Tuesday, October 1, 2024
Tuesday, October 1, 2024

Rotary Shivamogga East ಸಮಾಜದ ಓರೆಕೋರೆಗಳನ್ನ ತಿದ್ದುವಲ್ಲಿ ಕುವೆಂಪು ಅವರ ಸಾಹಿತ್ಯ ಪಾತ್ರವಹಿಸಿದೆ- ಎಂ.ಚಂದ್ರಶೇಖರಯ್ಯ

Date:

ಕುವೆಂಪು ಅವರ ಸಾಹಿತ್ಯ ಕೃಷಿ ಹಾಗೂ ಅವರ ತತ್ವ ಆದರ್ಶ ಗುಣಗಳು, ಅವರ ಬರವಣಿಗೆ ವಿಮರ್ಶೆ ಇಂದಿಗೂ ಪ್ರಸ್ತುತ, ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಕುವೆಂಪುರವರು ರಸಋಷಿ, ಜಗದ ಕವಿ, ಯುಗದ ಕವಿ ಆಗಿದ್ದಾರೆ ಎಂದು ನಿವೃತ್ತ ಡಿ.ಪಿ.ಐ., ರೊ. ಚಂದ್ರಶೇಖರಯ್ಯ ಎಂ., ಇವರು ಅಭಿಪ್ರಾಯ ಪಟ್ಟರು.

Rotary Shivamogga East ಅವರು ಇಂದು ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕುವೆಂಪು ಜನ್ಮದಿನದ ಆಚರಣೆ ಸಂಭ್ರಮದಲ್ಲಿ ಮಾತನಾಡಿದರು. ಕುವೆಂಪು ಅವರು ಧೈತ್ಯ ಪ್ರತಿಭೆ ಹಾಗೂ ವಿಶ್ವ ಮಾನವ ಅವರ ರಚನೆಗಳು ಇಂದಿಗೂ ಪ್ರಸ್ತುತ ಹಾಗೂ ದಾರಿ ದೀಪವಾಗಿದೆ. ಸಮಾಜದ ಒರೆಕೊರೆಗಳನ್ನು ತಿದ್ದುವಲ್ಲಿ ಕುವೆಂಪುರವರ ಸಮಗ್ರ ಸಾಹಿತ್ಯ ಮಹತ್ವವಾದ ಪಾತ್ರ ವಹಿಸಿದೆ. ಕುವೆಂಪುರವರು ರಚಿಸಿದ ರಾಮಾಯಣ ದರ್ಶನಂ, ಬೆರಳಿಗೆ ಕೊರಳ್, ಜಲಗಾರ, ರಕ್ತಾಕ್ಷಿ, ಕಾವ್ಯ, ಕವಿತೆ, ನಾಟಕಗಳು ಜನರ ಕಣ್ಣನ್ನು ತೆರೆಸಿವೆ. ಇಂತಹ ಶ್ರೇಷ್ಠ ಕವಿ ನಮ್ಮ ಜಿಲ್ಲೆಯಲ್ಲಿ ಜನಿಸಿರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆ. ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಮತ್ತು ಅವರು ಆಚರಣೆಗೆ ತಂದಿರುವ ಮಂತ್ರ ಮಾಂಗಲ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ರೊ. ಸತೀಶ್‌ಚಂದ್ರ ವಹಿಸಿ ಮಾತನಾಡುತ್ತಾ, ಕುವೆಂಪುರವರು ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗದೆ, ನಮ್ಮ ರಾಷ್ಟçದಲ್ಲೂ ಹೆಸರು ತಂದುಕೊಟ್ಟ ಪ್ರಥಮ ರಾಷ್ಟ್ರಕವಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ನಿಟ್ಟಿನಲ್ಲಿ ನಾವು ನಮ್ಮ ಮುಂದಿನ ಪೀಳಿಗೆಗೆ ಅವರ ನಡೆನುಡಿಗಳ ಸಾಧನೆಗೆ ಪರಿಚಯಿಸಬೇಕಾಗಿದೆ ಎಂದು ನುಡಿದರು.

Rotary Shivamogga East ಇದೇ ಸಂದರ್ಭದಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಎಲ್ಲ ರೋಟರಿ ಬಂಧುಗಳು ಪುಷ್ಪ ನಮನವನ್ನು ಸಲ್ಲಿಸಿ ಕುವೆಂಪು ಗೀತೆಗಳನ್ನು ಹಾಡಿದರು.

ವೇದಿಕೆಯಲ್ಲಿ ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್ ಕುಮಾರ್, ವಸಂತ್ ಹೋಬಳಿದ್ದಾರ್, ಶ್ರೀಕಾಂತ್ ಎನ್.ಹೆಚ್., ಅರುಣ್ ದೀಕ್ಷಿತ್, ಮಂಜುನಾಥ್ ಕದಂ, ಕಿಶೋರ್ ಕುಮಾರ್ ಡಿ., ಸುಮತಿ ಜಿ. ಕುಮಾರಸ್ವಾಮಿ, ಶಶಿಕಾಂತ್ ನಾಡಿಗ್, ಎ.ಟಿ. ಸುಬ್ಬೇಗೌಡ, ಸಿ.ಕೆ. ವಿಜಯ್ ಕುಮಾರ್, ಗಣೇಶ್ ಎಸ್., ದಿವ್ಯ ಪ್ರವೀಣ್, ಶೇಷಗಿರಿ, ಮಾದೇವಸ್ವಾಮಿ ಹಾಗೂ ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್., ಇವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...