Friday, December 5, 2025
Friday, December 5, 2025

Karnataka Sangha Shivamogga ಮಾಧ್ಯಮಗಳಿಂದ ಸಾಮಾಜಿಕ ಪರಿವರ್ತನೆ ಸಾಧ್ಯವೆ? ವಿಷಯ ದ ಬಗ್ಗೆ ಕರ್ನಾಟಕ ಸಂಘದಲ್ಲಿ ಉಪನ್ಯಾಸ

Date:

Karnataka Sangha Shivamogga ಜನವರಿ 13 ರಂದು 5.30ಗೆ ಶಿವಮೊಗ್ಗ ಕರ್ನಾಟಕ ಸಂಘದ ವತಿಯಿಂದ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಬಾರಿ ತಿಂಗಳ ಅತಿಥಿಗಳಾಗಿ ಶಿವಮೊಗ್ಗದ ಪ್ರತಿಷ್ಠಿತ ಕೆ ಲೈವ್ ನ್ಯೂಸ್ ಚಾನಲ್ ಪ್ರಧಾನ ಸಂಪಾದಕರಾದ
ಡಾ. ಎನ್. ಸುಧೀಂದ್ರ ಅವರು ಆಗಮಿಸಲಿದ್ದಾರೆ.
‘ಮಾಧ್ಯಮಗಳಿಂದ ಸಮಾಜ ಪರಿವರ್ತನೆ ಸಾಧ್ಯವೆ?” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಡಾ. ಎನ್. ಸುಧೀಂದ್ರ ಅವರು ಎಂ.ಎ. ಪಿ.ಎಚ್‌ಡಿ. ಪದವೀಧರರು, ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದಿರುವ ಇವರು ಆಲ್ ಇಂಡಿಯಾ ರೇಡಿಯೋದಲ್ಲಿ 35 ವರ್ಷಗಳ ಸೇವೆಯನ್ನು ಸಲ್ಲಿಸಿರುತ್ತಾರೆ. ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ ನಾಟಕ, ರೂಪಕ, ಕೃಷಿರಂಗ ಮತ್ತು ಕಿರುಭಾಷಣ, ಸಂದರ್ಶನ ವಿಭಾಗದ ಆಯೋಜನೆ ಮತ್ತು ನಿರ್ವಹಣೆಯೊಂದಿಗೆ ಹಲವಾರು ನಾಟಕಗಳ ನಿರ್ದೇಶನ ರೂಪಕಗಳ ನಿರ್ಮಾಣದಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸಿರುತ್ತಾರೆ.
ಶ್ರೀಯುತರಿಗೆ ಕೋಮು ಸೌಹಾರ್ದ ವಿಷಯ ಕುರಿತ
ಸ್ನೇಹ ಸೌಹಾರ್ದ ಕಂಪನಿ ಅನ್ ಲಿಮಿಟೆಡ್ ರೂಪಕಕ್ಕೆ ರಾಷ್ಟ್ರೀಯ ಪುರಸ್ಕಾರ, ಲಾಸಾ ಕೌಲ್ ಸ್ಮಾರಕ ಪ್ರಶಸ್ತಿ, ಆಕಾಶವಾಣಿ
ರಾಜ್ಯಮಟ್ಟದ ವಾರ್ಷಿಕ ಸ್ಪರ್ಧೆಯಲ್ಲಿ “ ಇಡಿಸ್ ಇಜಿಪ್ಟ್ ಎಕ್ಸ್ ಪ್ರೆಸ್” ರೂಪಕಕ್ಕೆ ಪುರಸ್ಕಾರ, “ಗಾಂಧಿ ಕನಸಿನ ಹಾದಿಯಲ್ಲಿ” ರೂಪಕಕ್ಕೆ ರಾಜ್ಯಮಟ್ಟದ ಪುರಸ್ಕಾರ, ಫೋನ್ ಇನ್ ನಾಟಕ ರಚನೆ ಮತ್ತು ನಿರ್ದೇಶನಕ್ಕೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪುರಸ್ಕಾರ ಹಾಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಪರಿಸರ ಗೀತೆ ರಚನೆ ಸ್ಪರ್ಧೆಯಲ್ಲಿ ಬಹುಮಾನ ಸಂದಿದೆ.

“ಸಂಪ್ರತಿ” ಇವರ ಕವನ ಸಂಕಲನ. ಬಿಡಿಬಿಡಿಯಾಗಿ ನಾಡಿನ ಮುಖ್ಯ ಮಾಸಪತ್ರಿಕೆಗಳಲ್ಲಿ ಕಥೆ,
ಕವಿತೆಗಳು, ಪ್ರವಾಸ ಲೇಖನಗಳು, ವ್ಯಂಗ್ಯಚಿತ್ರಗಳು ಪ್ರಕಟಣೆಗೊಳ್ಳುತ್ತಿದೆ.

ಪ್ರಸ್ತುತ ಶಿವಮೊಗ್ಗದ ಪ್ರತಿಷ್ಠಿತ “ ಕೆ ಲೈವ್.ನ್ಯೂಸ್ ” (Klive.news) ವೆಬ್ ಪೋರ್ಟಲ್ ನಲ್ಲಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್. ಸುಂದರರಾಜ್ ಅವರು ವಹಿಸಲಿದ್ದಾರೆ.
ಗೌರವ ಕಾರ್ಯದರ್ಶಿಗಳು ಪ್ರೊ. ಆಶಾಲತಾ ಎಂ. ಉಪಸ್ಥಿತರಿರಲಿದ್ದಾರೆ.

Karnataka Sangha Shivamogga ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...