District Raktanidhi Centre ಚಿಕ್ಕಮಗಳೂರು ನಗರದ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ಕಡವಂತಿ ಗ್ರಾಮ ಸದಸ್ಯನ ಜನ್ಮದಿನದ ಅಂಗವಾಗಿ ಸದಸ್ಯ ಸೇರಿದಂತೆ ಏಳು ಮಂದಿ ಯುವಕರು ರಕ್ತದಾನ ಮಾಡುವ ಜೊತೆಗೆ ಅಂಗಾಂಗ ದಾನದ ಪತ್ರಕ್ಕೆ ಶನಿವಾರ ಸಹಿ ಹಾಕಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ತಾಲ್ಲೂಕಿನ ಖಾಂಡ್ಯ ಹೋಬಳಿಯ ಕಡವಂತಿ ಗ್ರಾ.ಪಂ. ಸದಸ್ಯ ಬೊಗಸೆ ವಿನೋದ್‌ರವರ ಜನ್ಮದಿನ ದಿನದ ಪ್ರಯುಕ್ತ ಜಿಲ್ಲಾ ಸರ್ಜನ್ ಹಾಗೂ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳ ನೇತೃತ್ವದಲ್ಲಿ ವಿನೋದ್ ಸೇರಿದಂತೆ ರಂಗಸ್ವಾಮಿ, ರಂಜಿತ್, ಸಿಂದುಕುಮಾರ್, ಅಸೈನರ್‌ಆಲಿ, ಪರಮೇಶ್ ಹಾಗೂ ಶ್ರೀಜಿತ್ ಸೇರಿ ಒಟ್ಟು ಏಳು ಮಂದಿ ಅಂಗಾಂಗ ದಾನ ಪತ್ರಕ್ಕೆ ಸಹಿ ಹಾಕಿದರು.
ಈ ಕುರಿತು ಮಾತನಾಡಿದ ಸರ್ಜನ್ ಮೋಹನ್‌ಕುಮಾರ್ ಸಮಾಜದ ಪ್ರತಿ ವ್ಯಕ್ತಿಗಳು ಜನ್ಮದಿನವನ್ನು ರಕ್ತದಾನ ಸೇರಿದಂತೆ ಅಂಗಾಂಗ ದಾನದ ಮೂಲಕ ಆಚರಿಸಿದರೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕ್ಷೀಣಿಸಿ ಸುಸ್ಥಿರ ಬದುಕು ಎಲ್ಲರಿಗೂ ಲಭ್ಯವಾಗಲಿದ್ದು ಆ ಸಾಲಿನಲ್ಲಿ ವಿನೋದ್ ಹಾಗೂ ತಂಡ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ದೇಶದ ಪ್ರಜೆಗಳು ಅಂಗಾಂಗ ದಾನದ ಮಹತ್ತರ ಕಾರ್ಯದಲ್ಲಿ ಮುಂದಾಗಬೇಕಿದೆ. ಇದರಿಂದ ಲಿವರ್, ಶ್ವಾಸಕೋಶ ಹಾಗೂ ಹೃದಯ ಕಸಿ ಸೇರಿದಂತೆ ಅನೇಕ ಚಿಕಿತ್ಸೆಗಳಿಗೆ ಅನುಕೂಲವಾಗಲಿದೆ. ಪ್ರಸ್ತುತ ಖಾಸಗೀ ಆಸ್ಪತ್ರೆ ಗಳಲ್ಲೂ ಹೃದಯ ಕಸಿ ಚಿಕಿತ್ಸೆ ಲಭ್ಯವಿದ್ದು ಮುಂಬರುವ ದಿನದಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
District Raktanidhi Centre ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ ಮಾತನಾಡಿ ಮನುಷ್ಯ ವರ್ಷಕ್ಕೊಮೆಯಾದರೂ ರಕ್ತದಾನ ಮಾಡಿದರೆ ಆರೋಗ್ಯಯುತ ಬದುಕು ಲಭಿಸಲಿರುವ ಹಿನ್ನೆಲೆಯಲ್ಲಿ ಇಂದು ರಕ್ತದಾನ ಮಾಡಲಾಗುತ್ತಿದ್ದು ಈ ವರ್ಷದಿಂದ ತಾವು ಸೇರಿದಂತೆ ತಮ್ಮ ಬೆಂಬಲಿಗರು ಅಂಗಾAಗ ದಾನದ ಪತ್ರಕ್ಕೂ ಸಹಿ ಹಾಕಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಇದೇ ವೇಳೆ ಪ್ಯಾಂಕ್ರಿಸ್, ಬ್ಲಡ್ ವೆಸೆಲ್ಸ್, ಲಿವರ್, ಕಿಡ್ನಿ, ಹಾರ್ಟ್, ಹಾರ್ಟ್ ವೆಜಲ್ಸ್, ನರೂಸ್, ಅವರು ಬೋನ್ ಮ್ಯಾರೋ, ಕಣ್ಣು, ಲಂಗ್ಸ್, ಬೋನ್ಸ್ ಅಂಗಾಂಗ ದಾನವನ್ನು ಮಾಡಿ, ಬ್ಲಡ್ ದಾನವನ್ನು ಮಾಡಲಾಯಿತು.