾಗೂ ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಕಾಫಿ ಬೆಳೆಗಾರರಿಗೆ ಮೂಲ ಸಮಸ್ಯೆಯಾಗಿರುವ ಕಾಫಿ ಒಣಗಿಸುವ ಸಂಬoಧ ಶಾಶ್ವತವಾಗಿ ಸರ್ಕಾರದ ಸಹಾಯಧನದಡಿ ಕಾಫಿ ಒಣಗಿಸುವ ಯಂತ್ರವನ್ನು ಪ್ರತಿ ಬೆಳೆಗಾರರಿಗೆ ನೀಡಬೇಕು. ಈ ಕುರಿತು ಸಂಸ ದರು ಹಾಗೂ ಕಾಫಿ ಮಂಡಳಿಗಳು ಹೆಚ್ಚು ಹೋರಾಟ ಮಾಡಿ ಸಹಾಯಧನ ಕಲ್ಪಿಸಿಕೊಡಬೇಕು ಎಂದು ಒತ್ತಾಯಿ ಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...