Battle of Koregaon ಸಾಮಾಜಿಕ ಅಸಮಾನತೆ ಶೋಷಣೆಯ ವಿರುದ್ಧ ಧಮನಿತ ಸಮುದಾಯ ವು ಪೇಶ್ವೆ ಸೈನಿಕರ ವಿರುದ್ಧ ವಿಜೇತರಾದ ಕೋರೆಗಾಂವ್ ದಿನವಾದ ಜ.1 ರಂದು ನಗರದ ಆಜಾದ್‌ಪಾರ್ಕ್ ವೃತ್ತ ದಲ್ಲಿ ದಸಂಸ (ಕೃಷ್ಣಪ್ಪ ಸ್ಥಾಪಿತ) ಮುಖಂಡರುಗಳು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಚರಿಸಿದರು.
ಈ ವೇಳೆ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ 1818ರ ಜ.1 ರಂದು ಪೇಶ್ವೆಯರ ವಿರುದ್ಧ ಸಿದ್ದನಾಕ ನಾಯಕತ್ವದಲ್ಲಿ 500 ಮಹರ್ ಸೈನಿಕರು ಪೇಶ್ವೆ ಬಾಜಿರಾವ್ 28 ಸಾವಿರ ಸೈನಿಕರನ್ನು ಸೋಲಿಸಿದ ವಿಜ ಯೋತ್ಸವದ ದಿನದ ಅಸ್ಪಶ್ಯತೆ ವಿರುದ್ಧದ ಮೊದಲ ಸಂಗ್ರಾಮ ಭೀಮಾ ಕೋರೆಗಾಂವ್ ವಿಜಯೋತ್ಸವವಾಗಿದೆ ಎಂದು ತಿಳಿಸಿದರು.
ನಾವೆಲ್ಲರೂ ಕೂಡ ಪ್ರಸ್ತುತ ದಿನದಲ್ಲಿ ಸಮಾನತೆಯಿಂದ ಬದುಕುತ್ತಿದ್ದೇನೆ ಎಂದರೆ ಅದಕ್ಕೆ ಮೂಲ ಕಾರಣ ಅಂಬೇಡ್ಕರ್ ಕೊಟ್ಟಂತಹ ಸಿದ್ದಾಂತಗಳು ಹಾಗೂ ಸಿದ್ದನಾಕ ನೇತೃತ್ವದಲ್ಲಿ ನಡೆದ ಭೀಮಾ ಕೋರೆಗಾಂವ್ ಹೋರಾಟ. ಈ ವಿಜಯೋತ್ಸವವನ್ನು ನಾವೆಲ್ಲರೂ ನೆನೆಯಲೇಬೇಕಾದ ವಿಷಯ ಎಂದು ತಿಳಿಸಿದರು.
ಭೀಮಾ ಕೋರೆಗಾಂವ್ ಕದನ ಫಲಿತಾಂಶದಿoದಾಗಿ ಭಾರತದ ಪರಿಶಿಷ್ಟ ಜಾತಿಗಳಲ್ಲಿ ಪೌರಾಣಿಕ ಸ್ಥಾನಮಾ ನವನ್ನು ಗಳಿಸಿತು. ಕೋರೆಗಾಂವ್‌ನಲ್ಲಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತಮಗಾಗಿ ಹೋರಾಡಿದವರ ಸ್ಮರಣಾರ್ಥವಾಗಿ ಒಬೆಲಿಸ್ಕ್ ಅಥವಾ ವಿಜಯಸ್ತಂಭವನ್ನು ಸ್ಥಾಪಿಸಿತು ಎಂದರು.
ದಸoಸ ಮುಖಂಡ ಕಬ್ಬಿಕೆರೆ ಮೋಹನ್‌ಕುಮಾರ್ ಮಾತನಾಡಿ ಭೀಮಾ ಕೋರೆಗಾಂವ್ ಯುದ್ಧದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಗೆದ್ದಿತು. ಮಹಾರ್ ಸಮುದಾಯದ ಜನರು ಬ್ರಿಟಿಷರೊಂದಿಗೆ ಹೋರಾಡುವ ಮೂಲಕ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ತಿಳಿಸಿದರು.
Battle of Koregaon ಕೋರೆಗಾಂವ್ ಕದನ ಭಾರತದ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿದೆ. ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳಕು ಹಾಕಿಕೊಂಡ ಸ್ಥಳವಿದು. ಮಹಾರ್ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ವಿಲ್ಲದೆ ಪೇಳ್ವೆಗಳ ಸೈನ್ಯದ ವಿರುದ್ಧ ನಿರಂತರ 12 ಗಂಟೆ ಕಾದಾಡಿದ ಸ್ಮರಣೀಯ ಕದನವಿದು ಎಂದರು.
ಈ ಸಂದರ್ಭದಲ್ಲಿ ಬಿಎಸ್‌ಪಿ ಮುಖಂಡರುಗಳಾದ ಕೆ.ಟಿ.ಸುಧಾ, ಗಂಗಾಧರ್, ಮುಖಂಡರುಗಳಾದ ಎಂ.ಎಲ್.ಮೂರ್ತಿ, ರಘು, ರೇಣುಕಾರಾಧ್ಯ, ಆರದವಳ್ಳಿ ಮೋಹನ್, ಮೂರ್ತಿ, ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಪ್ಪ ಮತ್ತಿತರರು ಹಾಜರಿದ್ದರು.